ನನಗೆ ವಯಸ್ಸಾಯ್ತು, ನನ್ನ ವಯಸ್ಕ ಅಂಗವಿಕಲ ಮಗನಿಗೆ ನೆರವು ನೀಡಿ: ತಾಯಿ ಕೂಗಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ

posted in: ರಾಜ್ಯ | 0

ಬೆಂಗಳೂರು: ತನ್ನ ವಯಸ್ಕ ಅಂಗವಿಕಲ ಮಗನನ್ನು ಎತ್ತಿಕೊಂಡು ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಆಗಮಿಸಿದ ತಾಯಿಯೊಬ್ಬಳು ವಯಸ್ಕ ಮಗನ ಪೋಷಣೆಯ ಬಗ್ಗೆ ತಮ್ಮ ನೋವನ್ನು ತೋಡಿಕೊಂಡು ಆರ್ಥಿಕ ನೆರವಿಗಾಗಿ ಮೊರೆಯಿಟ್ಟರು.
ತಾಯಿಯ ಕರುಳಿನ ಕೂಗಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕರೆದು ತಕ್ಷಣವೇ ನೆರವು ನೀಡುವ ವ್ಯವಸ್ಥೆ ಮಾಡುವಂತೆ ಆದೇಶಿಸಿದ್ದಾರೆ.
ಕೊಡಗಿನ ಶನಿವಾರ ಸಂತೆಯ ರುಕ್ಮಿಣಿ ಅವರು ತಮ್ಮ ವಯಸ್ಕ ಪುತ್ರ ಜನ್ಮತಃ ಅಂಗವಿಕಲರಾದ ಜಯರಾಮನನ್ನು ಕಂಕುಳಲ್ಲಿ ಹೊತ್ತುಕೊಂಡು ಮುಖ್ಯಮಂತ್ರಿಗಳ ಆರ್‌ಟಿ ನಗರದ ನಿವಾಸದ ಬಳಿ ಆಗಮಿಸಿದ್ದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಜನತಾ ದರ್ಶನದಲ್ಲಿ ಈ ಮಹಿಳೆ ಮುಖ್ಯಮಂತ್ರಿಗಳಿಗೆ ಕೈ ಮುಗಿದು ಅಂಗವಿಕಲ ಪುತ್ರನನ್ನು ಸಲಹುವ ಕಷ್ಟವನ್ನು ನಿವೇದಿಸಿಕೊಂಡರು. ತನಗೆ ವಯಸ್ಸಾಗುತ್ತದೆ. ತನ್ನ ಮಗನನ್ನು ಸಾಕುವುದು ಕಷ್ಟವಾಗುತ್ತಿದೆ. ಆತನನ್ನು ಹೊತ್ತುಕೊಂಡೇ ತಿರುಗಬೇಕು, ತಿಂಗಳೀಗೆ ೫ ಸಾವಿರ ರೂ. ನೀಡಿದರೆ ಜೀವನಕ್ಕೆ ಆಸರೆಯಾಗುತ್ತದೆ ಎಂದು ಮೊರೆ ಇಟ್ಟಾಗ ಆ ತಾಯಿಯ ಪರಿಸ್ಥಿತಿ ಕಂಡು ನೆರೆದಿದ್ದವರ ಮನ ಮಿಡಿಯುವಂತಾಂಯಿತು.
ತಾಯಿ ರುಕ್ಮಿಣಿಯ ಕಷ್ಟ ಕೇಳಿ ಮುಖ್ಯಮಂತ್ರಿಗಳು, ತಕ್ಷಣವೇ ಸ್ಪಂದಿಸಿ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕರೆದು ಅಗತ್ಯ ವಿವರ ಪಡೆದು ತಕ್ಷಣವೇ ಪರಿಹಾರ ನೀಡುವ ವ್ಯವಸ್ಥೆ ಮಾಡಿ ಎಂದು ಆದೇಶಿಸಿದರು.
ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಋಣಿಯಾದ ತಾಯಿ ರುಕ್ಮಿಣಿ, ಕುರ್ಚಿಯಲ್ಲಿ ಕುಳಿತ್ತಿದ್ದ ಅಂಗವಿಕಲ ಮಗನನ್ನು ಎತ್ತಿಕೊಂಡು ಮುಖ್ಯಮಂತ್ರಿ ಬೊಮ್ಮಾಯಿರವರಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ವಿದ್ಯುತ್ ದರ ಏರಿಕೆ: ಹಿಂಪಡೆಯಲು ರಾಜ್ಯ ಸರ್ಕಾರದ ಚಿಂತನೆ...?

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement