ಅಂಬೆಗಾಲಿಡುವ ಮಗುವೊಂದನ್ನು ಹಾವು ಕಚ್ಚಿದ ನಂತರ ಆ ಮಗು ತಿರುಗಿ ಹಾವನ್ನು ಕಚ್ಚಿದ್ದ ಪರಿಣಾಮ ಆ ಹಾವು ಸಾವಿಗೀಡಾದ ಘಟನೆ ವರದಿಯಾಗಿದೆ…!
ಪೂರ್ವ ಟರ್ಕಿಯ ಬಿಂಗೋಲ್‌ನಲ್ಲಿರುವ ತನ್ನ ಕುಟುಂಬದ ಮನೆಯ ಹಿಂಭಾಗದ ತೋಟದಲ್ಲಿ ಎರಡು ವರ್ಷದ ಮಗು ಆಟವಾಡುತ್ತಿದ್ದಾಗ ಈ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಸ್ಲಿಟರಿ ಕ್ರಿಟರ್ ಹಾವು ತನ್ನ ಕೋರೆಹಲ್ಲುಗಳಿಂದ ಎರಡು ವರ್ಷದ ಹುಡುಗಿಯನ್ನು ಕಚ್ಚಿದ ನಂತರ ಅವಳು ಜೋರಾಗಿ ಕಿರುಚಲು ಪ್ರಾರಂಭಿಸಿದಳು ಎಂದು ದಿ ಸನ್ ವರದಿ ಮಾಡಿದೆ.
ಕಿರುಚಿದ್ದು ಕೇಳಿ ಅಕ್ಕಪಕ್ಕದವರು ಓಡಿಬಂದಾಗ ಮಗುವಿನ ಬಾಯಲ್ಲಿ 50-ಸೆಂಟಿಮೀಟರ್ ಉದ್ದದ ಹಾವು ಇರುವುದನ್ನು ನೋಡಿ ಗಾಬರಿಯಾದರು ಎಂದು ವರದಿ ತಿಳಿಸಿದೆ.
ಪುಟ್ಟ ಬಾಲಕಿ ತನ್ನ ಮನೆ ಹಿಂಭಾಗದ ತೋಟದಲ್ಲಿ ಆಟವಾಡಿಕೊಂಡಿದ್ದಳು. ಈ ವೇಳೆ ಎಲ್ಲಿಂದಲೋ ಒಂದು ಹಾವು ಆಕೆಯ ಬಳಿಗೆ ಬಂದಿದೆ. ಆ ಸಮಯದಲ್ಲಿ ಬಾಲಕಿಯ ಸುತ್ತಮುತ್ತ ಯಾರೂ ಇರಲಿಲ್ಲ. ಬಾಲಕಿ ಆಟವಾಡುತ್ತ ಈ ಹಾವು ಸಹ ಒಂದು ಆಟಿಕೆ ಎಂದು ಭಾವಿಸಿ ಹಾವನ್ನು ಹಿಡಿದಿದ್ದಾಳೆ. ಕೋಪಗೊಂಡ ಹಾವು ಎರಡು ವರ್ಷದ ಪುಟ್ಟ ಬಾಲಕಿಯನ್ನು ಕಚ್ಚಿದೆ. ಇದರಿಂದ ಕೋಪಗೊಂಡ ಅಮಾಯಕ ಬಾಲಕಿ ಸಹ ಹಾವನ್ನು ಹಿಡಿದು ತನ್ನ ಹಾಲು ಹಲ್ಲುಗಳಿಂದ ಕಚ್ಚಿದ್ದಾಳೆ.
ಈ ಘಟನೆಯು ಟರ್ಕಿಯ ಬ್ಯಾಂಗೋಲ್ ನಗರದ ಕಾಂತಾರ್ ಎಂಬ ಪುಟ್ಟ ಗ್ರಾಮದಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಹಾವು ಕಚ್ಚಿ ನೋವು ಅನುಭವಿಸಿದಾಗ ಆಕೆ ಜೋರಾಗಿ ಅಳಲು ಪ್ರಾರಂಭಿಸಿದ್ದಾಳೆ. ಅಳುತ್ತಿರುವ ಬಾಲಕಿಯ ಧ್ವನಿ ಕೇಳಿ ಅಕ್ಕಪಕ್ಕದವರು ಓಡಿ ಬಂದಿದ್ದಾರೆ. ಆದರೆ ಅಲ್ಲಿನ ದೃಶ್ಯವನ್ನು ನೋಡಿ ಅವರು ಒಂದು ಕ್ಷಣ ದಂಗಾಗಿದ್ದಾರೆ. ಸುಮಾರು ಅರ್ಧ ಮೀಟರ್ ಉದ್ದದ ಹಾವನ್ನು ಪುಟ್ಟ ಬಾಲಕಿ ತನ್ನ ಹಲ್ಲುಗಳಲ್ಲಿ ಕಚ್ಚಿ ಹಿಡಿದಿರುವುದನ್ನು ಅವರು ನೋಡಿದ್ದಾರೆ. ಹಾವು ಬಾಲಕಿಯ ಕೆಳತುಟಿಗೆ ಕಚ್ಚಿತ್ತು. ಇದರಿಂದಾಗಿ ಬಾಲಕಿಗೆ ವಿಪರೀತ ನೋವಾಗಿದೆ. ಆ ಸಿಟ್ಟಿನಲ್ಲಿ ಬಾಲಕಿ ಕಿರುಚುತ್ತಲೇ ಹಾವನ್ನು ಕೈಯಲ್ಲಿ ಹಿಡಿದು ತನ್ನ ಹಾಲು ಹಲ್ಲಿನಲ್ಲಿ ಕಚ್ಚಿ ಹಿಡಿದಿದ್ದಾಳೆ.
ಇದನ್ನು ನೋಡಿದ ಅಕ್ಕಪಕ್ಕದವರು ಮೊದಲು ಅವಳಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಬಿಂಗೋಲ್ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಮಗುವನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಯಿತು. ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ, ಆದರೆ ಹಾವು ಮಾತ್ರ ಸ್ಥಳದಲ್ಲೇ ಸಾವಿಗೀಡಾಗಿದೆ. ಪುಟ್ಟ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ನನ್ನ ಮಗುವಿನ ಕೈಯಲ್ಲಿ ಹಾವು ಇತ್ತು, ಅವಳು ಅದರೊಂದಿಗೆ ಆಟವಾಡುತ್ತಿದ್ದಳು ಮತ್ತು ಅದು ಅವಳನ್ನು ಕಚ್ಚಿದೆ ಎಂದು ನಮ್ಮ ನೆರೆಹೊರೆಯವರು ಹೇಳಿದ್ದಾರೆ ಅವಳ ತಂದೆ ಮೆಹ್ಮೆತ್ ಎರ್ಕಾನ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ