3,800 ಕೋಟಿ ರೂ.ಗಳ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ, ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಯೇ ಟೀಕಿಸುವವರಿಗೆ ಉತ್ತರ : ಮೋದಿ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಬಂದರು, ಒಳನಾಡು ಜಲಸಾರಿಗೆಗೆ ಸಂಬಂಧಿಸಿದ 3,800 ಕೋಟಿ ರೂ.ಗಳ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಇದೇವೇಳೆ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ 1,830 ಕೋಟಿ ರೂ ವೆಚ್ಚದ ಎರಡು ಯೋಜನೆಗಳನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬ್ರಿಟಿಷರ ದಾಸ್ಯದಿಂದ ದೇಶವನ್ನು ಬಿಡಿಸಿಕೊಳ್ಳಲು ವೀರ ವನಿತೆ ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ ನಮಗೆ ಪ್ರೇರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕದ ಪಾತ್ರವನ್ನು ಕೊಂಡಾಡಿದರು. ಮಂಗಳೂರು ಬಂದರು 25,000 ಜನರನ್ನು ನಿರ್ವಹಿಸುತ್ತದೆ. ಭಾರತದಲ್ಲಿ ಕ್ರೂಸ್ ಟೂರಿಸಂಗೆ ನವ ಮಂಗಳೂರು ಬಂದರು ಸೂಕ್ತವಾಗಿದೆ. ಇದರ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಕರಾವಳಿಯ ಭರಪೂರ ಲಾಭವನ್ನು ನಾವು ಪಡೆಯಬೇಕಿದೆ ಎಂದರು.

ಕರ್ನಾಟಕ ಸಂಪದ್ಭರಿತ ರಾಜ್ಯ. ವೀರತ್ವಕ್ಕೆ ಹೆಸರುವಾಸಿ. ಇದು ಮೇಧಾವಿಗಳನ್ನು ಸೃಷ್ಟಿಸಿದ ನಾಡು, ತೀರ್ಥಕ್ಷೇತ್ರಗಳ ಬೀಡು. ʻವೀರ ರಾಣಿಯರಾದ ಅಬ್ಬಕ್ಕ, ಕಿತ್ತೂರು ಚೆನ್ನಮ್ಮನವರ ಹೋರಾಟ ಸ್ಮರಿಸಿದ ಪ್ರಧಾನಿ ಮೋದಿ, ಬ್ರಿಟಿಷರ ದಾಸ್ಯದಿಂದ ದೇಶವನ್ನು ಬಿಡಿಸಿಕೊಳ್ಳಲು ಈ ವೀರ ವನಿತೆಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದರು. ಇವರೆಲ್ಲರೂ ನಮಗೆ ಪ್ರೇರಣೆʼ ಎಂದು ಹೇಳಿದರು.ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪಂಚ ಪ್ರಾಣದ ಬಗ್ಗೆ ಬಗ್ಗೆ ಮಾತನಾಡಿದ್ದೆ. ಅವುಗಳಲ್ಲಿ ಅಭಿವೃದ್ಧಿ ಹೊಂದಿದ ದೇಶದ ನಿರ್ಮಾಣವೂ ಒಂದು. ಇದಕ್ಕಾಗಿ ನಮ್ಮ ರಫ್ತು ಹೆಚ್ಚಿಸುವುದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವುದು ಬಹಳ ಮುಖ್ಯವಾಗಿದೆ. ಇದಕ್ಕಾಗಿ ಮೂಲಸೌಕರ್ಯ ವಿಸ್ತರಣೆ, ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಈಗ ದೇಶದ ಬಂದರುಗಳ ಸಾಮರ್ಥ್ಯ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಮೆಟ್ರೋ ಸೌಲಭ್ಯ ಹೊಂದಿರುವ ನಗರಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು ಎಂದು ಹೇಳಿದರು.
ಮಂಗಳೂರು ಬಂದರಿನಲ್ಲಿ ನೂತನ ತಂತ್ರಜ್ಞಾನದ ಅಳವಡಿಕೆಯಾಗಿದೆ. ಹೀಗಾಗಿ ಅದರ ಸಾಮರ್ಥ್ಯ ಮತ್ತು ದಕ್ಷತೆ ಎರಡೂ ಹೆಚ್ಚಾಗಲಿದೆ. ಈ ಅಳವಡಿಕೆಯಿಂದ ಕರ್ನಾಟಕ ಮತ್ತು ದೇಶಕ್ಕೆ ದೊಡ್ಡ ಲಾಭವಾಗಲಿದೆ. ಖಾದ್ಯ ತೈಲ, ಎಲ್‌ಪಿಜಿ ಅನಿಲ ಆಮದು ವೆಚ್ಚ ಸಹ ಕಡಿಮೆಯಾಗಲಿದೆ. ಸಾಗರಮಾಲಾ ಯೋಜನೆಯಲ್ಲಿ ಬಹಳ ದೊಡ್ಡ ಲಾಭ ಪಡೆಯಲಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ ಎಂದರು.

ಇಂದಿನ ಪ್ರಮುಖ ಸುದ್ದಿ :-   ಶಿವಮೊಗ್ಗ ಕಲ್ಲು ತೂರಾಟದ ಘಟನೆ: 24 ಎಫ್‌ಐಆರ್‌ ದಾಖಲು, 60 ಮಂದಿ ಅರೆಸ್ಟ್‌

ಕರ್ನಾಟಕದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. 30 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ. ನವ ಭಾರತವು ಹೊಸ ಅವಕಾಶಗಳ ಭೂಮಿ. ನಾವು 3,800 ಕೋಟಿ ರೂ ವೆಚ್ಚದ ವಿವಿಧ ಕೈಗಾರಿಕಾ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದೇವೆ. ಈ ಯೋಜನೆಗಳು ಉದ್ಯಮ ನಿರ್ವಹಣೆಯನ್ನು ಮತ್ತಷ್ಟು ಸುಗಮಗೊಳಿಸುವುದಲ್ಲದೆ, ವ್ಯಾಪಾರ ಮತ್ತು ವಾಣಿಜ್ಯವನ್ನು ವೃದ್ಧಿಸಲು ನೆರವಾಗಲಿವೆ ಎಂದರು.
ಒಂದು ಜಿಲ್ಲೆ ಒಂದು ಉತ್ಪನ್ನದ ಯೋಜನೆ ಮೂಲಕ ಕರ್ನಾಟಕದಲ್ಲಿನ ಅನೇಕ ವಸ್ತುಗಳಿಗೆ ಮಾರುಕಟ್ಟೆ ಅವಕಾಶಗಳನ್ನು ತೆರೆಯುವುದು ಸಾಧ್ಯ. ಮೇಕ್ ಇನ್ ಇಂಡಿಯಾದ ಯಶಸ್ಸು, ರಫ್ತು ಹೆಚ್ಚಳ ಆ ಮೂಲಕ ಭಾರತದ ಅಭಿವೃದ್ಧಿಗೆ ಮಹತ್ವದ್ದಾಗಿದೆ. ಇದಕ್ಕೆ ಬೆಂಬಲವಾಗಿ ಉತ್ತಮ ಸಂಗ್ರಹ ವ್ಯವಸ್ಥೆಗಾಗಿ ನಾವು ನಮ್ಮ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ತಿಳಿಸಿದರು.
ನವ ಮಂಗಳೂರು ಬಂದರು 25,000 ಜನರನ್ನು ನಿರ್ವಹಿಸುತ್ತದೆ. ಭಾರತದಲ್ಲಿ ಕ್ರೂಸ್ ಟೂರಿಸಂಗೆ ನವ ಮಂಗಳೂರು ಬಂದರು ಸೂಕ್ತವಾಗಿದೆ. ಇದರ ಬಗ್ಗೆ ಹೆಚ್ಚು ನಿರೀಕ್ಷೆ ಇದ್ದು, ಈ ಕರಾವಳಿಯ ಭರಪೂರ ಲಾಭ ಪಡೆಯಬೇಕಿದೆ ಎಂದರು.

ಕರ್ನಾಟಕದಲ್ಲಿ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ ನೀಡಲಾಗಿದೆ. ಮೀನುಗಾರರ ಆದಾಯವನ್ನು ಹೆಚ್ಚಿಸಲು ಅವರಿಗೆ ಉತ್ತಮ ದೋಣಿಗಳನ್ನು ಮತ್ತು ತಂತ್ರಜ್ಞಾನಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ನಡೆಸುತ್ತಿದ್ದೇವೆ ಎಂದರು.
ದೇಶದ ಜನತೆಗೆ ವೇಗವಾದ ಇಂಟರ್ನೆಟ್ ಸಂಪರ್ಕ ಬೇಕು. ದೇಶಾದ್ಯಂತ ಆಪ್ಟಿಕಲ್ ಫೈಬರ್ ಮೂಲಕ ಗ್ರಾ.ಪಂಗಳನ್ನು ಸಂಪರ್ಕಿಸುವ ಕೆಲಸವಾಗುತ್ತಿದೆ. ಇದು ಗ್ರಾಮಿಣ ಬೆಳವಣಿಗೆ ಅವಶ್ಯಕ ಹಾಗೂ ಗ್ರಾಮೀಣ ಜನರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.
21ನೇ ಶತಮಾನದಲ್ಲಿ ಭಾರತವು ‘ಹಸಿರು ಬೆಳವಣಿಗೆ’ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ. ಕರ್ನಾಟಕದ ರಿಫೈನರಿಗಳಲ್ಲಿ ಬಳಸುತ್ತಿರುವ ತಂತ್ರಜ್ಞಾನವು ಹಿಸರು ಬೆಳವಣಿಗೆಯ ಲಕ್ಷ್ಯವಿಟ್ಟು ಅಳವಡಿಸಲಾಗಿದೆ.
ಬಡವರು ಉತ್ತಮ ಗುಣಮಟ್ಟದ ಆರೋಗ್ಯ ಆರೈಕೆ ಪಡೆಯುವುದು ಸಾಧ್ಯವಾಗುವಂತೆ ಆಯುಷ್ಮಾನ್ ಭಾರತ್ ಮಹತ್ವದ ಪಾತ್ರ ನಿಭಾಯಿಸಿದೆ. 30 ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಯುಷ್ಮಾನ್ ಕಾರ್ಡ್ ಸೌಲಭ್ಯ ನೀಡಲಾಗಿದೆ. ಹಣ ಉಳಿತಾಯಕ್ಕೆ ಆಯುಷ್ಮಾನ್ ಭಾರತ್ ನೆರವು ನೀಡಿದೆ. ಸಣ್ಣ ರೈತರು, ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಿದೆ. ಜಗತ್ತಿನ ಅತಿ ದೊಡ್ಡ ವಿಮಾ ಯೋಜನೆಯೊಂದಿಗೆ ನಾವು ಆರೋಗ್ಯ ವ್ಯವಸ್ಥೆಯನ್ನು ತಳಮಟ್ಟದವರೆಗೂ ಕರೆದೊಯ್ದಿದ್ದೇವೆ ಎಂದರು.

ಇಂದಿನ ಪ್ರಮುಖ ಸುದ್ದಿ :-   ಮಾಜಿ ಶಾಸಕ ರೇಣುಕಾಚಾರ್ಯ ಪುತ್ರಿ ಜಾತಿ ಪ್ರಮಾಣ ಪತ್ರ ಪ್ರಕರಣ ಮತ್ತೆ ಮುನ್ನೆಲೆಗೆ

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement