ರೈತರಿಗಾಗಿ ರಾಜ್ಯದಲ್ಲಿ ಐದು ರಫ್ತು ಲ್ಯಾಬ್ ಪ್ರಾರಂಭ: ಸಚಿವ ಬಿ.ಸಿ.ಪಾಟೀಲ

ಬೆಂಗಳೂರು: ರೈತರ ಆದಾಯವನ್ನು ದ್ವಿಗುಣಗೊಳಿಸಿ ರೈತರನ್ನು ಆರ್ಥಿಕವಾಗಿ ಶಕ್ತಿಯಾಗಿಸಲು ಅವರನ್ನು ರಫ್ತುದಾರರನ್ನಾಗಿ ಮಾಡಲು ರಾಜ್ಯದಲ್ಲಿ ರಫ್ತುಲ್ಯಾಬ್ (ಎಕ್ಸ್‌ಪೋರ್ಟ್ ಲ್ಯಾಬ್) ಆರಂಭಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ರೈತ ಉತ್ಪಾದಕ ಸಂಸ್ಥೆಗಳು ಮತ್ತು ರಫ್ತುದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರೈತರನ್ನು ರಫ್ತುದಾರರನ್ನಾಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊದಲ ಹಂತದಲ್ಲಿ ಐದು ರೈತರ ರಫ್ತುಲ್ಯಾಬ್‌ಗಳನ್ನು ಆರಂಭಿಸಲಾಗುತ್ತಿದೆ. ರಫ್ತುಲ್ಯಾಬ್‌ಗಳು ಹಿಂಡಿ, ಹನುಮನಟ್ಟಿ, ನಾಗೇನಹಳ್ಳಿ, ವರದಗೆರ ಮತ್ತು ಬನವಾಸಿಗಳಲ್ಲಿ ಆರಂಭವಾಗಲಿವೆ. ರೈತ ತಾನು ಬೆಳೆದ ಉತ್ಪನ್ನಗಳನ್ನು ದೇಶ ವಿದೇಶಗಳಲ್ಲೂ ಮಾರುವಂತಾಗಬೇಕು. ರೈತನ ಉತ್ಪನ್ನಗಳಿಗೆ ಬ್ರಾಂಡಿಂಗ್ ಸಿಗಬೇಕು. ರೈತ ರಫ್ತುದಾರ ಉದ್ಯಮಿ ಆಗಬೇಕು ಎಬುದು ತಮ್ಮ ಆಶಯ. ಅದಕ್ಕಾಗಿ ಎಕ್ಸ್‌ಪರ್ಟ್ ಲ್ಯಾಬ್ ಮಾಡುತ್ತಿದ್ದೇವೆ ಎಂದರು. ಎಂದು ಮಾಹಿತಿ ನೀಡಿದರು.

ಸಾಮಾನ್ಯ ರೈತ ಮತ್ತು ರಫ್ತುದಾರರ ಮಧ್ಯೆ ಸೇತುವೆಯಂತೆ ಜೋಡಿಸುವ ಕೆಲಸವನ್ನು ಕೆಫೆಕ್ ಮಾಡುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ದ ೫೦೦ ರೈತರಿಗೆ ಸಿಎಫ್‌ಡಿಆರ್‌ಐನಲ್ಲಿ ತರಬೇತಿ ನೀಡಲಾಗಿದ್ದು, ಅವರು ಈಗ ರೈತೋದ್ಯಮಿಗಳಾಗಿದ್ದಾರೆ. ರೈತರು ಸಹ ಕಿರು ಉದ್ಯಮಿಗಳನ್ನು ಆರಂಭಿಸಬೇಕು ಎಂದು ಅವರು ಅಲಹೆ ನೀಡಿದರು.
ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ, ಕೃಷಿ ಆಯುಕ್ತ ಶರತಕುಮಾರ್, ಜಿಕೆವಿಕೆ ಉಪಕುಲಪತಿ ಡಾ. ರಾಜೇಂದ್ರಪ್ರಸಾದ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement