ಮಠಕ್ಕೆ ಮುರುಘಾ ಶ್ರೀಗಳು ವಾಪಸ್-ಸಂಕಟವನ್ನು ಧೈರ್ಯವಾಗಿ ಎದುರಿಸ್ತೇನೆ, ಸಹನೆಯಿಂದ ಇರಿ: ಭಕ್ತರಿಗೆ ಶ್ರೀಗಳ ಮನವಿ

ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳು ಮಠಕ್ಕೆ ಆಗಮಿಸಿದ್ದಾರೆ.
ಮಠದ ಆವರಣದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿd ಶ್ರೀಗಳು, ಬಂದಿರುವ ಸಂಕಟವನ್ನು ಧೈರ್ಯವಾಗಿ ಎದುರಿಸುತ್ತೇನೆ. ಈ ನೆಲದ ಕಾನೂನನ್ನು ಗೌರವಿಸಬೇಕುಯಾವುದೇ ಪಲಾಯನವಾದವಿಲ್ಲ. ಸಮಸ್ಯೆ ನಿವಾರಣೆ ಮಾಡುವ ಪ್ರಯತ್ನ ಮಾಡುತ್ತೇನೆ. ಇದು ಸಂಕಷ್ಟದ ಸಮಯವಾಗಿದೆ. ಯಾರಿಗೂ ಆತಂಕ ಬೇಡ. ಎಲ್ಲರೂ ಧೈರ್ಯ ಸಹನೆಯಿಂದ ಇರಿ ಎಂದು ಮನವಿ ಮಾಡಿಕೊಂಡರು.

ಬುದ್ಧಿವಂತಿಕೆಯಿಂದ ಸಮಸ್ಯೆ ಎದುರಿಸಬೇಕಾಗಿದೆ. ಇದಕ್ಕೆ ಮಠದ ಭಕ್ತರು ಸಹಕರಿಸಬೇಕು. ಮಠದ ಒಳಗೆ ನಡೆಯುತ್ತಿದ್ದ ಪಿತೂರಿ ಈಗ ಹೊರಗೆ ಬಂದಿದೆ. ಇಂತಹ ಸಂದರ್ಭಗಳು ನಮಗೆ ಬಂದಿದ್ದು ಇದೇ ಮೊದಲೇನು ಅಲ್ಲ. ಹೀಗಾಗಿ ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಶ್ರೀಗಳು ತಿಳಿಸಿದರು.

ನೆಲದ ಕಾನೂನನ್ನು ಗೌರವಿಸುವ ಮಠಾಧೀಶರು ನಾವಾಗಿದ್ದೇವೆ. ಎಲ್ಲಾ ರೀತಿಯ ಸಹಕಾರವನ್ನೂ ನೀಡುತ್ತೇವೆ. ನಾನು ಪಲಾಯನ ಮಾಡುವುದಿಲ್ಲ. ಶ್ರೀಮಠದ ಅಸಂಖ್ಯಾತ ಭಕ್ತರು ಅಭಿಮಾನಿಗಳು ಯಾವುದೇ ರೀತಿಯಾಗಿ ಊಹಾಪೋಹಗಳಿಗೆ ಕಿವಿಗೊಡಬಾರದು. ಗಾಳಿ ಸುದ್ದಿಯನ್ನು ನಂಬಬಾರದು ಎಂದು ನಾನು ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ನಾವು ನ್ಯಾಯದ ಸ್ಥಾನದಲ್ಲಿದ್ದೇವೆ. ಗುರುಗಳ ಮಠ ಒಂದಾನೊಂದು ಕಾಲದಲ್ಲಿ ಚಲಿಸುವ ನ್ಯಾಯಾಲಯವಾಗಿ ಕೆಲಸ ಮಾಡಿದೆ. ಇವತ್ತಿಗೂ ಕೂಡ ನಾವು ಎಲ್ಲಾ ವರ್ಗದವರಿಗೆ ನಾವು ಅತ್ಯಂತ ಪ್ರೀತಿಯಿಂದ ನೋಡಿಕೊಂಡು ಬಂದಂಥ ಸಂದರ್ಭಗಳಿವೆ. ಏನೋ ಒಂದು ಅಹಿತಕರವಾದ ಸಂದರ್ಭವಾಗಿದೆ. ನಾವುಗಳು ಅದರಿಂದ ಹೊರಬಂದೇ ಬರುತ್ತೇವೆ ಎಂದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಕುಮಟಾ : ಬಾಡದಲ್ಲಿ 26 ಗಂಟೆಗಳ ನಂತರ ಮನೆಗೆ ನುಗ್ಗಿದ್ದ ಚಿರತೆ ಬಂಧಿ ; ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದರು...

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಳು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಶ್ರೀಗಳ ವಿರುದ್ಧ ಮೈಸೂರಿನ ನಜರಾಬಾದ್​ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ಬಾಲಕಿಯರ ದೂರು ನೀಡಲಾಗಿತ್ತು. ಇಬ್ಬರು ಬಾಲಕಿಯರು ಲೂಂಗಿಕ ದೌರ್ಜನ್ಯದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement