ಜಮ್ಮು -ಕಾಶ್ಮೀರದ ಪಹಲ್ಗಾಮ್‌ನಲ್ಲಿ ಬಸ್ ನದಿಗೆ ಬಿದ್ದು 7 ಐಟಿಬಿಪಿ ಯೋಧರ ಸಾವು

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಸೈನಿಕರನ್ನು ಸಾಗಿಸುತ್ತಿದ್ದ ಬಸ್ ನದಿಗೆ ಬಿದ್ದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನ ಕನಿಷ್ಠ ಏಳು ಸೈನಿಕರು ಸಾವಿಗೀಡಾಗಿದ್ದಾರೆ ಮತ್ತು 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮಂಗಳವಾರ ಬಸ್‌ನಲ್ಲಿ ಐಟಿಬಿಪಿಯ 37 ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಇಬ್ಬರು ಪೊಲೀಸರು ಸೇರಿದಂತೆ 39 ಸಿಬ್ಬಂದಿ ಇದ್ದರು. ಚಂದನ್ವಾರಿಯ ಜಿಗ್ ಮೋರ್ಹ್ ಫ್ರಿಸ್ಲಾನ್‌ನಲ್ಲಿ ಬಸ್ ಸ್ಕಿಡ್‌ ಆಗಿ ರಸ್ತೆಯಿಂದ ನದಿಗೆ ಬಿದ್ದಿದೆ.
ಮೃತರನ್ನು ಹೆಡ್ ಕಾನ್‌ಸ್ಟೆಬಲ್ ದುಲಾ ಸಿಂಗ್, ಕಾನ್‌ಸ್ಟೆಬಲ್ ಅಭಿರಾಜ್, ಕಾನ್ಸ್‌ಟೇಬಲ್ ಅಮಿತ್ ಕೆ, ಕಾನ್‌ಸ್ಟೆಬಲ್ ಡಿ ರಾಜ್ ಶೇಖರ್, ಕಾನ್ಸ್‌ಟೇಬಲ್ ಸುಭಾಷ್ ಸಿ ಬೈರ್ವಾಲ್ ಎಂದು ಗುರುತಿಸಲಾಗಿದೆ.
ಏಳು ITBP ಸಿಬ್ಬಂದಿಗಳು ಪ್ರಾಣ ಕಳೆದುಕೊಂಡ ಭೀಕರ ಅಪಘಾತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ದುಃಖತಪ್ತರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಈ ದುಃಖದ ಸಮಯದಲ್ಲಿ ನಾನು ಅವರೊಂದಿಗೆ ನಿಲ್ಲುತ್ತೇನೆ ಎಂದು ಐಟಿಬಿಪಿ ಡಿಜಿ ಡಾ ಸುಜೋಯ್ ಲಾಲ್ ಥಾಸೆನ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

ಕನಿಷ್ಠ 19 ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದವು. ಪೊಲೀಸರು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ಸೇರಿದಂತೆ ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಗಂಭೀರ ಗಾಯಗೊಂಡ ಎಂಟು ಯೋಧರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಶ್ರೀನಗರಕ್ಕೆ ವಿಮಾನದಲ್ಲಿ ರವಾನಿಸಲಾಗಿದೆ, ಇತರರು ಅನಂತನಾಗ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಐಟಿಬಿಪಿ ಮಹಾನಿರ್ದೇಶಕ ಎಸ್‌ಎಲ್ ಥಾಸೆನ್ ಹೇಳಿದ್ದಾರೆ.
ಜಿಎಂಸಿ ಅನಂತನಾಗ್, ಜಿಲ್ಲಾ ಆಸ್ಪತ್ರೆ ಅನಂತನಾಗ್ ಮತ್ತು ಎಸ್‌ಡಿಎಚ್ ಸೀರ್‌ನಲ್ಲಿ ವೈದ್ಯಕೀಯ ತಂಡಗಳನ್ನು ಹೈ ಅಲರ್ಟಟನಲ್ಲಿ ಇಡಲಾಗಿದೆ ಎಂದು ಅನಂತನಾಗ್ ಜಿಲ್ಲಾಧಿಕಾರಿ ಡಾ ಪಿಯೂಷ್ ಸಿಂಗ್ಲಾ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. “ಜೆ&ಕೆ, ಪಹಲ್ಗಾಮ್‌ನಲ್ಲಿ ಐಟಿಬಿಪಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತದ ಬಗ್ಗೆ ತಿಳಿದು ದುಃಖವಾಯಿತು. ನನ್ನ ಪ್ರಾರ್ಥನೆ ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ” ಎಂದು ಅವರು ಟ್ವೀಟ್‌ ಮಾಡಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, “ಚಂದನ್ವಾರಿ ಬಳಿ ಬಸ್ ಅಪಘಾತದಲ್ಲಿ ನಾವು ನಮ್ಮ ಧೈರ್ಯಶಾಲಿ ITBP ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥನೆಗಳು. ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement