ಕಲಘಟಗಿ: 9 ಕಿಮೀ ಉದ್ದದ ರಾಷ್ಟ್ರಧ್ವಜ ಮೆರವಣಿಗೆಯಲ್ಲಿ ಹೊತ್ತು ಸಾಗಿದ ಜನರು

posted in: ರಾಜ್ಯ | 0

ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಇಂದು ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ 9 ಕಿ.ಮೀ. ಉದ್ದದ ರಾಷ್ಟ್ರಧ್ವಜವನ್ನು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಮೆರವಣಿಗೆಯಲ್ಲಿ  ಹೊತ್ತು ಸಾಗಿದರು.
ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ ಜಾಥಾ ತಾಲೂಕಿನ ದಾಸ್ತಿಕೊಪ್ಪದಿಂದ ಆರಂಭಗೊಂಡಿತು.ಸುಮಾರು 12 ಸಾವಿರ ಮಹಿಳೆಯರು ರಾಷ್ಟ್ರಧ್ವಜದೊಂದಿಗೆ ಪೂರ್ಣಕುಂಭ ಹೊತ್ತು ಸಾಗಿದ್ದು ಮತ್ತೊಂದು ವಿಶೇಷವಾಗಿತ್ತು.ತಾಲೂಕಿನ ಹಿರೇಹೊನ್ನಳ್ಳಿ ಬಳಿ ಬಸವಾದಿ ಶರಣರ ಬಳಗದಿಂದ ಬಸವ ಭಾರತದ ಸ್ತಬ್ಧ ಚಿತ್ರ ಗಮನ ಸೆಳೆಯಿತು. ಕಲಘಟಗಿ ಹೊರವಲಯದ ದಾಸ್ತಿಕೊಪ್ಪ‌ ಬ್ರಿಡ್ಜ್ ನಿಂದ ಬೆಳಗ್ಗೆ 11ಕ್ಕೆ ಆರಂಭಗೊಂಡ ಈ ಗಿನ್ನಿಸ್ ದಾಖಲೆಯ ಬೃಹತ್‌ ತಿರಂಗಾ ಧ್ವಜ ಜಾಥಾ, ಕಲಘಟಗಿ ಪಟ್ಟಣದ ಮೂಲಕ ಹಾದು ಗಳಗಿನಗಟ್ಟಿ ಕ್ರಾಸ್‌ವರೆಗೆ ನಡೆಯಿತು.

advertisement

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಇದೀಗ ಗದಗದಲ್ಲಿ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಈ ಧ್ವಜ ಯಾತ್ರೆದಲ್ಲಿ ಅಪಾರ ಜನರು ಭಾಗಿಯಾಗಿದ್ದರು.  ರಾಷ್ಟ್ರಧ್ವಜ 9 ಕಿ.ಮೀ ಉದ್ದ ಹಾಗೂ 9 ಅಡಿ ಅಗಲವಿದ್ದು, ಬೆಂಗಳೂರಿನಲ್ಲಿ 200 ಕಾರ್ಮಿಕರು ನಿರಂತರವಾಗಿ ಒಂದು ತಿಂಗಳಿಂದ ಈ ಧ್ವಜ ತಯಾರಿಸಿದ್ದಾರೆ.
ಕೋಲಾಟ, ಡೊಳ್ಳಿನ ಮಜಲು, ಚಿನ್ನ ಗೊಂಬೆಗಳ ಕುಣಿತ, ಭಜನೆ, ಜಾಂಜ್‌ ಮೇಳ, ಗೌಳಿ ದಡ್ಡಿಯ ಸಾಂಪ್ರದಾಯಿಕ ಕಲಾ ತಂಡಗಳ ಜಾನಪದ ಕಲಾತಂಡಗಳು ಮೆರವಣಿಗೆಗೆ ಇನ್ನಷ್ಟು ಕಳೆ ಕಟ್ಟಿದವು.
ನಂತರ ನಗರದ ಎಪಿಎಂಸಿ ಆವರಣದಲ್ಲಿ ಸ್ಥಾಪಿಸಲಾಗಿದ್ದ ಆರು ಬೃಹತ್‌ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಾನಪದ ಹಾಡುಗಳು, ಸೋಬಾನೆ ಪದ, ಸಿನಿಮಾ ಹಾಡುಗಳ ಗಾಯನ ಕಾರ್ಯಕ್ರಮ ನಡೆಯಿತು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ದಸರಾ ರಜೆ: ನಾಳೆಯಿಂದ ಕೆಎಸ್‌ಆರ್‌ಟಿಸಿಯ ಹೆಚ್ಚುವರಿ 2000 ವಿಶೇಷ ಬಸ್‌ ಸಂಚಾರ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement