ಪ್ರೇಯಸಿ-ಸಹಚರನಿಗೆ ಚಾಕುವಿನಿಂದ ಇರಿದ ಪ್ರೇಮಿ

ಮಡಿಕೇರಿ: ಕೊಡಗು ಸಮೀಪದ ಕುಶಾಲನಗರದ ಜನಪ್ರಿಯ ಪ್ರವಾಸಿ ತಾಣ ನಿಸರ್ಗಧಾಮದಲ್ಲಿ ತ್ರಿಕೋನ ಪ್ರೇಮ ರಕ್ತಪಾತದಲ್ಲಿ ಅಂತ್ಯವಾಗಿದೆ.
ಕೊಪ್ಪ ಗ್ರಾಮದ ವಿಜಯಕುಮಾr (22) ಎಂಬಾತ ತನ್ನ ಗೆಳತಿ ಮತ್ತು ಆಕೆಯ ಸಹಚರನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕುಶಾಲನಗರದ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ವಿಜಯಕುಮಾರ್, ಮಾದಪಟ್ಟಣದ ಕಾಲೇಜು ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, ಇಬ್ಬರೂ ದೂರವಾಣಿ ಸಂಭಾಷಣೆ ನಡೆಸುತ್ತಿದ್ದರು ಎನ್ನಲಾಗಿದೆ. ಶನಿವಾರ ಬೆಳಗ್ಗೆ ಹುಡುಗಿ ವಿಜಯಕುಮಾರಗೆ ಕಾಲೇಜಿಗೆ ಬರುವುದಾಗಿ ತಿಳಿಸಿದ್ದಾಳೆ.

ಆದರೆ, ಸುಳೇಕೋಟೆ ಗ್ರಾಮದ ಮತ್ತೊಬ್ಬನೊಂದಿಗೆ ನಿಸರ್ಗಧಾಮದ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ್ದಾಳೆ. ಈ ವಿಷಯ ತಿಳಿದ ವಿಜಯಕುಮಾರ್ ನಿಸರ್ಗಧಾಮದಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತನೊಂದಿಗೆ ಮುಖಾಮುಖಿಯಾಗಿದ್ದಾನೆ. ಮೂವರ ನಡುವೆ ಜಗಳವಾಗಿ ವಿಜಯ್‌ಕುಮಾರ್‌ ಆ ಯುವತಿ ಹಾಗೂ ಆಕೆಯ ಸ್ನೇಹಿತನಿಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಸರ್ಗಧಾಮದ ಸಿಬ್ಬಂದಿ ಆರೋಪಿಯನ್ನು ಹಿಡಿದು ಬಳಿಕ ಕುಶಾಲನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement