ಕೋಲಾರ: ದೇಶದಲ್ಲೇ ಅತಿ ದೊಡ್ಡ ತ್ರಿವರ್ಣ ಧ್ವಜ ಅನಾವರಣ

ಕೋಲಾರ: ದೇಶ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕೋಲಾರ ದೇಶದಲ್ಲೇ ಬೃಹತ್ ಧ್ವಜ ಪ್ರದರ್ಶಿಸುವ ಮೂಲಕ ಲಿಮ್ಕಾ ದಾಖಲೆ ಸ್ಥಾಪಿಸಿದೆ.
ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೃಹತ್ ತ್ರಿವರ್ಣಧ್ವಜ ಅನಾವರಣಗೊಳಿಸಲಾಯಿತು. ಈ ಬೃಹತ್ ತ್ರಿವರ್ಣ ಧ್ವಜಕ್ಕೆ ಸೇನಾ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ ಮಾಡಲಾಯಿತಿ. ಈ ದೃಶ್ಯವನ್ನು ಸಾವಿರಾರು ಜನರು ಕಣ್ತುಂಬಿಕೊಂಡಿದ್ದಾರೆ.
ಜಿಲ್ಲಾಡಳಿತದಿಂದ ಆಯೋಜನೆ ಮಾಡಲಾಗಿದ್ದ ಸ್ವಾಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದೇಶದಲ್ಲೇ ಅತಿ ದೊಡ್ಡದಾದ ತ್ರಿವರ್ಣ ಧ್ವಜವನ್ನು ಅನಾವರಣ ಮಾಡಲಾಯಿತು.

ನೆರೆದಿದ್ದ ಸಾವಿರಾರು ಜನರು ಈ ಬೃಹತ್‌ ರಾಷ್ಟ್ರಧ್ವಜವನ್ನು ನೋಡಿ ಪುಳಕಿತರಾದರು.
ಕೋಲಾರ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ 13,000 ಮೀಟರ್ ಬಟ್ಟೆ ಬಳಸಿ ಒಟ್ಟು 1.30 ಲಕ್ಷ ಚದರಡಿಯ ಬೃಹತ್ತಾದ, 204 ಅಡಿ ಉದ್ದ ಹಾಗೂ 630 ಅಡಿ ಅಗಲದ ಬೃಹತ್ ತ್ರಿವರ್ಣಧ್ವಜ ಪ್ರದರ್ಶಿಸಲಾಯಿತು. 7 ಜನರ ತಂಡ ಸತತವಾಗಿ 8 ದಿನಗಳ ಕಾಲ ಈ ಧ್ವಜ ತಯಾರಿಸಲು ಹಗಲು ರಾತ್ರಿ ಶ್ರಮಿಸಿದ್ದಾರೆ.

ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ
ಬೃಹತ್ ಧ್ವಜ ನಿರ್ಮಾಣದ ನಂತರ ರಕ್ಷಣಾ ಸಚಿವ ರಾಜನಾಥಸಿಂಗ್ ಬೃಹತ್ ಧ್ವಜಕ್ಕೆ ಪುಷ್ಪಾರ್ಚನೆ ಮಾಡಲು ಸೇನಾ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಕಳುಹಿಸಿದ್ದ ಸೇನಾ ಹೆಲಿಕಾಪ್ಟರ್‌ನಿಂದ ದೇಶದ ಬೃಹತ್ ತ್ರಿವರ್ಣ ಧ್ವಜಕ್ಕೆ ನೂರಾರು ಕೆಜಿ ಹೂವಿನ ಪುಷ್ಪಾರ್ಚನೆ ಮಾಡಲಾಯಿತು. ಈ ಅಭೂತ ಪೂರ್ವ ಕ್ಷಣ ನೋಡಲು ಅಪಾರ ಸಂಖ್ಯೆಯ ಜನ ಕ್ರೀಡಾಂಗಣದಲ್ಲಿ ಸೇರಿದ್ದರು. ಈ ಬೃಹತ್ ಧ್ವಜ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿತು ಎಂದು ಹೇಳಲಾಗಿದೆ.
ಅಲ್ಲದೆ, ಇದೇ ಮೊದಲ ಬಾರಿಗೆ ಕೋಲಾರ ನಗರದ ಕ್ಲಾಕ್ ಟವರ್ ಮೇಲೆ ಧ್ವಜಾರೋಹಣ ಮಾಡಲಾಯಿತು. ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜಾ ಸೇರಿದಂತೆ ಜಿಲ್ಲೆಯ ಹಲವು ಅಧಿಕಾರಿಗಳು ಹಾಗೂ ಸಾವಿರಾರು ಶಾಲಾ ಮಕ್ಕಳು ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement