ದುರಸ್ತಿ ಮಾಡುವಾಗಲೇ ಮೊಬೈಲ್‌ ಸ್ಫೋಟ, ಹೊತ್ತಿಕೊಂಡ ಬೆಂಕಿ ಜ್ವಾಲೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭೋಪಾಲ್: ಕೆಲಸಗಾರರೊಬ್ಬರು ಮೊಬೈಲ್‌ ದುರಸ್ತಿ ಮಾಡುವಾಗ ಮೊಬೈಲ್ ಫೋನ್‌ನ ಬ್ಯಾಟರಿ ಸ್ಫೋಟಗೊಂಡ ಕ್ಷಣವನ್ನು ದೃಶ್ಯಗಳು ಸೆರೆಯಾಗಿವೆ. ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಬಂಟಿ ಮೊಬೈಲ್ ಶಾಪ್ ಎಂಬ ದುರಸ್ತಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
ಅಂಗಡಿಯಲ್ಲಿ ಕೆಲಸ ಮಾಡುವವ ಮೊಬೈಲ್‌ ದುರಸ್ತಿ ಮಾಡಿ ಪರೀಕ್ಷಿಸುತ್ತಿರುವಾಗ ಜೋರಾಗಿ ಸ್ಫೋಟ ಸಂಭವಿಸಿದೆ. ಮುಂದಿನ ಕ್ಷಣದಲ್ಲಿ, ಕೆಲಸಗಾರನ ಕೈಯಲ್ಲಿಯೇ ಮೊಬೈಲ್‌ ಫೋನ್‌ನ ಬ್ಯಾಟರಿ ಹೊತ್ತಿ ಉರಿಯುತ್ತಿರುವುದನ್ನು ನೋಡಬಹುದು, ಕೆಲಸಗಾರನು ತಕ್ಷಣವೇ ಕೈಯೊಂದ ಮೊಬೈಲ್‌ ಫೋನನ್ನು ದೂರಕ್ಕೆ ಎಸೆದಿದ್ದಾರೆ.

ಮೊಬೈಲ್‌ ಕೆಲಸ ಮಾಡಲು ಪ್ರಯತ್ನಿಸುತ್ತಿರುವಾಗ ಗ್ರಾಹಕರೊಂದಿಗೆ ಮಾತನಾಡುತ್ತಿದ್ದ ಕೆಲಸಗಾರ ಮೊಬೈಲ್‌ ಅನ್ನು ಅಂಗಡಿಯ ಕೌಂಟರ್‌ನಲ್ಲಿ ಇಡುವುದನ್ನು ವೀಡಿಯೊ ತೋರಿಸುತ್ತದೆ. ನಂತರ ಆತ ಅದರ ಸ್ಥಿತಿ ಬಗ್ಗೆ ಪರಿಶೀಲಿಸಲು ನೋಡಿದಾಗ ಅದಕ್ಕೆ ಒಮ್ಮಲೇ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಆತ ಮೊಬೈಲ್‌ ಅನ್ನು ಅಂಗಡಿಯಿಂದ ಹೊರಕ್ಕೆ ಎಸೆಯುತ್ತಾರೆ.

ಮೊಬೈಲ್‌ ದುರಸ್ತಿ ಮಾಡಲು ಪ್ರಯತ್ನಿಸುತ್ತಿದ್ದಾಗ ಬ್ಯಾಟರಿ ಸ್ಫೋಟಗೊಂಡಿದೆ. ಅದು ಸಂಭವಿಸಿದ ಕ್ಷಣದಲ್ಲಿ ನಾನು ಅದನ್ನು ಎಸೆದಿದ್ದರಿಂದ ನನಗೆ ಯಾವುದೇ ತೊಂದರೆಯಾಲಿಲ್ಲ” ಎಂದು ಅಂಗಡಿ ಮಾಲೀಕ ಬಂಟಿ ಘಟನೆ ಬಗ್ಗೆ ವಿವರಿಸಿದ್ದಾರೆ.
ನಿಮ್ಮ ಫೋನ್‌ನಲ್ಲಿ ಯಾವುದೇ ತೊಂದರೆ ಕಂಡುಬಂದರೆ ನೀವು ಗಮನಿಸಿದ ತಕ್ಷಣ, ದಯವಿಟ್ಟು ಅಂಗಡಿಯಲ್ಲಿ ಪರೀಕ್ಷಿಸಿ ಇದರಿಂದ ನನಗೆ ಏನಾಯಿತು ಎಂಬುದು ನಿಮಗೆ ಸಂಭವಿಸುವುದಿಲ್ಲ” ಎಂದು ಬಂಟಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement