ಬಿಹಾರದಲ್ಲಿ ಮುರಿದು ಬಿದ್ದ ಜೆಡಿಯು-ಬಿಜೆಪಿ ಮೈತ್ರಿ, ಹೊರನಡೆದ ಬಿಹಾರ ಸಿಎಂ ನಿತೀಶಕುಮಾರ : ಇಂದು ಸಂಜೆ 4 ಗಂಟೆಗೆ ರಾಜ್ಯಪಾಲರ ಭೇಟಿ

ಪಾಟ್ನಾ: ಬೃಹತ್ ಬೆಳವಣಿಗೆಯಲ್ಲಿ, ಮಂಗಳವಾರ ಜೆಡಿಯು ಅಧಿಕೃತವಾಗಿ ಎನ್‌ಡಿಎಯಿಂದ ಹೊರನಡೆದಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಬಾರಿಗೆ ಯು-ಟರ್ನ್ ತೆಗೆದುಕೊಂಡರು. ಮೂಲಗಳ ಪ್ರಕಾರ, ಕುಮಾರ್ ಅವರ ನಿವಾಸದಲ್ಲಿ ನಡೆದ ಶಾಸಕರು ಮತ್ತು ಸಂಸದರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬೆಳವಣಿಗೆ ಜೆಡಿಯುಗೆ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳೊಂದಿಗೆ ಸರ್ಕಾರ ರಚಿಸಲು ದಾರಿ ಮಾಡಿಕೊಟ್ಟಿದೆ. ಸಂಜೆ 4 ಗಂಟೆಗೆ ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿ ಮಾಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. 2024 ರಲ್ಲಿ ಪ್ರಧಾನಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆಯ ಮೇಲೆ ಕುಮಾರ್ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮತ್ತು ಇತರ ಮಹಾಘಟಬಂಧನ್ ಘಟಕಗಳ ಜೊತೆಗೂಡಿ ಇಂದು, ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಸಂಜೆ 4 ಗಂಟೆಗೆ ಭೇಟಿಯಾಗಲಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡ ಮಹಾಘಟಬಂಧನ್ ಸರ್ಕಾರ ರಚನೆಗೆ ಹಾದಿ ದಾರಿ ಮಾಡಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆಡಿ(ಯು) ಜೊತೆಗಿನ ಮೈತ್ರಿಯ ಬಗೆಗಿನ ವರದಿಗಳ ನಡುವೆ, ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಹೊಸ ಮೈತ್ರಿಕೂಟದ ಸರ್ಕಾರದಲ್ಲಿ ಗೃಹ ಖಾತೆ ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಾಲು ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಕೂಡ ಹೊಸ ಸರ್ಕಾರಕ್ಕೆ ಸೇರ್ಪಡೆಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಬಿಹಾರದಲ್ಲಿ ಸರ್ಕಾರ ರಚನೆಗೆ ಮಹಾಘಟಬಂಧನ್‌ ಹಕ್ಕು ಮಂಡಿಸುವ ಸಾಧ್ಯತೆಯ ಬಗ್ಗೆ ಬೆಳವಣಿಗೆ ಸುಳಿವು ನೀಡಿತ್ತು. ರಾಜಭವನದ ಹೊರಗೆ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದೆ. ಕಾಂಗ್ರೆಸ್, ಆರ್‌ಜೆಡಿ ಮತ್ತು ಎಡಪಕ್ಷಗಳು ಬೆಂಬಲ ಪತ್ರದೊಂದಿಗೆ ಸಿದ್ಧವಾಗಿವೆ ಎಂದು ಹೇಳಲಾಗಿದೆ.
ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಿಖುಭಾಯ್ ದಲ್ಸಾನಿಯಾ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಅವರು ಪಾಟ್ನಾದಲ್ಲಿರುವ ಡಿಸಿಎಂ ತಾರಕಿಶೋರ್ ಪ್ರಸಾದ್ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಇದೇವೇಳೆ ಎನ್‌ಡಿಎ ಮೈತ್ರಕೂಟದ ಮತ್ತೊಂದು ಹಮ್‌ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಿತೇನ್‌ ರಾಮ್ ಮಾಂಜಿ ಅವರು ಸಂಜೆ 4 ಗಂಟೆಗೆ ತಮ್ಮ ಪಕ್ಷದ ಸಭೆ ಕರೆದಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿಗೆ ದೊಡ್ಡ ಹಿನ್ನಡೆ : ಎಎಪಿ ಅಭ್ಯರ್ಥಿಯನ್ನು ಚಂಡೀಗಢ ಮೇಯರ್ ಎಂದು ಘೋಷಿಸಿದ ಸುಪ್ರೀಂ ಕೋರ್ಟ್ : ಹಿಂದಿನ ಫಲಿತಾಂಶ ರದ್ದು

ಜೆಡಿಯು-ಬಿಜೆಪಿ ಭಿನ್ನಾಭಿಪ್ರಾಯ
2020 ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 125 ಸ್ಥಾನಗಳಲ್ಲಿ ಎನ್‌ಡಿಎ ವಿಜಯಶಾಲಿಯಾದರೆ ಮಹಾಘಟಬಂಧನ್ 110 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ, ಆರ್‌ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಕ್ರಮವಾಗಿ 74, 75, 43 ಮತ್ತು 19 ಸ್ಥಾನಗಳನ್ನು ಗೆದ್ದಿವೆ. ಎಲ್‌ಜೆಪಿ ಏಕಾಂಗಿ ಸ್ಥಾನವನ್ನು ಪಡೆದಿದ್ದರೂ 32 ಸ್ಥಾನಗಳಲ್ಲಿ ಜೆಡಿಯು ಭವಿಷ್ಯವನ್ನು ಹಾಳುಮಾಡಿದೆ ಎಂದು ನಂಬಲಾಗಿದೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಜೆಡಿಯುಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರಿಂದ ಮೈತ್ರಿಯಲ್ಲಿ ಜೆಡಿಯು ವರ್ಚಸ್ಸು ಕಡಿಮೆಯಾಗಿದೆ ಎಂದು ಗ್ರಹಿಸಲಾಗಿದೆ.
ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್ ವಿರುದ್ಧ ಭ್ರಷ್ಟಾಚಾರ ಆರೋಪದ ನಂತರ ನಿತೀಶ್ ಕುಮಾರ್ ಅವರ ಪಕ್ಷ ಮತ್ತು ಬಿಜೆಪಿ ನಡುವಿನ ಘರ್ಷಣೆ ಹೆಚ್ಚಾಯಿತು, ಆರ್‌ಸಿಪಿ ಸಿಂಗ್‌ ಅವರಿಗೆ ಶೋಕಾಸ್ ನೋಟಿಸ್ ನೀಡಿದ ನಂತರ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದರು. ಭಾನುವಾರ ಜೆಡಿಯುಗೆ ರಾಜೀನಾಮೆ ಘೋಷಿಸಿದ ನಂತರ, ಸಿಂಗ್ ಪಕ್ಷವನ್ನು ‘ಮುಳುಗುತ್ತಿರುವ ಹಡಗು’ ಎಂದು ಕರೆದರು. ಮತ್ತೊಂದೆಡೆ, ಆರ್‌ಸಿಪಿ ಸಿಂಗ್‌ ಅವರ ಬಿಜೆಪಿಯೊಂದಿಗಿನ ನಿಕಟತೆ ಜೆಡಿಯು ಕೆರಳಲು ಕಾರಣವಾಯಿತು. ಬಿಜೆಪಿಯು ಅವರನ್ನು ಎಲ್‌ಜೆಪಿ ಮಾಜಿ ಮುಖ್ಯಸ್ಥ ಚಿರಾಗ್ ಪಾಸ್ವಾನ್‌ನಂತೆ ಬಳಸಿಕೊಳ್ಳಲು ಯೋಜಿಸುತ್ತಿದೆ ಎಂದು ಹೇಳಿಕೊಂಡಿದೆ.

ಪ್ರಮುಖ ಸುದ್ದಿ :-   ಶಿರಸಿ : ಸ್ವರ್ಣವಲ್ಲೀ‌ ಮಠದ ಶಿಷ್ಯ ಸ್ವೀಕಾರ ಮಹೋತ್ಸವ ; ಭಕ್ತರಿಗೆ ಮಾತೃ ಭೋಜನ ಭಾಗ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement