ಶಿರಸಿಯಲ್ಲಿ ಪೆಟ್ರೋಲ್‌-ಡೀಸೆಲ್‌ ದರ ಹೆಚ್ಚಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಗಮನಸೆಳೆದ ಡಾ.ರವಿಕಿರಣ ಪಟವರ್ಧನ್: ಇಳಿಯಿತು ದರ…!

ಶಿರಸಿ: ಸಾಮಾನ್ಯ ವ್ಯಕ್ತಿಯೊಬ್ಬರ ಸಮಾಜಮುಖಿ ಚಿಂತನೆಗೆ ಕೇಂದ್ರ ಸ್ಪಂದಿಸಿರುವ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಆಗುತ್ತಿದ್ದ ನಷ್ಟ ತಪ್ಪಿಸಿದೆ.
ಸಮಾಜಮುಖಿ ಚಿಂತನೆಗಳಿಂದ ಗುರುತಿಸಿಕೊಂಡಿರುವ ಶಿರಸಿಯ ಖ್ಯಾತ ಆಯುರ್ವೇದ ವೈದ್ಯ ಡಾ.ರವಿಕಿರಣ ಪಟವರ್ಧನ, ಕಳೆದ ಜೂನ್ ಮೊದಲ ವಾರದಲ್ಲಿ ಶಿರಸಿಯಲ್ಲಿ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಪೆಟ್ರೋಲ್ ಮತ್ತು ಡಿಸೇಲ್ ದರ ಇರುವುದನ್ನು ಉಲ್ಲೇಖಿಸಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು. ಜೊತೆಗೆ ದರವನ್ನು ಕಡಿಮೆ ಮಾಡುವ ಬಗೆಗಿನ ಮಾರ್ಗೋಪಾಯಗಳ ಬಗ್ಗೆಯೂ ಮಾಹಿತಿಯನ್ನೂ ನೀಡಿದ್ದರು. ಅದರ ನಂತರದಲ್ಲಿ ಪತ್ರದ ವಿಷಯವನ್ನು ಪೆಟ್ರೋಲಿಯಂ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ ಎಂಬ ಹಣಕಾಸು ಸಚಿವಾಲಯದಲ್ಲಿಂದ ಅವರಿಗೆ ಉತ್ತರ ಬಂದಿತ್ತು.

ಈಗ ಇಂಡಿಯನ್ ಆಯಿಲ್ ಕಂಪನಿಯಿಂದ ಡಾ. ಪಟವರ್ಧನ ಅವರಿಗೆ ಪ್ರತ್ಯುತ್ತರ ಬಂದಿದ್ದು, ಅದರಲ್ಲಿ ಕೇಂದ್ರ ಸರಕಾರದ ಪೆಟ್ರೋಲಿಯಂ/ನ್ಯಾಚುರಲ್ ಗ್ಯಾಸ್ ಇಲಾಖೆಗೆ ಡಾ. ಪಟವರ್ಧನ್ ಬರೆದ ಪತ್ರದ ಸಾರಾಂಶವನ್ನು ಉಲ್ಲೇಖಿಸಿ, ಅವರು ಉಲ್ಲೇಖಿಸಿದಂತೆ ಮಂಗಳೂರಿನಿಂದ ಶಿರಸಿಗೆ ಬರುತ್ತಿದ್ದ ಪೆಟ್ರೋಲ್/ಡಿಸೇಲ್ ಬದಲಾಗಿ ಹುಬ್ಬಳ್ಳಿಯಿಂದ ಸರಬರಾಜು ಮಾಡಲಾಗುವುದು ಎಂಬ ಮಾಹಿತಿ ನೀಡಿದ್ದಾರೆ. ಆ ಮೂಲಕ ಶಿರಸಿಯಲ್ಲಿ ಅಂದಾಜು ಪೆಟ್ರೋಲ್ ಪ್ರತಿ ಲೀಟರಿಗೆ 1.19 ರೂ.ಗಳು ಮತ್ತು ಡೀಸೆಲ್ 1.01 ರೂ. ಗಳಷ್ಟು ಕಡಿಮೆಯಾಗಲಿದೆಯಂತೆ.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

ಶಿರಸಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಇಧನ ದರ ಇರುವುದಕ್ಕೆ ಮುಖ್ಯವಾಗಿ ಮಂಗಳೂರು ವಲಯದಿಂದ ಪೂರೈಕೆಯಾಗಿ, ಅಲ್ಲೇ ದರ ನಿಗದಿ ಆಗುವುದೇ ಆಗಿತ್ತು. ಈಗ ಹುಬ್ಬಳ್ಳಿ ವಲಯದಿಂದ ಇಂಧನ ಪೂರೈಕೆಯಾಗುವುದರಿಂದ ಹುಬ್ಬಳ್ಳಿಯಲ್ಲಿ ದರ ನಿಗದಿ ಮಾಡಲಾಗುತ್ತದೆ. ಹೀಗಾಗಿ ಶಿರಸಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 1.19ರೂ. ಮತ್ತು ಡೀಸೆಲ್ 1.01ರೂ. ಗಳಷ್ಟು ಕಡಿಮೆಯಾಗಲಿದೆಯಂತೆ.
ಗೋಕರ್ಣದ ಕೋಟಿತೀರ್ಥದ ಶುದ್ಧೀಕರಣಕ್ಕೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ಪತ್ರಮುಖೇನ ಆಗ್ರಹಿಸಿ, ಉತ್ತರವನ್ನು ಪಡೆದಿದ್ದರು. ಅಲ್ಲದೆ ಅವರ ಪ್ರಯತ್ನದಿಂದ ಕೋಟಿ ತೀರ್ಥ ಶುದ್ಧೀಕರಣಕ್ಕೆ ಚಾಲನೆ ಸಿಕ್ಕಿತ್ತು. ಅವರ ಪ್ರಯತ್ನದ ಫಲವಾಗಿ ಎಲ್ಲರ ಸಹಕಾರದಿಂದ ಕೋಟಿತೀರ್ಥದಲ್ಲಿ ಸುಧಾರಣೆಯಾಗಿದೆ, ಹೊಸ ಯೋಜನೆಯೊಂದಿಗೆ ಶುದ್ಧೀಕರಿಸಲಾಗಿದೆ. ಅಲ್ಲದೆ, ಡಾಕ್ಟರ್ ರವಿಕಿರಣ ಪಟವರ್ಧನ್ ಅವರು ಸರ್ಕಾರದ ಯೋಜನೆಗಳ ಮಾಹಿತಿ, ಇನ್ಶ್ಯುರೆನ್ಸ್ ಮಾಹಿತಿ, ರಕ್ತದಾನಿಗಳ ಮಾಹಿತಿ ಸೇರಿದಂತೆ ಸಾಕಷ್ಟು ಜನಪರ ಕಾರ್ಯವನ್ನು ಮಾಡುತ್ತಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement