ನ್ಯೂಯಾರ್ಕ್‌ ಕಾರ್ಯಕ್ರಮದಲ್ಲಿ ವೇದಿಕೆಗೆ ನುಗ್ಗಿ ಸಲ್ಮಾನ್ ರಶ್ದಿಯನ್ನು ಇರಿದ ವ್ಯಕ್ತಿಯ ಬಗ್ಗೆ ಕೆಲ ʼಉಗ್ರʼ ಸಂಗತಿಗಳು ಬೆಳಕಿಗೆ

ನ್ಯೂಯಾರ್ಕ್‌ : ಇಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯ ಮೇಲೆಯೇ ದಾಳಿಕೋರನಿಂದ ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡ ಲೇಖಕ ಸಲ್ಮಾನ್ ರಶ್ದಿ ಅವರು ವೆಂಟಿಲೇಟರ್‌ನಲ್ಲಿದ್ದಾರೆ ಮತ್ತು ಅವರು ಕಣ್ಣು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ದಾಳಿಕೋರನನ್ನು ಬಂಧಿಸಲಾಗಿದ್ದು, ಆತನನ್ನು ನ್ಯೂಜೆರ್ಸಿಯ ಹದಿ ಮತರ್ (24) ಎಂದು ಗುರುತಿಸಲಾಗಿದೆ.
ಆರೋಪಿ ಹದಿ ಮತರ್‌ನ ಸಾಮಾಜಿಕ ಮಾಧ್ಯಮದ ಪ್ರಾಥಮಿಕ ತನಿಖೆಯು ಆತ “ಶಿಯಾ ಉಗ್ರವಾದ” ಮತ್ತು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ (IRGC) ಬಗ್ಗೆ ಸಹಾನುಭೂತಿ ಹೊಂದಿದ್ದಾನೆಂದು ತೋರಿಸಿದೆ. ಮತರ್ ಮತ್ತು ಐಆರ್‌ಜಿಸಿ ನಡುವೆ ಯಾವುದೇ ನೇರ ಸಂಪರ್ಕಗಳಿಲ್ಲದಿದ್ದರೂ, 2020 ರಲ್ಲಿ ಹತ್ಯೆಗೀಡಾದ ಇರಾನಿನ ಕಮಾಂಡರ್ ಖಾಸೆಮ್ ಸೊಲೆಮಾನಿ ಚಿತ್ರಗಳನ್ನು ಮತರ್‌ಗೆ ಸೇರಿದ ಸೆಲ್ ಫೋನ್ ಸಂದೇಶ ಕಳುಹಿಸುವ ಅಪ್ಲಿಕೇಶನ್‌ನಲ್ಲಿ ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ.

ನ್ಯೂಯಾರ್ಕ್ ನಗರದ ಸಮೀಪವಿರುವ ಚೌಟೌಕ್ವಾ ಸಂಸ್ಥೆಯಲ್ಲಿ ಕಲಾ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್‌ ರಶ್ದಿ ಭಾಷಣ ಮಾಡಲು ಮುಂದಾದಾಗ ಹದಿ ಮತರ್ ವೇದಿಕೆ ನುಗ್ಗಿ ರಶ್ದಿ ಅವರಿಗೆ ಇರಿದಿದ್ದಾನೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಸಂದರ್ಶಕ ಹೆನ್ರಿ ರೀಸ್ ಅವರ ತಲೆಗೂ ಗಾಯವಾಗಿದೆ.
ಮತರ್ ಒಬ್ಬನೇ ಇದ್ದಾನೆ ಎಂದು ಪೊಲೀಸರು ನಂಬಿದ್ದಾರೆ. ಆದಾಗ್ಯೂ, ಘಟನಾ ಸ್ಥಳದಲ್ಲಿ ಎಲೆಕ್ಟ್ರಾನಿಕ್ ಸಾಧನಗಳೂ ಇದ್ದವು, ಹೀಗಾಗಿ ಅಧಿಕಾರಿಗಳು ವಿವಿಧ ವಸ್ತುಗಳಿಗೆ ಸರ್ಚ್ ವಾರಂಟ್‌ಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ.
ಹದಿ ಮಾತರ್ ನ್ಯೂಜೆರ್ಸಿಯ ಫೇರ್‌ವ್ಯೂನಿಂದ ಬಂದವರು. ಅಧಿಕಾರಿಗಳು ಇನ್ನೂ ಮತರ್ ರಾಷ್ಟ್ರೀಯತೆ ಮತ್ತು ಕ್ರಿಮಿನಲ್ ದಾಖಲೆಗಳು ಯಾವುದಾದರೂ ಇದೆಯೋ ಎಂದು ಪರಿಶೀಲಿಸುತ್ತಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement