ಮೊಸಳೆಗಳಿಂದ ತುಂಬಿದ ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಿದ ಎಸ್‌ಡಿಆರ್‌ಎಫ್ ತಂಡ | ವೀಕ್ಷಿಸಿ

ಮೊಸಳೆಗಳಿಂದ ತುಂಬಿದ ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ಎಸ್‌ಡಿಆರ್‌ಎಫ್ ತಂಡ ರಕ್ಷಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಸಿರು ಬಿಗಿಹಿಡಿಯುವ ವೀಡಿಯೊವು ದೋಣಿಯಲ್ಲಿದ್ದ ರಕ್ಷಣಾ ತಂಡವು ಬಾಲಕನ ಸಮೀಪಕ್ಕೆ ಬರುತ್ತಿರುವುದನ್ನು ತೋರಿಸುತ್ತದೆ. ಇದೇವೇಳೆ ಮೊಸಳೆಗಳು ಸಹ ಬಾಲಕನನ್ನು ಸುತ್ತುತ್ತಿರುವುದನ್ನು ಸಹ ನೀವು ನೋಡಬಹುದು. ಹುಡುಗನು ಭಯಗೊಂಡರು ಧೈರ್ಯದಿಂದ ಹೋರಾಡಿದ್ದಾನೆ. ತಂಡದವರು ಸಹಾಯಕ್ಕೆ ಬರುವವರೆಗೂ ನೀರಿನಲ್ಲಿ ತೇಲುತ್ತಲೇ ಕೂಗುತ್ತಿರುವುದು ವೀಡಿಯೊದಲ್ಲಿ ಕಾಣುತ್ತದೆ.

ವೈರಲ್ ವೀಡಿಯೊದಲ್ಲಿ, ನದಿಯ ಮಧ್ಯದಲ್ಲಿ ಹುಡುಗನೊಬ್ಬ ಬಹುತೇಕ ಮುಳುಗುತ್ತಿರುವುದನ್ನು ಕಾಣಬಹುದು. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಹುಡುಗನ ಸುತ್ತಲೂ ಮೊಸಳೆಗಳು ಸುತ್ತುತ್ತಿರುವುದನ್ನು ನೋಡಬಹುದು. ಕೆಲವೇ ಕ್ಷಣಗಳಲ್ಲಿ ರಕ್ಷಣಾ ತಂಡ ಆಗಮಿಸಿ ಬಾಲಕನನ್ನು ನದಿಯಿಂದ ಹೊರತೆಗೆದಿದೆ.

https://twitter.com/DrBhageerathIRS/status/1562459036196282369?ref_src=twsrc%5Etfw%7Ctwcamp%5Etweetembed%7Ctwterm%5E1562459036196282369%7Ctwgr%5E6bd09d77d9613c7b46fc1bc901b635998481fab0%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsdrf-team-saves-boy-from-drowning-in-river-filled-with-crocodiles-nail-biting-viral-video-1992533-2022-08-25

ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಡಾ ಭಗೀರತ ಚೌಧರಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.ಇದು ಸಂಭವಿಸಿದ ಸ್ಥಳವನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆದರೆ ಹಲವರು ವೀಡಿಯೊ ಚಂಬಲ್ ನದಿಯಿಂದ ಬಂದಿದೆ ಎಂದು ಸೂಚಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement