ನೀವು ಇಲ್ಲೇಕೆ ಬಂದಿರಿ, ಭಾರತಕ್ಕೆ ವಾಪಸ್ ಹೋಗಿ: ಅಮೆರಿಕದಲ್ಲಿ ಭಾರತೀಯ ಮೂಲದ ಮಹಿಳೆಯರಿಗೆ ಜನಾಂಗೀಯ ನಿಂದನೆ, ಹಲ್ಲೆ | ವೀಡಿಯೊವೀಕ್ಷಿಸಿ

ಟೆಕ್ಸಾಸ್: ಭಾರತದ ಮೂಲದ ನಾಲ್ವರು ಅಮೆರಿಕನ್ನರ ಗುಂಪಿನ ಮೇಲೆ ಜನಾಂಗೀಯ ನಿಂದನೆ ಮಾಡಿ, ಹಲ್ಲೆ ನಡೆಸಿದ ಆರೋಪದಲ್ಲಿ ಮೆಕ್ಸಿಕನ್- ಅಮೆರಿಕನ್ ಮಹಿಳೆಯನ್ನು ಟೆಕ್ಸಾಸ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತೀಯ ಮೂಲದ ಅಮೆರಿಕದ ಮಹಿಳೆಯರನ್ನು ಜನಾಂಗೀಯವಾಗಿ ನಿಂದಿಸಿರುವ ಈ ಮಹಿಳೆ, ‘ಭಾರತಕ್ಕೆ ವಾಪಸ್ ಹೋಗಿ’ ಎಂದು ತಾಕೀತು ಮಾಡುವುದು ವೀಡಿಯೊದಲ್ಲಿ ಸೆರೆಯಾಗಿದೆ.
ಈ ಘಟನೆ ಟೆಕ್ಸಾಸ್‌ನ ದಲ್ಲಾಸ್‌ನಲ್ಲಿ ನಡೆದಿದ್ದು, ನನ್ನ ಅಮ್ಮ ಮತ್ತು ಅವರ ಮೂವರು ಸ್ನೇಹಿತೆಯರು ಡಿನ್ನರ್‌ಗಾಗಿ ಹೋದಾಗ ಈ ಘಟನೆ ನಡೆದಿದೆ ಎಂದು ವೀಡಿಯೊ ಪೋಸ್ಟ್ ಮಾಡಿರುವ ಮಹಿಳೆ ಹೇಳಿದ್ದಾರೆ.

ಅಮೆರಿಕದ ಟೆಕ್ಸಾಸ್ ನಗರದ ದಲ್ಲಾಸ್‌ನ ರೆಸ್ಟೋರೆಂಟ್ ಒಂದರ ಪಾರ್ಕಿಂಗ್ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ತಾನು ಮೆಕ್ಸಿಕೋ- ಅಮೆರಿಕನ್ ಎಂದು ಆ ಮಹಿಳೆ ಹೇಳಿಕೊಂಡಿರುವುದು ವಿಡಿಯೋದಲ್ಲಿದೆ. ಆ ಮೆಕ್ಸಿಕನ್- ಅಮೆರಿಕನ್ ಮಹಿಳೆಯನ್ನು ಪ್ಲ್ಯಾನೋದ ಎಸ್ಮೆರಾಲ್ಡಾ ಅಪ್ಟೋನ್ ಎಂದು ಗುರುತಿಸಲಾಗಿದೆ. ನಾನು ಭಾರತೀಯರನ್ನು ದ್ವೇಷಿಸುತ್ತೇನೆ. ಈ ಎಲ್ಲ ಭಾರತೀಯರು ಉತ್ತಮ ಜೀವನ ಬೇಕೆಂದು ಅಮೆರಿಕಕ್ಕೆ ಬರುತ್ತಾರೆ” ಎಂದಿರುವ ಆಕೆ, ಪದೇ ಪದೇ ಕೆಟ್ಟ ಪದಗಳನ್ನು ಬಳಸಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಪ್ರಮುಖ ಸುದ್ದಿ :-   ನೂತನ ಪೋಪ್ ಆಗಿ ಆಯ್ಕೆಯಾದ ರಾಬರ್ಟ್ ಪ್ರೇವೋಸ್ಟ್

ಮೆಕ್ಸಿಕನ್- ಅಮೆರಿಕನ್ ಮಹಿಳೆ ನಿಂದಿಸುವಾಗ, ಒಬ್ಬ ಮಹಿಳೆ ಮಾತ್ರ ಆಕೆಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಉಳಿದ ಮೂವರು ಸುಮ್ಮನಿದ್ದರು. ಜನಾಂಗೀಯ ನಿಂದನೆಗಳನ್ನು ಮಾಡಬೇಡಿ ಆಕೆಗೆ ಭಾರತ ಮೂಲದ ಮಹಿಳೆ ಹೇಳಿದ್ದಾರೆ. ನಂತರ ತಾನು ಅಮೆರಿಕದಲ್ಲಿಯೇ ಜನಿಸಿದ್ದು ಎಂದು ಹೇಳಿಕೊಂಡ ಆಕೆ, ಭಾರತೀಯ ಮೂಲದ ಮಹಿಳೆಯರ ಮೇಲೆ ಹಲ್ಲೆ ನಡೆಸುವುದು ಕೂಡ ವೀಡಿಯೊದಲ್ಲಿ ಸೆರೆಯಾಗಿದೆ. “ನಾನು ಎಲ್ಲಿಗೆ ಹೋದರೂನೀವು ಭಾರತೀಯರು ಇರುತ್ತೀರಿ” ಎಂದು ಕೂಗಾಡಿದ್ದಾಳೆ. ಭಾರತದಲ್ಲಿನ ಜೀವನ ಅಷ್ಟು ಅದ್ಭುತವಾಗಿದ್ದರೆ ನೀವೇಕೆ ಇಲ್ಲಿದ್ದೀರಿ?” ಎಂದು ನಿಂದಿಸಿದ ಬಳಿಕ ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದಾಳೆ.
ಪ್ಲ್ಯಾನೋ ಪೊಲೀಸರು ಎಸ್ಮೆರಾಲ್ಡಾ ಅಪ್ಟೋನ್ ಎಂಬ ಈ ಮಹಿಳೆಯನ್ನು ಬಂಧಿಸಲಾಗಿದೆ. ಬಂಧಿಸಿದ್ದಾರೆ. ಆಕೆ ವಿರುದ್ಧ ಹಲ್ಲೆ, ಗಾಯ ಮಾಡಿರುವುದು ಮತ್ತು ಬೆದರಿಕೆ ಆರೋಪಗಳನ್ನು ದಾಖಲಿಸಲಾಗಿದೆ. ಆಕೆಯ ಬಳಿ ಗನ್ ಇತ್ತು. ಭಾರತೀಯ- ಅಮೆರಿಕನ್ ಮಹಿಳೆಯರು ಇಂಗ್ಲಿಷ್ ಮಾತನಾಡುವಾಗಿನ ಉಚ್ಛಾರಣೆಯನ್ನು ಕೇಳಿ ಆಕೆ ಶೂಟ್ ಮಾಡಲು ಕೂಡ ಬಯಸಿದ್ದಳು. ದ್ವೇಷ ಅಪರಾಧಕ್ಕಾಗಿ ಈ ಮಹಿಳೆಯನ್ನು ಶಿಕ್ಷೆಗೆ ಒಳಪಡಿಸಬೇಕು” ಎಂದು ಅಮೆರಿಕದ ರಾಜಕಾರಣಿ ರೀಮಾ ರಸೂಲ್ ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಒಳಗೆ ನುಗ್ಗಿ ಹೊಡೀತಿದ್ದಾರೆ, ದೇವರೇ ನಮ್ಮನ್ನು ಕಾಪಾಡಬೇಕು : ಭಾರತದ ದಾಳಿ ನಂತ್ರ ಸಂಸತ್ತಿಲ್ಲಿ ಕಣ್ಣೀರಿಟ್ಟ ಪಾಕ್‌ ಸಂಸದ-ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement