ವ್ಯಕ್ತಿಯ ಗುದನಾಳದಲ್ಲಿ ಸಿಲುಕಿದ್ದ ಸ್ಟೀಲ್ ಗ್ಲಾಸ್ …! 10 ದಿನಗಳ ನಂತರ ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಯ್ತು

ನವದೆಹಲಿ: ಗುಜರಾತಿನ ಸೂರತ್‌ನಿಂದ ವರದಿಯಾದ ಘಟನೆಯೊಂದರಲ್ಲಿ ಪಾರ್ಟಿಯ ಸಂದರ್ಭದಲ್ಲಿ ವ್ಯಕ್ತಿಯ ಸ್ನೇಹಿತರು ಆತನ ಗುದನಾಳದೊಳಗೆ ಸ್ಟೀಲ್ ಗ್ಲಾಸ್ ತೂರಿಸಿರುವುದು ನಡೆದಿದೆ….! ಘಟನೆ ನಡೆದಾಗ ಒಡಿಶಾ ಮೂಲದ ಕೃಷ್ಣ ರೌತ್ ಎಂಬ ವ್ಯಕ್ತಿ ಕುಡಿದ ಅಮಲಿನಲ್ಲಿದ್ದ ಎಂದು ಹೇಳಲಾಗಿದೆ. ಆ ವ್ಯಕ್ತಿ ಒಡಿಶಾಕ್ಕೆ ಹಿಂದಿರುಗಿದ 10 ದಿನಗಳ ನಂತರ ಶಸ್ತ್ರಚಿಕಿತ್ಸೆಯ ಮೂಲಕ ಗುದನಾಳದೊಳಗಿನ ಸ್ಟೀಲ್‌ ಗ್ಲಾಸನ್ನು ಹೊರಕ್ಕೆ ತೆಗೆಯಲಾಯಿತು.
ಬ್ರಹ್ಮಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರ ಎಕ್ಸ್ ರೇ ಚಿತ್ರ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ಘಟನೆಯ ನಂತರ ಮರುದಿನ 45 ವರ್ಷದ ಕೃಷ್ಣ ರೌತ್‌ ಹೊಟ್ಟೆಯ ಕೆಳಭಾಗದಲ್ಲಿ ನೋವನ್ನು ಅನುಭವಿಸಲು ಪ್ರಾರಂಭಿಸಿದರು ಆದರೆ ಅವರು ಅದರ ಬಗ್ಗೆ ತಮ್ಮ ಕುಟುಂಬಕ್ಕೆ ತಿಳಿಸಲಿಲ್ಲ. ಆದರೆ ಕ್ರಮೇಣ ನೋವು ಸಹಿಸಿಕೊಳ್ಳಲು ಆಗದಷ್ಟು ಜೋರಾಯಿತು. ಮಲವಿಸರ್ಜನೆ ಮಾಡಲು ಸಾಧ್ಯವಾಗದೆ ಹೊಟ್ಟೆ ಉಬ್ಬಿಕೊಳ್ಳತೊಡಗಿತು.
ಕೃಷ್ಣ ರೌತ್ ಅವರು ಎಂಕೆಸಿಜಿ (MKCG) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೋದಾಗ, ಅಲ್ಲಿ ಎಕ್ಸ್-ರೇ ನಡೆಸಲಾಯಿತು ಮತ್ತು ವರದಿಯನ್ನು ವೈದ್ಯಕೀಯ ಸಿಬ್ಬಂದಿಯೇ ಬೆಚ್ಚಿಬಿದ್ದರು. ಏಕೆಂದರೆ ವರದಿಯು ಅವರ ಗುದನಾಳದಲ್ಲಿ ಗ್ಲಾಸ್‌ ಸಿಲುಕಿಕೊಂಡಿರುವುದನ್ನು ತೋರಿಸಿದೆ.
ಶಸ್ತ್ರಚಿಕಿತ್ಸೆಯ ಸಹಾಯದಿಂದ ಗಾಜನ್ನು ಹೊರತೆಗೆಯಲಾಯಿತು. ಕೃಷ್ಣ ರೌತ್ ಅವರು ಈಗ ಗುಣಮುಖರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement