ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗಿದೆ, ದೂರವಿಡಲಾಗಿದೆ ಎಂದು ಕೇಳಿಬರುತ್ತಿರುವಾಗಲೇ ಬಿಜೆಪಿಯ ಅತ್ಯಂತ ಉನ್ನತ ಸಮಿತಿಯಾದ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಅವರನ್ನು ಬುಧವಾರ ನೇಮಕ ಮಾಡಿ ಅವರಿಗೆ ಮಹತ್ವದ ಹೊಣೆಗಾರಿಕೆ ನೀಡಲಾಗಿದೆ. ತಮ್ಮ ಹೊಸ ಹುದ್ದೆ ನೀಡಿದ್ದಕ್ಕಾಗಿ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಹಾಗೂ ಮುಂದಿನ ವರ್ಷದ ರಾಜ್ಯ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುವ ಸಂಪೂರ್ಣ ಭರವಸೆ ನೀಡಿದ್ದಾರೆ.
“ನನ್ನನ್ನು ಬಿಜೆಪಿಯ ಸಂಸದೀಯ ಮಂಡಳಿಗೆ ನೇಮಕ ಮಾಡಿದ್ದಕ್ಕಾಗಿ ನಾನು ಪಕ್ಷದ ಕೇಂದ್ರ ಸಮಿತಿಗೆ ಧನ್ಯವಾದ ಹೇಳುತ್ತೇನೆ. ಬಿಜೆಪಿಯ ಎಲ್ಲಾ ಉನ್ನತ ನಾಯಕರು ನನಗೆ ಈ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ನಾನು ಯಾವುದೇ ಸ್ಥಾನವನ್ನು ನಿರೀಕ್ಷಿಸಿರಲಿಲ್ಲ. ಮುಖ್ಯಮಂತ್ರಿಗೆ ರಾಜೀನಾಮೆ ಸಲ್ಲಿಸಿದ ನಂತರ, ನಾನು ಒಂದೇ ಒಂದು ನಿರ್ಣಯವನ್ನು ಹೊಂದಿದ್ದೆ. ಅದೆಂದರೆ ಪಕ್ಷದ ಉಳಿದ ನಾಯಕರ ಜೊತೆ ಸೇರಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಗುರಿಯಾಗಿದೆ ಎಂದು ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಡಿಯೂರಪ್ಪನವರ ಕಚೇರಿಯ ಪ್ರಕಾರ, ಯಡಿಯೂರಪ್ಪ ಅವರು ಪ್ರಧಾನಿ ಮೋದಿಯವರಿಗೆ ದೂರವಾಣಿ ಮೂಲಕ ತಮ್ಮನ್ನು ಬಿಜೆಪಿ ಸಂಸದೀಯ ಮಂಡಳಿಗೆ ನೇಮಕ ಮಾಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ, ಪ್ರಧಾನಿ ಮೋದಿ, ಪಕ್ಷವನ್ನು ಬಲಪಡಿಸಲು ಮತ್ತು ಕರ್ನಾಟಕದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದಾದ್ಯಂತ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಿಮ್ಮ ಸೇವೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರನ್ನು ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯಲ್ಲಿ ಸೇರ್ಪಡೆಗೊಳಿಸುವುದು, ಒಂದು ರೀತಿಯ ರಾಜಕೀಯ ಪುನರಾಗಮನ ಎಂದು ಬಿಂಬಿಸಲಾಗಿದೆ, ಇದು ಹಿರಿಯ ನಾಯಕನನ್ನು ಪಕ್ಷ ಯಾವತ್ತಿಗೂ ಗೌರವಿಸುತ್ತದೆ ಎಂಬ ಸಂದೇಶವನ್ನು ಕಳುಹಿಸಲು ಪಕ್ಷವು ಮಾಡಿದ ಪ್ರಯತ್ನವಾಗಿದೆ.
ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗೆ ಮುನ್ನ ಲಿಂಗಾಯತ ಪ್ರಬಲ ವ್ಯಕ್ತಿಯನ್ನು ಬದಿಗೆ ಸರಿಸುವ ಬಗ್ಗೆ ವಿಶೇಷವಾಗಿ ಪ್ರತಿಪಕ್ಷ ಕಾಂಗ್ರೆಸ್ ಆರೋಪಗಳ ನಡುವೆ, ಅವರ ಅನುಭವ ಮತ್ತು ಮಾರ್ಗದರ್ಶನವನ್ನು ಬಳಸಿಕೊಳ್ಳಲು ಬಿಜೆಪಿ ಉತ್ಸುಕವಾಗಿದೆ ಎಂಬುದನ್ನು ಈ ನಿರ್ಧಾರದ ಮೂಲಕ ಬಿಜೆಪಿ ಹೇಳಿದೆ.
ಪಕ್ಷದ ನಾಯಕತ್ವದ ಈ ಕ್ರಮವು ಇನ್ನಷ್ಟು ಮಹತ್ವವನ್ನು ಪಡೆಯುತ್ತದೆ, ಏಕೆಂದರೆ ಇತ್ತೀಚೆಗೆ ಯಡಿಯೂರಪ್ಪ ಅವರು ತಮ್ಮ ಶಿಕಾರಿಪುರ ವಿಧಾನಸಭಾ ಸ್ಥಾನವನ್ನು ತಮ್ಮ ಪುತ್ರ ಬಿವೈ ವಿಜಯೇಂದ್ರಗಾಗಿ ಬಿಟ್ಟುಕೊಡುವುದಾಗಿ ಹೇಳುವ ಮೂಲಕ ಚುನಾವಣಾ ರಾಜಕೀಯದಲ್ಲಿ ತಮ್ಮ ಇನ್ನಿಂಗ್ಸ್ನ ಅಂತ್ಯವನ್ನು ಸೂಚಿಸಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ತಿಂಗಳ ಆರಂಭದಲ್ಲಿ ರಾಜ್ಯಕ್ಕೆ ಭೇಟಿ ನೀಡಿದಾಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಮತ್ತು ಯಡಿಯೂರಪ್ಪ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದರು. ಅದರ ನಂತರ ಯಡಿಯೂರಪ್ಪ ಅವರನ್ನು ಈಗ ಬಿಜೆಪಿ ಸಂಸದೀಯ ಮಂಡಳಿಗೆ ನೇಮಕ ಮಾಡಿದ ಆದೇಶ ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪ ನಿಷ್ಕ್ರಿಯರಾಗಿರಲು ನಿರ್ಧರಿಸಿದರೆ, ಚುನಾವಣೆಯಲ್ಲಿ ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬಹುದು ಎಂಬ ಕಾರಣಕ್ಕೆ ಯಡಿಯೂರಪ್ಪ ಅವರು ಪಕ್ಷದಲ್ಲಿ ಸಕ್ರಿಯವಾಗಿರುವಂತೆ ನೋಡಿಕೊಳ್ಳಲು ನಾಯಕತ್ವವು ಬಯಸಿದೆ ಎಂದು ಬಿಜೆಪಿ ಒಳಗಿನವರು ಹೇಳಿದ್ದಾರೆ.
ಇದು ಯಡಿಯೂರಪ್ಪನವರಿಗೆ ಹೆಚ್ಚುಗಾರಿಕೆಯನ್ನು ನೀಡುತ್ತದೆ, ಏಕೆಂದರೆ ಅವರು ತಮ್ಮ ಕಿರಿಯ ಪುತ್ರ ವಿಜಯೇಂದ್ರ ಅವರ ರಾಜಕೀಯ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನೋಡುತ್ತಿದ್ದಾರೆ. ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದರಾಗಿದ್ದಾರೆ.
ಎಲ್ಲರೂ ತಮ್ಮ ರಾಜಕೀಯದ ಅಂತ್ಯವನ್ನು ನಿರೀಕ್ಷಿಸುತ್ತಿರುವಾಗ ಯಡಿಯೂರಪ್ಪನವರಿಗೆ ಇದು ಖಂಡಿತವಾಗಿಯೂ ಒಂದು ಉನ್ನತಿಯಾಗಿದೆ. ಪಕ್ಷವು ಖಂಡಿತವಾಗಿಯೂ ಅವರ ಅವಶ್ಯಕತೆ ಮತ್ತು ಶಕ್ತಿಯನ್ನು ಅರಿತುಕೊಳ್ಳುತ್ತದೆ ಮತ್ತು ಅದನ್ನು ಬಳಸಿಕೊಳ್ಳಲು ಬಯಸುತ್ತದೆ. ನಾಯಕತ್ವವು ಅವರನ್ನು ಉತ್ತಮ ಪುಸ್ತಕಗಳಲ್ಲಿ ಇರಿಸಲು ಮತ್ತು ಸಾಧ್ಯವಾದಷ್ಟು ಲಾಭವನ್ನು ಪಡೆಯಲು ಬಯಸುತ್ತದೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಪರವಾಗಿ ಅವರು ಚುನಾವಣಾ ಪ್ರಚಾರದಲ್ಲಿ ಧುಮುಕಲಿದ್ದಾರೆ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂದು ಬಿಂಬಿಸುವ ಮೂಲಕ, ರಾಜ್ಯದಲ್ಲಿ ಪಕ್ಷದ ಪ್ರಬಲ ಮತದ ಮೂಲವಾಗಿರುವ ಲಿಂಗಾಯತ ಸಮುದಾಯದ ಮತಗಳನ್ನು ತಮ್ಮ ಪರವಾಗಿ ಸೆಳೆಯಲು ಕಾಂಗ್ರೆಸ್ ಯೋಜಿಸಿದೆ. ಆದರೆ ಪಕ್ಷವು ಕಾಂಗ್ರೆಸ್ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಿದೆ ಅವರು ಹೇಳಿದ್ದಾರೆ.
ಈಗ, ಯಡಿಯೂರಪ್ಪ ಅವರನ್ನು ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿಗೆ ಸೇರ್ಪಡೆ ಮಾಡುವ ಮೂಲಕ ಪಕ್ಷ ಸರಿಯಾದ ಅಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.


ನಿಮ್ಮ ಕಾಮೆಂಟ್ ಬರೆಯಿರಿ