ತುಮಕೂರು ವಿಶ್ವ ವಿದ್ಯಾಲಯದಲ್ಲಿ ವೀರ್‌ ಸಾವರ್ಕರ್ ಅಧ್ಯಯನ ಪೀಠ

ತುಮಕೂರು: ವೀರ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ತುಮಕೂರು ವಿಶ್ವ ವಿದ್ಯಾಲಯ ಶುಕ್ರವಾರ ಒಪ್ಪಿಗೆ ಸೂಚಿಸಿದೆ.
ಪ್ರಸಕ್ತ ಸಾಲಿನ 6ನೇ ಸಿಂಡಿಕೇಟ್ ಸಭೆಯಲ್ಲಿ ಸಾವರ್ಕರ್ ಅಧ್ಯಯನ ಪೀಠಕ್ಕೆ ಒಪ್ಪಿಗೆ ನೀಡಲಾಗಿದ್ದು, ಇದಕ್ಕಾಗಿ ಆಂತರಿಕ ನಿಧಿ ಬಳಸಿಕೊಳ್ಳಲು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶುಕ್ರವಾರ ನಡೆದ ಸಭೆಯಲ್ಲಿ ವಿವಿ ಸಿಂಡಿಕೇಟ್ ಸದಸ್ಯ ವಿನಯ್ ಸಭೆಯ ಅಜೆಂಡಾದಲ್ಲಿ ಸಾವರ್ಕರ್ ಪೀಠ ಸ್ಥಾಪನೆಯ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ.

ವಿವಿಯಲ್ಲಿ 14 ಅಧ್ಯಯನ ಪೀಠಗಳಿದ್ದು, ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅಗ್ನಿ ಬನ್ನಿಗರಾಯ ಅಧ್ಯಯನ ಪೀಠ ಸ್ಥಾಪಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ. ವಿನಾಯಕ ದಾಮೋದರ್​ ಸಾವರ್ಕರ್​ ಅಧ್ಯಯನ ಪೀಠಕ್ಕೂ ಸಿಂಡಿಕೇಟ್‌ ಒಪ್ಪಿಗೆ ಸೂಚಿಸಿದ್ದರಿಂದ ಪ್ರಸ್ತುತ ಪೀಠಗಳ ಸಂಖ್ಯೆ 16ಕ್ಕೇರಲಿದೆ.

ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಸದಸ್ಯ ವಿನಯ್ 1 ಲಕ್ಷ ರೂ. ಮೂಲ ಠೇವಣಿಯನ್ನು ಇಟ್ಟಿದ್ದಾರೆ. ಸಾವರ್ಕರ್ ಪೀಠ ಸ್ಥಾಪನೆಗೆ ಅಗತ್ಯ ಇರುವ ಕರಡು ಪರಿನಿಯಮ ಸಿದ್ಧಗೊಂಡಿದ್ದು, ಪೀಠ ಕಾರ್ಯಾರಂಭಕ್ಕೆ ಬೇಕಾಗಿರುವ 25 ಲಕ್ಷ ರೂ.ಗಳನ್ನು ದಾನಿಗಳಿಂದ ಸಂಗ್ರಹಿಸಲು ನಿರ್ಧಾರ ಮಾಡಿದ್ದಾರೆ.
ಸಿಂಡಿಕೇಟ್ ಸದಸ್ಯ ವಿನಯ್ ಈ ಕುರಿತು ಮಾತನಾಡಿ , ನಿನ್ನೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ನಿರ್ಧರಿಸಲಾಗಿದೆ. ನಾನು ಅದರ ಪ್ರಸ್ತಾವನೆಯನ್ನು ಸಭೆ ಮುಂದಿಟ್ಟಿದ್ದೆ. ಸರ್ವಾನುಮತದಿಂದ ಅನುಮೋದನೆಗೊಂಡಿದೆ. ಆರಂಭಿಕವಾಗಿ ನಾನು 1 ಲಕ್ಷ ರೂ. ಠೇವಣಿ ಇಟ್ಟಿದ್ದೇನೆ. ಮುಂದಿನದ ದಿನದಲ್ಲಿ ಎಲ್ಲವೂ ಅನುಷ್ಠಾನ ಆಗಲಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

5 / 5. 1

ಶೇರ್ ಮಾಡಿ :

  1. geek

    ಇದೇ ರೀತಿ ಅಂಡಮಾನಿನ ಕರಿನೀರಿನ ಶಿಕ್ಷೆಗೊಳಗಾದರೂ ಎಂದೂ ಕ್ಷಮಾಪಣೆ ಕೇಳದೇ ಕಠಿಣ ಶಿಕ್ಣೆಗ ಓಳಗಾದ ನೂರಾರು ಕಮ್ಯುನಿಸ್ಟ್ ಕಾರ್ಯಕರ್ತರ ಕುರಿತೂ ಅಧ್ಯಯನ ಪೀಠ ಸ್ಥಾಪನೆಯಾಗಬಹುದೇ. ಕ್ಷಮಾಪಣೆ ಕೇಳಿದ ನಂತರ ಬ್ರಿಟಿಷರಿಗೆ ವಿಧೇಯರಾಗಿ ವರ್ತಿಸಿದ ಸಾವರ್ಕರ್ ರವರಿಗೇ ಇಷ್ಟು ಗೌರವ ಸಲ್ಲಬೇಕಾದರೆ ಕ್ಷಮಾಪಣೆ ಕೇಳದೇ ಅಂಡಮಾನ್ ಶಿಕ್ಷೆಯನ್ನು ಅನುಭವಿಸಿದ ಕಮ್ಯೂನಿಸ್ಟ್ ಕಾರ್ಯಕರ್ತರಿಗೆ ಯಾವ ಗೌರವ ಸಲ್ಲಬೇಕು ?
    ಹೆಚ್ಚನ ಮಾಹಿತಿಗೆ ಅಂಡಮಾನ್ ಜೈಲಿನಲ್ಲಿ ನಡೆದ ಕಮ್ಯೂನಿಸ್ಟ್ ಕನ್ಸೋಲಿಡೇಶನ್ ಕುರಿತು ಓದಬಹುದು.

ನಿಮ್ಮ ಕಾಮೆಂಟ್ ಬರೆಯಿರಿ

advertisement