ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳಿಗೆ ನೇಮಕಾತಿ: ಎಸ್‌ಎಸ್‌ಎಲ್‌ಸಿ ಉತ್ತೀರ್ಣರಿಗೂ ಅವಕಾಶ

ನವದೆಹಲಿ: ಭಾರತೀಯ ಅಂಚೆ ಇಲಾಖೆಯಲ್ಲಿನ 98 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಕುರಿತು ಪ್ರಕಟಣೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಆಯಾ ರಾಜ್ಯಗಳ ಪೋಸ್ಟ್‌ಮೆನ್, ಮೇಲ್ ಗಾರ್ಡ್‌ಗಳು ಮತ್ತು ಇತರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಇಲಾಖೆಯು 98,083 ಉದ್ಯೋಗ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ರಾಷ್ಟ್ರದಾದ್ಯಂತ 23 ವೃತ್ತಗಳಲ್ಲಿ ಅಂಚೆ ಕಚೇರಿ ಉದ್ಯೋಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ಅನುಮತಿಸಿದೆ
ಭಾರತ ಪೋಸ್ಟ್ ನೇಮಕಾತಿ 2022: ಪೋಸ್ಟ್‌ಮ್ಯಾನ್: 59099 ಖಾಲಿ ಹುದ್ದೆಗಳು, ಮೇಲ್‌ ಗಾರ್ಡ್: 1445 ಖಾಲಿ ಹುದ್ದೆಗಳು
ಮಲ್ಟಿ-ಟಾಸ್ಕಿಂಗ್ (MTS): 37539 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ತಿಳಿಸಲಾಗಿದೆ.

ರಾಜ್ಯವಾರು ಪೋಸ್ಟ್‌ಮ್ಯಾನ್ ಹುದ್ದೆಗಳ ವಿವರಗಳು:

ಆಂಧ್ರಪ್ರದೇಶ: 2289 ಹುದ್ದೆಗಳು
ಅಸ್ಸಾಂ: 934 ಹುದ್ದೆಗಳು
ಬಿಹಾರ: 1851 ಹುದ್ದೆಗಳು
ಛತ್ತೀಸ್‌ಗಢ: 613 ಹುದ್ದೆಗಳು
ದೆಹಲಿ: 2903 ಹುದ್ದೆಗಳು
ಗುಜರಾತ್: 4524 ಹುದ್ದೆಗಳು
ಹರಿಯಾಣ: 1043 ಹುದ್ದೆಗಳು
ಹಿಮಾಚಲ ಪ್ರದೇಶ: 423 ಹುದ್ದೆಗಳು
ಜಮ್ಮು ಕಾಶ್ಮೀರ: 395 ಹುದ್ದೆಗಳು
ಜಾರ್ಖಂಡ್: 889 ಹುದ್ದೆಗಳು
ಕರ್ನಾಟಕ: 3887 ಹುದ್ದೆಗಳು
ಕೇರಳ: 2930 ಹುದ್ದೆಗಳು
ಮಧ್ಯಪ್ರದೇಶ: 2062 ಹುದ್ದೆಗಳು
ಮಹಾರಾಷ್ಟ್ರ: 9884 ಹುದ್ದೆಗಳು
ಈಶಾನ್ಯ ರಾಜ್ಯಗಳು: 581 ಹುದ್ದೆಗಳು
ಒಡಿಶಾ: 1352 ಹುದ್ದೆಗಳು
ಪಂಜಾಬ್: 1824 ಹುದ್ದೆಗಳು
ರಾಜಸ್ಥಾನ: 2135 ಹುದ್ದೆಗಳು
ತಮಿಳುನಾಡು: 6130 ಹುದ್ದೆಗಳು
ತೆಲಂಗಾಣ: 1553 ಹುದ್ದೆಗಳು
ಉತ್ತರಾಖಂಡ: 674 ಹುದ್ದೆಗಳು
ಉತ್ತರ ಪ್ರದೇಶ: 4992 ಹುದ್ದೆಗಳು
ಪಶ್ಚಿಮ ಬಂಗಾಳ: 5231 ಹುದ್ದೆಗಳು

ರಾಜ್ಯವಾರು ಮೇಲ್​ ಗಾರ್ಡ್​ ಹುದ್ದೆಗಳ ವಿವರಗಳು:
ಆಂಧ್ರ ಪ್ರದೇಶ: 108 ಹುದ್ದೆಗಳು
ಅಸ್ಸಾಂ: 73 ಹುದ್ದೆಗಳು
ಬಿಹಾರ: 95 ಹುದ್ದೆಗಳು
ಛತ್ತೀಸ್‌ಗಢ: 16 ಹುದ್ದೆಗಳು
ದೆಹಲಿ: 20 ಹುದ್ದೆಗಳು
ಗುಜರಾತ್: 74 ಹುದ್ದೆಗಳು
ಹರಿಯಾಣ: 24 ಹುದ್ದೆಗಳು
ಹಿಮಾಚಲ ಪ್ರದೇಶ: 07 ಹುದ್ದೆಗಳು
ಜಾರ್ಖಂಡ್: 14 ಹುದ್ದೆಗಳು
ಕರ್ನಾಟಕ: 90 ಹುದ್ದೆಗಳು
ಕೇರಳ: 74 ಹುದ್ದೆಗಳು
ಮಧ್ಯಪ್ರದೇಶ: 52 ಹುದ್ದೆಗಳು
ಮಹಾರಾಷ್ಟ್ರ: 147 ಹುದ್ದೆಗಳು
ಒಡಿಶಾ: 70 ಹುದ್ದೆಗಳು
ಪಂಜಾಬ್: 29 ಹುದ್ದೆಗಳು
ರಾಜಸ್ಥಾನ: 63 ಹುದ್ದೆಗಳು
ತಮಿಳುನಾಡು: 128 ಹುದ್ದೆಗಳು
ತೆಲಂಗಾಣ: 82 ಹುದ್ದೆಗಳು
ಉತ್ತರಾಖಂಡ: 08 ಹುದ್ದೆಗಳು
ಉತ್ತರ ಪ್ರದೇಶ: 116 ಹುದ್ದೆಗಳು
ಪಶ್ಚಿಮ ಬಂಗಾಳ: 155 ಹುದ್ದೆಗಳು

ಪ್ರಮುಖ ಸುದ್ದಿ :-   ಯು ಪಿ ಎಸ್ ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್, ಟಾಪ್‌-20 ರ‍್ಯಾಂಕ್ ಪಡೆದವರ ಪಟ್ಟಿ

ರಾಜ್ಯವಾರು MTS (ಮಲ್ಟಿ-ಟಾಸ್ಕಿಂಗ್) ಹುದ್ದೆಗಳ ವಿವರಗಳು:

ಆಂಧ್ರಪ್ರದೇಶ: 1166 ಹುದ್ದೆಗಳು
ಅಸ್ಸಾಂ: 747 ಹುದ್ದೆಗಳು
ಬಿಹಾರ: 1956 ಹುದ್ದೆಗಳು
ಛತ್ತೀಸ್‌ಗಢ: 346 ಹುದ್ದೆಗಳು
ದೆಹಲಿ: 2667 ಹುದ್ದೆಗಳು
ಗುಜರಾತ್: 2530 ಹುದ್ದೆಗಳು
ಹರಿಯಾಣ: 818 ಹುದ್ದೆಗಳು
ಹಿಮಾಚಲ ಪ್ರದೇಶ: 383 ಹುದ್ದೆಗಳು
ಜಮ್ಮು ಕಾಶ್ಮೀರ: 401 ಹುದ್ದೆಗಳು
ಜಾರ್ಖಂಡ್: 600 ಹುದ್ದೆಗಳು
ಕರ್ನಾಟಕ: 1754 ಹುದ್ದೆಗಳು
ಕೇರಳ: 1424 ಹುದ್ದೆಗಳು
ಮಧ್ಯಪ್ರದೇಶ: 1268 ಹುದ್ದೆಗಳು
ಮಹಾರಾಷ್ಟ್ರ: 5478 ಹುದ್ದೆಗಳು
ಈಶಾನ್ಯ ರಾಜ್ಯಗಳು: 358 ಹುದ್ದೆಗಳು
ಒಡಿಶಾ: 881 ಹುದ್ದೆಗಳು
ಪಂಜಾಬ್: 1178 ಹುದ್ದೆಗಳು
ರಾಜಸ್ಥಾನ: 1336 ಹುದ್ದೆಗಳು
ತಮಿಳುನಾಡು: 3361 ಹುದ್ದೆಗಳು
ತೆಲಂಗಾಣ: 878 ಹುದ್ದೆಗಳು
ಉತ್ತರಾಖಂಡ: 399 ಹುದ್ದೆಗಳು
ಉತ್ತರ ಪ್ರದೇಶ: 3911 ಹುದ್ದೆಗಳು
ಪಶ್ಚಿಮ ಬಂಗಾಳ: 3744 ಹುದ್ದೆಗಳು

ಹುದ್ದೆಗಳಿಗೆ ಅರ್ಹತಾ ಮಾನದಂಡಗಳು:

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 32 ವರ್ಷದೊಳಗಿರಬೇಕು.
ಶೈಕ್ಷಣಿಕ ಅರ್ಹತೆ- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಜ್ಞಾನ ಅತ್ಯಗತ್ಯ ಎಂದು ತಿಳಿಸಲಾಗಿದೆ. ಇದಲ್ಲದೇ ಕೆಲವು ಹುದ್ದೆಗಳಿಗೆ ವಿದ್ಯಾರ್ಹತೆ 12ನೇ ತರಗತಿ ತೇರ್ಗಡೆಯಾಗಬೇಕೆಂದು ತಿಳಿಸಲಾಗಿದೆ. ಇಲ್ಲಿ ಪ್ರತಿಯೊಂದು ಹುದ್ದೆಯ ವಿದ್ಯಾರ್ಹತೆಯು ಭಿನ್ನವಾಗಿರುವುದರಿಂದ, ಅಭ್ಯರ್ಥಿಗಳು ಶೈಕ್ಷಣಿಕ ಅಗತ್ಯತೆಗಳು ಮತ್ತು ಅರ್ಜಿಗಳನ್ನು ಸಲ್ಲಿಸುವ ವಿಧಾನವನ್ನು ಖಚಿತಪಡಿಸಿಕೊಳ್ಳಲು ಅಂಚೆ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ಅಧಿಸೂಚನೆಯನ್ನು ಪರಿಶೀಲಿಸಬಹುದು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಈ ಕೆಳಗಿನ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಇದನ್ನು ಅಧಿಕೃತ ವೆಬ್‌ಸೈಟ್ indiapostgdsonline.gov.in ನಲ್ಲಿ ನೋಡಬಹುದು.
ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡಿ.
ಮುಖಪುಟಕ್ಕೆ ಹೋಗಿ ಮತ್ತು ನೇಮಕಾತಿ ಲಿಂಕ್ ಆಯ್ಕೆಮಾಡಿ.
ನೀವು ಅರ್ಜಿ ಸಲ್ಲಿಸಲು ಬಯಸುವ ಸ್ಥಾನವನ್ನು ಆಯ್ಕೆ ಮಾಡಿ ಮತ್ತು ಅವಶ್ಯಕತೆಗಳನ್ನು ಪರಿಶೀಲಿಸಿ
ಖಾತೆಗಾಗಿ ಸೈನ್ ಅಪ್ ಮಾಡಿ.
ಫಾರ್ಮ್ ಅನ್ನು ಪೂರ್ಣಗೊಳಿಸಿ.
ಶುಲ್ಕವನ್ನು ಸಲ್ಲಿಸಿ ಮತ್ತು ಪಾವತಿಸಿ
ಸ್ವೀಕೃತಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಅದನ್ನು ಉಳಿಸಿಕೊಳ್ಳಿ (ಸೇವ್‌ ಮಾಡಿಕೊಳ್ಳಿ) ಮತ್ತು ಭವಿಷ್ಯದ ಬಳಕೆಗಾಗಿ ಅದರ ಪ್ರಿಂಟ್‌ ತೆಗೆದುಕೊಳ್ಳಿ

ಪ್ರಮುಖ ಸುದ್ದಿ :-   ನೀವು ಅಮಾಯಕರಲ್ಲ : ಬಾಬಾ ರಾಮದೇವ, ಆಚಾರ್ಯ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್‌ ಮತ್ತೆ ತರಾಟೆ

ಅರ್ಜಿ ಸಲ್ಲಿಸುವುದು ಹೇಗೆ? ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್​ಸೈಟ್ indiapost.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

4.3 / 5. 13

ಶೇರ್ ಮಾಡಿ :

7 Responses

ನಿಮ್ಮ ಕಾಮೆಂಟ್ ಬರೆಯಿರಿ

advertisement