ನೋಯ್ಡಾ ಪೊಲೀಸ್‌ ಆಯುಕ್ತರಿಗೆ ಲೀಗಲ್ ನೋಟಿಸ್ ಕಳುಹಿಸಿದ ಎಸ್‌ಪಿ ನಾಯಕ ಮೌರ್ಯ, 11.50 ಕೋಟಿ ರೂ.ಗಳ ನಷ್ಟಕ್ಕೆ ಬೇಡಿಕೆ

ನವದೆಹಲಿ: ಶ್ರೀಕಾಂತ್ ತ್ಯಾಗಿ ಪ್ರಕರಣದಲ್ಲಿ ಆಗಸ್ಟ್ 9 ರಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ನೋಯ್ಡಾ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಈ ಹಿಂದೆ ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಸಂಬಂಧ ಹೊಂದಿದ್ದ ಮೌರ್ಯ ಅವರು 11.5 ಕೋಟಿ ರೂಪಾಯಿ ಪರಿಹಾರವನ್ನು ಕೋರಿದ್ದಾರೆ.
ಮಂಗಳವಾರ ನೋಯ್ಡಾ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಶ್ರೀಕಾಂತ್ ತ್ಯಾಗಿಯನ್ನು ಬಂಧಿಸಲಾಗಿದೆ. ಆತನ SUV ಯಲ್ಲಿ ಉತ್ತರ ಪ್ರದೇಶ ಸರ್ಕಾರದ ಚಿಹ್ನೆಯನ್ನು ಅನಧಿಕೃತವಾಗಿ ಬಳಸಿದ ಆರೋಪದ ಮೇಲೆ ವಂಚನೆ ಪ್ರಕರಣವನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಸ್ವಾಮಿ ಪ್ರಸಾದ್ ಮೌರ್ಯ ಅವರು ಉತ್ತರ ಪ್ರದೇಶದ ಸರ್ಕಾರದ ಸ್ಟಿಕ್ಕರ್ ಅನ್ನು ಒದಗಿಸಿದ್ದಾರೆ ಎಂದು ವಿಚಾರಣೆಯ ಸಮಯದಲ್ಲಿ ತ್ಯಾಗಿ ಬಹಿರಂಗಪಡಿಸಿದ್ದ ಎಂದು ಪೊಲೀಸ್‌ ವಿಚಾರಣೆ ವೇಳೆ ತಿಳಿಸಿದ್ದ ಎಂದು ಪೊಲೀಸರು ಹೇಳಿದ್ದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಮಿಷನರ್ ಅಲೋಕ್ ಸಿಂಗ್, ಶ್ರೀಕಾಂತ ತ್ಯಾಗಿ ತನ್ನ ವಾಹನವೊಂದರಲ್ಲಿ ಗೌರವಾನ್ವಿತ ಶಾಸಕರಿಗೆ ನೀಡುವ ಸ್ಟಿಕರ್ ಅನ್ನು ಹೊಂದಿದ್ದರ. ತ್ಯಾಗಿ ಈ ಸ್ಟಿಕ್ಕರ್ ಅನ್ನು ತಮ್ಮ ಸಹವರ್ತಿ ಸ್ವಾಮಿ ಪ್ರಸಾದ್ ಮೌರ್ಯ ತನಗೆ ನೀಡಿದ್ದಾರೆ ಎಂದು ವಿಚಾರಣೆಯ ಸಂದರ್ಭದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಹೇಳಿದ್ದರು.
ನೀವು ನನ್ನ ಕಕ್ಷಿದಾರನ ವಿರುದ್ಧ ಹೊರಿಸಿರುವ ಆರೋಪಗಳು ಸುಳ್ಳು, ನನ್ನ ಕಕ್ಷಿದಾರನ ಮಾನಹಾನಿ ಮಾಡುವ ಉದ್ದೇಶದಿಂದ ಹೇಳಲಾಗಿದೆ ನನ್ನ ಕಕ್ಷಿದಾರನು ನಿಮ್ಮ ವಿರುದ್ಧ ಕ್ರಿಮಿನಲ್ ಕ್ರಮವನ್ನು ಪ್ರಾರಂಭಿಸುವ ಕಾನೂನು ಹಕ್ಕನ್ನು ಕಾಯ್ದಿರಿಸಿದ್ದಾ ಎಂದು ಮೌರ್ಯ ಅವರ ವಕೀಲರು ಕಳುಹಿಸಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಬೇಷರತ್ ಕ್ಷಮೆಯಾಚಿಸಬೇಕು ಎಂದು ನೋಯ್ಡಾ ಪೊಲೀಸ್‌ ಆಯುಕ್ತರನ್ನು ನೋಟಿಸ್ ಒತ್ತಾಯಿಸಿದೆ. ಮೌರ್ಯ ಅವರು ಮಾನನಷ್ಟ, ಮಾನಸಿಕ ಹಿಂಸೆ, ಸಂಕಟ ಮತ್ತು ಅವರ ಮತ್ತು ಅವರ ಕುಟುಂಬದ ಪ್ರತಿಷ್ಠೆಗೆ ಉಂಟಾದ ಹಾನಿಯನ್ನು ಸಹ ಕೋರಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 'ನ್ಯಾಯ' ವಿಷಯದ ಹೊಸ ಪ್ರಚಾರ ಗೀತೆ ಬಿಡುಗಡೆ ಮಾಡಿದ ಕಾಂಗ್ರೆಸ್‌ | ವೀಡಿಯೊ ವೀಕ್ಷಿಸಿ

15 ದಿನಗಳೊಳಗೆ 11.50 ಕೋಟಿ ರೂ.ನೀಡಬೇಕು
11.50 ಕೋಟಿ ಪರಿಹಾರ ನೀಡುವಂತೆ ಸಮಾಜವಾದಿ ಪಕ್ಷದ ಮುಖಂಡರು ಆಗ್ರಹಿಸಿದ್ದಾರೆ. “ಈ ಸೂಚನೆಯನ್ನು ಸ್ವೀಕರಿಸಿದ 15 ದಿನಗಳಲ್ಲಿ ನೀವು ಮೇಲಿನ ಬೇಡಿಕೆಗಳನ್ನು ಅನುಸರಿಸಬೇಕು ಮತ್ತು ನನ್ನ ಕಕ್ಷಿದಾರರಿಗೆ 11.50 ಕೋಟಿ ರೂ.ಗಳನ್ನು ಪಾವತಿಸಬೇಕು, ತಪ್ಪಿದಲ್ಲಿ ಕಾನೂನಿನ ಪ್ರಕಾರ ನಿಮ್ಮ ವಿರುದ್ಧ ಸೂಕ್ತ ಕ್ರಿಮಿನಲ್ ಮತ್ತು ಸಿವಿಲ್ ಕ್ರಮಗಳನ್ನು ಪ್ರಾರಂಭಿಸುವುದು ನನ್ನ ಕಕ್ಷಿದಾರರಿಗೆ ಅನಿವಾರ್ಯವಾಗುತ್ತದೆ ಎಂದು ತಿಳಿಸಲಾಗಿದೆ.
ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಮೌರ್ಯ, ಈ ವರ್ಷದ ಆರಂಭದಲ್ಲಿ ವಿಧಾನಸಭೆಗೆ ಮುಂಚೆಯೇ ಪಕ್ಷವನ್ನು ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ್ದರು.
ಶ್ರೀಕಾಂತ ತ್ಯಾಗಿ ಸ್ವಾಮಿ ಮೌರ್ಯ ಅವರ ಸಹಾಯಕರಾಗಿದ್ದರು ಮತ್ತು ಇತ್ತೀಚಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅಖಿಲೇಶ್ ಯಾದವ್ ಅವರ ಪಕ್ಷಕ್ಕೆ ಸೇರಿದಾಗ ತ್ಯಾಗಿ ಸಹ ಮೌರ್ಯ ಅವರೊಂದಿಗೆ ಪಕ್ಷ ತೊರೆದಿದ್ದರು ಎಂದು ಬಿಜೆಪಿ ಹೇಳಿಕೊಂಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement