ನೀರಿನೊಂದಿಗೆ ಬೆಂಕಿಯನ್ನೂ ಉಗುಳುತ್ತಿರುವ ಬೋರ್‌ವೆಲ್‌: ಈ ಅಪರೂಪದ ವಿದ್ಯಮಾನ ಕ್ಯಾಮೆರಾದಲ್ಲಿ ಸೆರೆ | ವೀಕ್ಷಿಸಿ

ಬಕ್ಸ್‌ವಾಹಾ: ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಸಾಮಾನ್ಯ ಕೈ ಪಂಪ್‌ ನೀರಿನೊಂದಿಗೆ ಬೆಂಕಿಯನ್ನು ಉಗುಳಲು ಪ್ರಾರಂಭಿಸಿದ್ದನ್ನು  ನೋಡಿ ನಿವಾಸಿಗಳು ಗಾಬರಿಗೊಂಡರು.
ಕಚ್ಚರ್ ಗ್ರಾಮದ ಕೈಪಂಪ್‌ನಿಂದ ನೀರು ಮತ್ತು ಬೆಂಕಿ ಎರಡೂ ಹೊರಬರುತ್ತಿವೆ. ಈ ಕೈಪಂಪ್‌ ಬೆಂಕಿ ಮತ್ತು ನೀರು ಉಗುಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಘಟನೆಯ ನಂತರ ಗ್ರಾಮಸ್ಥರು ಭಯಭೀತರಾದರು. ಅದರಂತೆ ಗ್ರಾಮದಲ್ಲಿ 2 ಕೈಪಂಪುಗಳಿದ್ದು, ಇದರಿಂದ ಗ್ರಾಮಸ್ಥರು ನೀರು ಸೇದುತ್ತಾರೆ. ಆದರೆ ಬುಧವಾರ ಬೆಳಗ್ಗೆಯಿಂದ ಕೈಪಂಪ್ ಸ್ವಯಂಚಾಲಿತವಾಗಿ ಬೆಂಕಿ ಮತ್ತು ನೀರು ಉಗುಳುತ್ತಿದ್ದು, ಕೂಡಲೇ ಆ ಪ್ರದೇಶದಲ್ಲಿ ಜನ ಜಮಾಯಿಸಿದ್ದಾರೆ. ಕಚರ್ ಛತ್ತರ್‌ಪುರ ಜಿಲ್ಲೆಯ ಬಕ್ಸ್‌ವಾಹ ಪಂಚಾಯತ್‌ನಿಂದ 10 ಕಿಲೋಮೀಟರ್ ದೂರದಲ್ಲಿದೆ. ಈ ಅಸ್ವಾಭಾವಿಕ ದೃಶ್ಯದ ಬಗ್ಗೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಕ್ಲಿಪ್ ಅನ್ನು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಟ್ವಿಟರ್‌ನಲ್ಲಿ ಹಲವು ಬಳಕೆದಾರರು ಹಂಚಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಭೂಪಾಲದ ಶಾ ಮೋತಿಲಾಲ್ ವಿಜ್ಞಾನ ಕಾಲೇಲಜಿನ ಪ್ರೊಫೆಸರ್‌ ಡಾ.ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರು, ಹ್ಯಾಂಡ್ ಪಂಪ್‌ನಿಂದ ನೀರಿನೊಂದಿಗೆ ಸುಡುವ ಅನಿಲ ಬಿಡುಗಡೆಯಾಗುವುದು ಅದ್ಭುತ ಘಟನೆಯಲ್ಲ. ಇದು ಸಾಮಾನ್ಯ ಹೈಡ್ರೋಕಾರ್ಬನ್ (ಮಿಥೇನ್) ಅನಿಲವಾಗಿದೆ. ಸೆಡಿಮೆಂಟರಿ ಬಂಡೆಗಳಲ್ಲಿನ ಸಸ್ಯಗಳು ಮತ್ತು ಮರಗಳ ಅವಶೇಷಗಳು ಜೌಗು ಪ್ರದೇಶದಲ್ಲಿ ಇವು (ಸೂಕ್ಷ್ಮ ಮರಳು) ಠೇವಣಿಯಾಗಿರುತ್ತವೆ. ಅಲ್ಲಿ ಮಿಥೇನ್ ಅನಿಲವು ಭೌತ-ರಾಸಾಯನಿಕ ಪ್ರಕ್ರಿಯೆಯಿಂದ ರೂಪುಗೊಳ್ಳುತ್ತದೆ. ಬಿಸಿ ಅಥವಾ ಸುಡುವಿಕೆಯಿಂದಾಗಿ ಈ ಅನಿಲವು ಸಾಂದ್ರತೆಯಲ್ಲಿ ಕಡಿಮೆಯಾಗುತ್ತದೆ, ಈ ಕಾರಣದಿಂದಾಗಿ ಈ ಅನಿಲದ ಅಡಿಯಲ್ಲಿ ಇರುವ ಅಂತರ್ಜಲವು ಮೇಲಕ್ಕೆ ಏರುತ್ತದೆ. ಬಕ್ಸ್‌ವಾಹಾದಲ್ಲಿ ಮರಳುಗಲ್ಲು, ಶೇಲ್ ಇತ್ಯಾದಿ ಸಂಚಿತ ಶಿಲೆಗಳು ಕಂಡುಬರುತ್ತವೆ. ಹೀಗಾಗಿ ಇದು ಸಂಭವಿದಿದೆ ಎಂದು ಹೇಳುತ್ತಾರೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement