ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಆಪ್ತ ರಷ್ಯಾದ ಸಿದ್ಧಾಂತವಾದಿ ಅಲೆಕ್ಸಾಡರ್ ಡುಗಿನ್ ಅವರ ಪುತ್ರಿ ಮಾಸ್ಕೋದ ಹೊರವಲಯದಲ್ಲಿ ಕಾರ್ ಬಾಂಬ್ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ರಷ್ಯಾದ ಮಾಧ್ಯಮಗಳು ಉಲ್ಲೇಖಿಸಿದ ಕುಟುಂಬ ಸದಸ್ಯರ ಪ್ರಕಾರ, ಉಕ್ರೇನ್‌ನಲ್ಲಿ ಕ್ರೆಮ್ಲಿನ್‌ನ ಆಕ್ರಮಣದ ಪ್ರಬಲ ಬೆಂಬಲಿಗರಾದ ಡುಗಿನ್ – ಅವರೇ ನಿಜವಾದ ಟಾರ್ಗೆಟ್ ಆಗಿತ್ತು, ಆದರೆ ಕೊನೆಯ ಕ್ಷಣದಲ್ಲಿ ಅವರ ಮಗಳು ಅವರ ಕಾರನ್ನು ತೆಗೆದುಕೊಂಡಿ ಹೋಗಿದ್ದರಿಂದ ಸ್ಫೋಟಕ್ಕೆ ಗುರಿಯಾಗಿದ್ದಾರೆ ಎಂದು ಹೇಳಿದ್ದಾರೆ.
1992 ರಲ್ಲಿ ಜನಿಸಿದ ಡೇರಿಯಾ ಡುಗಿನಾ, ಮಾಸ್ಕೋದ ಹೊರಗೆ ಸುಮಾರು 40 ಕಿಲೋಮೀಟರ್ (25 ಮೈಲಿ) ದೂರದಲ್ಲಿರುವ ಬೊಲ್ಶಿ ವೈಝೋಮಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ತನ್ನ ಟೊಯೊಟಾ ಲ್ಯಾಂಡ್ ಕ್ರೂಸರ್‌ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಾಗ ಸಾವಿಗೀಡಾಗಿದ್ದಾಳೆ ಎಂದು ರಷ್ಯಾದ ತನಿಖಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಡೇರಿಯಾ ಡುಗಿನಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಮತ್ತು ನರಹತ್ಯೆಯ ಪ್ರಕರಣ ದಾಖಲಿಸಲಾಗಿದೆ ಎಂದು ರಷ್ಯಾದಲ್ಲಿ ಪ್ರಮುಖ ಅಪರಾಧ ಪ್ರಕರಣಗಳನ್ನು ತನಿಖೆ ಮಾಡುವ ಸಮಿತಿ ಹೇಳಿದೆ. ಡುಗಿನ್ ಅವರನ್ನು ಪುತಿನ್ ಅವರ ಮೆದುಳು” ಎಂದು ಕರೆಯುತ್ತಾರೆ. ವಿಶಾಲವಾದ ಹೊಸ ರಷ್ಯಾದ ಸಾಮ್ರಾಜ್ಯದಲ್ಲಿ ರಷ್ಯಾದ-ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಅವರು ದೀರ್ಘಕಾಲದಿಂದ ಪ್ರತಿಪಾದಿಸಿದ್ದಾರೆ ಮತ್ತು ಉಕ್ರೇನ್‌ನಲ್ಲಿ ಮಾಸ್ಕೋದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.
2014 ರಲ್ಲಿ ರಷ್ಯಾ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡ ನಂತರ ಡುಗಿನ್ ಅವರನ್ನು ಪಾಶ್ಚಿಮಾತ್ಯ ದೇಶಗಳು ನಿರ್ಬಂಧಗಳ ಪಟ್ಟಿಗೆ ಸೇರಿಸಿದ್ದವು.
ಉಕ್ರೇನ್‌ನಿಂದ ಬೇರ್ಪಟ್ಟ ಪ್ರತ್ಯೇಕತಾವಾದಿ ಪ್ರದೇಶದ ಮುಖ್ಯಸ್ಥರು ಕೈವ್ ಅಧಿಕಾರಿಗಳ ಮೇಲೆ ಈ ಸ್ಫೋಟದ ಆರೋಪ ಹೊರಿಸಿದ್ದಾರೆ.
ಉಕ್ರೇನಿಯನ್ ಆಡಳಿತದ ಭಯೋತ್ಪಾದಕರು ಅಲೆಕ್ಸಾಂಡರ್ ಡುಗಿನ್ ಅನ್ನು ಟಾರ್ಗೆಟ್ ಮಾಡಲು ಪ್ರಯತ್ನಿಸಿದರು, ಆದರೆ ಅವರ ಮಗಳನ್ನು ಸ್ಫೋಟಿಸಿದರು” ಎಂದು DNR ಮುಖ್ಯಸ್ಥ ಡೆನಿಸ್ ಪುಶಿಲಿನ್ ಟೆಲಿಗ್ರಾಂನಲ್ಲಿ ಬರೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ