ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟ

ಬೆಂಗಳೂರು: ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿ ಮಾಡಿದೆ. . ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ 10 ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡಿ ರಾಜ್ಯ ಸರ್ಕಾರ ಇಂದು, ಬುಧವಾರ (ಆಗಸ್ಟ್‌ 24) ಆದೇಶ ಹೊರಡಿಸಿದೆ.

10 ಮಹಾನಗರ ಪಾಲಿಕೆ ಮೇಯರ್-ಉಪ ಮೇಯರ್ ಸ್ಥಾನಗಳ ಮೀಸಲಾತಿ ಇಂತಿದೆ

ಬಳ್ಳಾರಿ : ಮೇಯರ್- ಹಿಂದುಳಿದ ವರ್ಗ (ಅ)ಮಹಿಳೆ, ಉಪ ಮೇಯರ್-ಸಾಮಾನ್ಯ ಮಹಿಳೆ
ಬೆಳಗಾವಿ: ಮೇಯರ್ –ಸಾಮಾನ್ಯ, ಉಪಮೇಯರ್-ಪರಿಶಿಷ್ಟ ಜಾತಿ ಮಹಿಳೆ
ದಾವಣಗೆರೆ: ಮೇಯರ್ –ಸಾಮಾನ್ಯ ಮಹಿಳೆ, ಉಪ ಮೇಯರ್-ಹಿಂದುಳಿದ ವರ್ಗ (ಅ)ಮಹಿಳೆ
ಹುಬ್ಬಳ್ಳಿ-ಧಾರವಾಡ : ಮೇಯರ್-ಸಾಮಾನ್ಯ ಮಹಿಳೆ, ಉಪ ಮೇಯರ್ – ಸಾಮಾನ್ಯ
ಕಲಬುರ್ಗಿ – ಮೇಯರ್-ಪರಿಶಿಷ್ಟ ಜಾತಿ, ಉಪ ಮೇಯರ್ –ಸಾಮಾನ್ಯ
ಮಂಗಳೂರು – ಮೇಯರ್-ಸಾಮಾನ್ಯ, ಉಪ ಮೇಯರ್ –ಸಾಮಾನ್ಯ ಮಹಿಳೆ
ಮೈಸೂರು – ಮೇಯರ್ –ಸಾಮಾನ್ಯ, ಉಪ ಮೇಯರ್-ಹಿಂದುಳಿದ ವರ್ಗ (ಅ) ಮಹಿಳೆ
ಶಿವಮೊಗ್ಗ – ಮೇಯರ್ – ಹಿಂದುಳಿದ ವರ್ಗ (ಅ), ಉಪ ಮೇಯರ್ –ಸಾಮಾನ್ಯ ಮಹಿಳೆ
ತುಮಕೂರು – ಮೇಯರ್-ಪರಿಶಿಷ್ಟ ಜಾತಿ ಮಹಿಳೆ, ಉಪ ಮೇಯರ್-ಹಿಂದುಳಿದ ವರ್ಗ (ಅ)
ವಿಜಯಪುರ-ಮೇಯರ್ – ಪರಿಶಿಷ್ಟ ಪಂಗಡ, ಉಪ ಮೇಯರ್ -ಹಿಂದುಳಿದ ವರ್ಗ (ಬ)

ಪ್ರಮುಖ ಸುದ್ದಿ :-   ದಾರಿತಪ್ಪಿ ಮಹಾರಾಷ್ಟ್ರ ತಲುಪಿದ್ದ ಹಾವೇರಿ ಜಿಲ್ಲೆಯ ವೃದ್ಧೆ ; ಗೂಗಲ್‌ ಸರ್ಚ್‌, ಚಾಟ್‌ಜಿಪಿಟಿ ನೆರವಿನಿಂದ ಮರಳಿ ಮನೆಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement