ಸಮಾಜವಾದಿ ಪಕ್ಷದ ಮುಖಂಡನ ಕಾರನ್ನು 500 ಮೀಟರ್ ದೂರ ಎಳೆದೊಯ್ದ ಭಾರೀ ಟ್ರಕ್‌ : ದೃಶ್ಯ ಸೆರೆ

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ದೇವೇಂದ್ರ ಸಿಂಗ್ ಯಾದವ್ ಅವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು 500 ಮೀಟರ್ ಗೂ ಹೆಚ್ಚು ದೂರ ಎಳೆದೊಯ್ದ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಡೆದಿದೆ.
ದೇವೇಂದ್ರ ಯಾದವ್ ಅವರು ಮೈನ್‍ಪುರಿಯ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದು, ಪಕ್ಷದ ಕಚೇರಿಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ವಿಲಕ್ಷಣ ಅಪಘಾತದ ವೀಡಿಯೊವು ವಾಹನ ನಿಲ್ಲಿಸುವ ಮೊದಲು ಸ್ವಲ್ಪ ದೂರದವರೆಗೆ ಎಳೆಯುವುದನ್ನು ತೋರಿಸುತ್ತದೆ. ವಾಹನ ನಿಂತ ತಕ್ಷಣ ರಸ್ತೆಯಲ್ಲಿದ್ದ ಹಲವರು ಸ್ಥಳಕ್ಕೆ ಧಾವಿಸಿ ಸಮಾಜವಾದಿ ಪಕ್ಷದ ನಾಯಕನನ್ನು ರಕ್ಷಿಸಿದ್ದಾರೆ.

ಭಾನುವಾರ ರಾತ್ರಿ ಯಾದವ್ ಅವರು ಕರ್ಹಾಲ್ ರಸ್ತೆಯ ಮೂಲಕ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಮೈನ್‌ಪುರಿ ಸದರ್ ಕೊಟ್ವಾಲಿ ಪ್ರದೇಶದ ಭದಾವರ್ ಹೌಸ್ ಬಳಿ ಈ ಘಟನೆ ನಡೆದಿದೆ. ಘಟನೆ ವೇಳೆ ಕಾರಿನಲ್ಲಿ ಒಬ್ಬರೇ ಇದ್ದರು. ಯಾದವ್ ಅವರು ಮೈನ್‌ಪುರಿಯ ಸಮಾಜವಾದಿ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದಾರೆ.

ಪೊಲೀಸರ ಪ್ರಕಾರ, ಟ್ರಕ್ ಚಾಲಕ ಇಟಾವಾ ಮೂಲದವನು. ಸಮಾಜವಾದಿ ಪಕ್ಷದ ನಾಯಕನ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ, ನಂತರ ಅದನ್ನು 500 ಮೀಟರ್‌ಗೂ ಹೆಚ್ಚು ಎಳೆದುಕೊಂಡು ಹೋಗಿದೆ. ಇಟಾವಾದಿಂದ ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ಎಸ್‌ಪಿ ಮೈನ್‌ಪುರಿ ಕಮಲೇಶ್ ದೀಕ್ಷಿತ್ ಹೇಳಿದ್ದಾರೆ.
ಅಪಘಾತದ ನಂತರ, ಯಾದವ್ ಮೈನ್‌ಪುರಿ ಸದರ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement