ರೈಲ್ವೇ ಪರೀಕ್ಷೆ ಪಾಸ್‌ ಮಾಡಲು‌ ಹೆಬ್ಬೆರಳಿನ ಚರ್ಮವನ್ನೇ ಕಿತ್ತು ಸ್ನೇಹಿತನ ಬೆರಳಿಗೆ ಅಂಟಿಸಿದ ಭೂಪ…! ಆದ್ರೆ ಸ್ಯಾನಿಟೈಸರ್ ಹಾಳು ಮಾಡ್ಬಿಡ್ತು ಇವರ ಪ್ಲ್ಯಾನ್…

ವಡೋದರಾ: ರೈಲ್ವೇ ಉದ್ಯೋಗವನ್ನು ಪಡೆಯುವ ಹತಾಶ ಪ್ರಯತ್ನದಲ್ಲಿ, ಅಭ್ಯರ್ಥಿಯೊಬ್ಬ ತನ್ನ ಹೆಬ್ಬೆರಳಿನ ಚರ್ಮವನ್ನು ಬಿಸಿ ಪ್ಯಾನ್ ಬಳಸಿ ತೆಗೆದು ಅದನ್ನು ತನ್ನ ಸ್ನೇಹಿತನ ಹೆಬ್ಬೆರಳಿಗೆ ಅಂಟಿಸಿದ ವಿದ್ಯಮಾನ ಬೆಳಕಿಗೆ ಬಂದಿದೆ. ಈತ ಸ್ನೇಹಿತ ಈತನ ಬಯೋಮೆಟ್ರಿಕ್ ಪರಿಶೀಲನೆಯಲ್ಲಿ ಓಕೆ ಆಗಿ ತನ್ನ ಸ್ಥಾನದಲ್ಲಿ ನೇಮಕಾತಿ ಪರೀಕ್ಷೆಗೆ ಹಾಜರಾಗುತ್ತಾನೆ ಎಂಬ ಭರವಸೆಯ ಮೇಲೆ ಈ ಕೃತ್ಯಕ್ಕೆ ಮುಂದಾಗಿದ್ದಾನೆ…!
ಆಗಸ್ಟ್ 22 ರಂದು ಗುಜರಾತ್‌ನ ವಡೋದರಾ ನಗರದಲ್ಲಿ ನಡೆದ ರೈಲ್ವೇ ನೇಮಕಾತಿ ಪರೀಕ್ಷೆಯ ಮೊದಲು ಬಯೋಮೆಟ್ರಿಕ್ ಪರಿಶೀಲನೆಯ ಸಮಯದಲ್ಲಿ ಪರೀಕ್ಷಾ ಮೇಲ್ವಿಚಾರಕರು ಸ್ಯಾನಿಟೈಸರ್ ಅನ್ನು ಅದರ ಮೇಲೆ ಸಿಂಪಡಿಸಿದಾಗ ಕೈಗೆ ಅಂಟಿಸಿದ್ದ ಹೆಬ್ಬೆರಳಿನ ಚರ್ಮವು ಉದುರಿಹೋಯಿತು, ಆಗ ವಿಷಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ವಂಚನೆ ಮತ್ತು ಫೋರ್ಜರಿಗಾಗಿ ವಡೋದರಾ ಪೊಲೀಸರು ಬುಧವಾರ ಬಿಹಾರದ ಮುಂಗೇರ್ ಜಿಲ್ಲೆಯ ಅಭ್ಯರ್ಥಿ ಮನೀಶ್ ಕುಮಾರ್ ಮತ್ತು ಆತನ ಸ್ನೇಹಿತ ರಾಜ್ಯಗುರು ಗುಪ್ತಾ ಅವರನ್ನು ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಎಸ್ ಎಂ ವರೋಟಾರಿಯಾ ತಿಳಿಸಿದ್ದಾರೆ. ಇಬ್ಬರೂ ಸಮಾರು 20ರ ವಯಸ್ಸಿನವರು. ಈ ಹಿಂದೆ 12 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಬಿಜೆಪಿ ಮೈತ್ರಿಕೂಟ Vs ಕಾಂಗ್ರೆಸ್‌ ಮೈತ್ರಿಕೂಟದ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಯಾರಿಗೆ ಎಷ್ಟು ಸ್ಥಾನಗಳು..? ಎಬಿಪಿ-ಸಿವೋಟರ್ ಸಮೀಕ್ಷೆ ಏನು ಹೇಳುತ್ತದೆ..?

ವಡೋದರಾದ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರಕಾರ, ರೈಲ್ವೇಯಿಂದ ಅಧಿಕೃತಗೊಂಡ ಖಾಸಗಿ ಕಂಪನಿಯು ಆಗಸ್ಟ್ 22 ರಂದು ಇಲ್ಲಿನ ಲಕ್ಷ್ಮಿಪುರ ಪ್ರದೇಶದ ಕಟ್ಟಡವೊಂದರಲ್ಲಿ ರೈಲ್ವೇ ‘ಡಿ’ ಗ್ರೂಪ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ಏರ್ಪಡಿಸಿತ್ತು, ಇದರಲ್ಲಿ 600 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.
“ಯಾವುದೇ ರೀತಿಯ ಮೋಸವನ್ನು ತಡೆಗಟ್ಟಲು, ಎಲ್ಲಾ ಅಭ್ಯರ್ಥಿಗಳು ತಮ್ಮ ಹೆಬ್ಬೆರಳಿನ ಗುರುತನ್ನು ನೀಡಬೇಕಾಗಿತ್ತು, ನಂತರ ಪರೀಕ್ಷೆಯ ಮೊದಲು ಬಯೋಮೆಟ್ರಿಕ್ ಸಾಧನದ ಮೂಲಕ ಅವರ ಆಧಾರ್ ಡೇಟಾದೊಂದಿಗೆ ಹೊಂದಾಣಿಕೆ ಮಾಡಲಾಯಿತು. ಆ ಸಮಯದಲ್ಲಿ, ಪದೇ ಪದೇ ಪ್ರಯತ್ನಿಸಿದರೂ ಮನೀಶ್ ಕುಮಾರ್ ಎಂಬ ಹೆಸರಿನ ಅಭ್ಯರ್ಥಿಯ ಹೆಬ್ಬೆರಳಿನ ಗುರುತನ್ನು ನೋಂದಾಯಿಸಲು ಸಾಧನವು ವಿಫಲವಾಯಿತು, ”ಎಂದು ವರೋಟಾರಿಯಾ ಹೇಳಿದರು.

ಅಭ್ಯರ್ಥಿ ತನ್ನ ಎಡಗೈಯನ್ನು ಪ್ಯಾಂಟ್‌ನ ಜೇಬಿನೊಳಗೆ ಇಟ್ಟು ಏನನ್ನಾದರೂ ಮರೆಮಾಡಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರಿಗೆ ಅನುಮಾನ ಬಂದಿತು. “ಮೇಲ್ವಿಚಾರಕರು ಆತನ ಎಡಗೈ ಹೆಬ್ಬೆರಳಿಗೆ ಸ್ಯಾನಿಟೈಸರ್ ಅನ್ನು ಸಿಂಪಡಿಸಿದಾಗ, ಅದರ ಮೇಲೆ ಅಂಟಿಸಲಾದ ಚರ್ಮವು ಉದುರಿಹೋಯಿತು” ಎಂದು ಅಧಿಕಾರಿ ಹೇಳಿದರು. ವಂಚನೆಯ ಬಗ್ಗೆ ತಿಳಿದ ನಂತರ ಸಂಸ್ಥೆಯು ಪೊಲೀಸರಿಗೆ ಕರೆ ಮಾಡಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ನಕಲಿ), 419 (ಸೋಗು ಹಾಕುವ ಮೂಲಕ ವಂಚನೆ) ಮತ್ತು 120-ಬಿ (ಅಪರಾಧದ ಪಿತೂರಿ) ಅಡಿಯಲ್ಲಿ ದೂರು ದಾಖಲಿಸಿದೆ.
ಸಿಕ್ಕಿಬಿದ್ದ ವ್ಯಕ್ತಿ ತನ್ನ ನಿಜವಾದ ಹೆಸರು ರಾಜ್ಯಗುರು ಗುಪ್ತ ಎಂದು ಪೊಲೀಸರಿಗೆ ತಿಳಿಸಿದ್ದು, ತನ್ನ ಸ್ನೇಹಿತ ಮನೀಶ್ ಕುಮಾರ್ ಎಂದು ಸುಳ್ಳು ಹೇಳಿ ಪರೀಕ್ಷೆಗೆ ಹಾಜರಾಗಲು ಬಂದಿದ್ದು ಗೊತ್ತಾಯಿತು. ಗುಪ್ತಾ ಅಧ್ಯಯನದಲ್ಲಿ ಮುಂದಿದ್ದ. ಹೀಗಾಗಿ ರೈಲ್ವೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಕುಮಾರ್, ನಕಲಿ ಗುರುತಿನ ಮೂಲಕ ಗುಪ್ತಾನನ್ನು ನೇಮಕಾತಿ ಪರೀಕ್ಷೆಗೆ ಕಳುಹಿಸುವ ಆಲೋಚನೆಯನ್ನು ಹೊಂದಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಅಮೇಥಿಯಲ್ಲಿ ಸ್ಪರ್ಧೆ ವಿಚಾರ, ರಾಹುಲ್‌ ಗಾಂಧಿ ಹೇಳಿದ್ದೇನು..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement