ಸಮಸ್ಯೆ ಹೇಳಲು ಬಂದ ಮಹಿಳೆಗೆ ನಿಂದಿಸಿ, ದರ್ಪ ತೋರಿದ ಶಾಸಕ ಲಿಂಬಾವಳಿ: ಪ್ರಶ್ನಿಸಿದ್ದಕ್ಕೆ ಮಹಿಳೆ ಪೊಲೀಸರ ವಶಕ್ಕೆ: ವೀಡಿಯೊ ವೈರಲ್‌

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮತ್ತೊಮ್ಮೆ ವಿವಾದಕ್ಕೀಡಾಗಿದ್ದು, ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ದು,  ವಾಪಸ್ ಕಳುಹಿಸಲಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ವಾಣಿಜ್ಯ ಕಟ್ಟಡದ ಕಾಂಪೌಂಡ್ ಗೋಡೆಯನ್ನು ಬುಲ್ಡೋಜರ್ ಮಾಡಿತು, ಮಳೆ ನೀರು ಹರಿದುಹೋಗುವ ಸ್ಪೂಟ್ ಮೇಲೆ ಅದನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಈ ಕಾಂಪ್ಲೆಕ್ಸ್‌ನ ಮಾಲಕಿ ರುತ್‌ಸಗಾಯ್ ಮೇರಿ ಅಮೀಲಾ, ಸರಕಾರಿ ಸರ್ವೇಯರ್‌ ಅವರಿಂದ ಸರ್ವೆ ಮಾಡಿ ಇಲಾಖಾ ಅನುಮೋದನೆ ಪಡೆದ ನಂತರ ಗೋಡೆ ನಿರ್ಮಿಸಿದೆ ಎಂದು ಹೇಳಿದ್ದಾರೆ. ಕಾಂಪೌಂಡ್ ಗೋಡೆಯ ಅರ್ಧ ಭಾಗ ಕೆಡವಲಾಗಿದೆ.
ಸೋಮವಾರ ಸುರಿದ ಮಳೆಗೆ ಮಹದೇವಪುರ ಕ್ಷೇತ್ರದ ಹಲವೆಡೆ ಜಲಾವೃತವಾಗಿದೆ. ಗುರುವಾರ ಮಧ್ಯಾಹ್ನ ನಲ್ಲೂರಹಳ್ಳಿಯ ವೈಟ್ ಫೀಲ್ಡ್ ಕೋಡಿ ಸರ್ಕಲ್ ಬಳಿಯ ರಾಜಕಾಲುವೆ ಒತ್ತುವರಿ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ ಕಾಲುವೆಗೆ ಹೊಂದಿಕೊಂಡಿರುವ ವಾಣಿಜ್ಯ ಕಟ್ಟಡದ ಒಂದು ಭಾಗವನ್ನು ಬುಲ್ಡೋಜರ್‌ಗಳಿಂದ ಕೆಡವಲಾಯಿತು. ಸಮಜಾಯಿಷಿ ನೀಡಲು ಮುಂದಾದ ಕಟ್ಟಡದ ಮಾಲಕಿ ಎಂ.ಎಸ್ .ಅಮೀಲಾ ಅವರು ದಾಖಲೆಗಳನ್ನು ತೋರಿಸಿ ಕ್ರಮಬದ್ಧವಾಗಿ ನಿರ್ಮಿಸಲಾಗಿದೆ ಎಂದು ಶಾಸಕರಿಗೆ ಮನವಿ ಮಾಡಿ ದಾಖಲೆ ತೋರಿಸಲು ಮುಂದಾದರು. ಈ ವೇಳೆ ಮಹಿಳೆಯ ಕೈಯಿಂದ ದಾಖಲೆ ಕಸಿದುಕೊಳ್ಳಲು ಶಾಸಕರು ಯತ್ನಿಸಿದ್ದಾರೆ. ಶಾಸಕರು ಮೊದಲು ತನ್ನ ಮಾತನ್ನು ಕೇಳಬೇಕೆಂದು ಮಹಿಳೆ ಒತ್ತಾಯಿಸಿದಾಗ, ಮಹಿಳೆಯನ್ನು ನಿಂದಿಸಲಾಯಿತು ಮತ್ತು ಬೆದರಿಕೆ ಹಾಕಲಾಯಿತು. ಈ ಘಟನೆ ಕ್ಯಾಮರಾದಲ್ಲಿ ದಾಖಲಾಗಿದೆ.

ವೀಡಿಯೋ ಕ್ಲಿಪ್‌ನಲ್ಲಿ, ಲಿಂಬಾವಳಿ ಮಹಿಳೆಯನ್ನು ಕರೆದುಕೊಂಡು ಹೋಗುವಂತೆ ಪೊಲೀಸರಿಗೆ ಸೂಚಿಸುವುದನ್ನು ಕೇಳಬಹುದು. ನಂತರ ಆಕೆಯನ್ನು ಒದ್ದು ಕಂಬಿ ಹಿಂದೆ ಹಾಕುವಂತೆ ಪೊಲೀಸರಿಗೆ ಸೂಚಿಸಿದರು.
“ಸರ್, ಇದು ಸರ್ಕಾರಿ ಭೂಮಿ ಅಲ್ಲ. ನಾನು ಗೌರವದಿಂದ ಮಾತನಾಡುತ್ತಿದ್ದೇನೆ. ನೀವು ಒಬ್ಬ ಮಹಿಳೆಯೊಂದಿಗೆ ಮಾತನಾಡುತ್ತಿದ್ದೀರಿ. ನೀವು ನನ್ನ ಶಾಸಕರೂ ಆಗಿದ್ದೀರಿ” ಎಂದು ಅಮೀಲಾ ಶಾಸಕರ ಬಳಿ ಮನವಿ ಮಾಡಿದರು.
“ನಿಮಗೆ ಮರ್ಯಾದೆ ಬೇಕೇ? ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದೀಯಾ. ಇದರ ಮೇಲೆ ಗೌರವ ಬೇಕಾ?” ಎಂದು ಹೇಳುತ್ತ ಶಾಸಕರು ಗರಂ ಆದರು ಮತ್ತು ಬೇರೆ ಭಾಷೆ ಬಳಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು.
“ಈ ಜನರು ಮೊದಲು ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ ರಾಜಕಾಲವೆ ಅತಿಕ್ರಮಿಸುತ್ತಾರೆ … ಅದು ಪ್ರವಾಹಕ್ಕೆ ಕಾರಣವಾಗುತ್ತದೆ” ಎಂದು ಅವರು ಹೇಳಿದರು.
ದೂರುದಾರರು ತಾನು ಜಮೀನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಾಗ, ಶಾಸಕರು ಮಹಿಳೆಯನ್ನು ಜೈಲಿಗೆ ಹಾಕುವಂತೆ ಹೇಳಿದರು.
ಲೇಡಿ ಪೋಲೀಸ್ ಎಲ್ಲಿದ್ದಾರೆ. ಅವಳನ್ನು ಕರೆದುಕೊಂಡು ಹೋಗು. ಅವಳನ್ನು ಪೊಲೀಸ್ ಠಾಣೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿ. ಅವಳು ಅತಿಕ್ರಮಣ ಮಾಡಿದ್ದಾಳೆ ಮತ್ತು ಈಗ ಗೌರವವನ್ನು ಕೇಳುತ್ತಿದ್ದಾಳೆ” ಎಂದು ಶಾಸಕ ಲಿಂಬಾವಳಿ ಏರು ಧ್ವನಿಯಲ್ಲಿ ಹೇಳುತ್ತಿರುವುದನ್ನು ಕೇಳಬಹುದು.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

ವಾಗ್ವಾದದ ನಂತರ, ಮಹಿಳಾ ಪೊಲೀಸರು ಅವಳನ್ನು ತೋಳು ಹಿಡಿದು ಕರೆದೊಯ್ದಿರುವುದನ್ನು ಕಾಣಬಹುದು, ಪೊಲೀಸರು ಮಹಿಳೆಯನ್ನು ವೈಟ್‌ಫೀಲ್ಡ್ ಠಾಣೆಗೆ ಕರೆದೊಯ್ದು ಸಂಜೆಯವರೆಗೂ ಅಲ್ಲಿಯೇ ಇರಿಸಿದ್ದರು. ರಾತ್ರಿ 7:30ರ ಸುಮಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡು ಮನೆಗೆ ಕಳುಹಿಸಿದ್ದಾರೆ ಎಂದು ಎನ್‌ಡಿಟಿವಿ. ಕಾಮ್‌ ವರದಿ ಮಾಡಿದೆ.

ರಾಜಕಾಲುವೆ ಒತ್ತುವರಿ ಮಾಡದೆ ವಾಣಿಜ್ಯ ಕಟ್ಟಡ ನಿರ್ಮಿಸಿದ್ದೇವೆ. ಕಾನೂನು ಪ್ರಕಾರ ಬಿಬಿಎಂಪಿಯಿಂದ ಯೋಜನಾ ನಕ್ಷೆ ಮಂಜೂರಾತಿ ಪಡೆದಿದ್ದೇವೆ. ನಕ್ಷೆ ಮತ್ತಿತರ ದಾಖಲೆಗಳನ್ನು ತೋರಿಸಿ ದೂರು ನೀಡಲು ಮುಂದಾದಾಗ ಶಾಸಕರು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ’ ಎಂದು ಮಹಿಳೆ ಅಮೀಲಾ ಹೇಳಿದರು.
ಶೌಚಾಲಯ ಮತ್ತು ವಿದ್ಯುತ್ ಪರಿವರ್ತಕ ಇರುವುದರಿಂದ ಕಟ್ಟಡದ ಭಾಗವನ್ನು ಕೆಡವಬೇಡಿ ಮತ್ತು ತನಗೆ ಸಮಯ ನೀಡುವಂತೆ ವಿನಂತಿಸಿದೆ ಎಂದು ಮಹಿಳೆ ಹೇಳಿದ್ದಾರೆ. “ಆದರೆ, ಶಾಸಕರು ನನ್ನನ್ನು ನಿಂದಿಸಿದರುರು, ಅವರು ನನ್ನ ಕೈಯಿಂದ ದಾಖಲೆಯನ್ನು ಕಿತ್ತು ನೆಲದ ಮೇಲೆ ಎಸೆದರು ಎಂದು ಮಹಿಳೆ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

ಶಾಸಕರ ಈ ನಡೆಯನ್ನು ಪ್ರಶ್ನಿಸಿರುವ ಆಮ್‌ ಆದ್ಮಿ ಪಕ್ಷ ಅರವಿಂದ ಲಿಂಬಾವಳಿ ಅವರೇ, ಒಂದು ಮಹಿಳೆಯೊಂದಿಗೆ ನಡೆದುಕೊಳ್ಳುವ ರೀತಿಯೇ ಇದು? ತಪ್ಪಿದ್ದರೆ ಕಾನೂನಿದೆ. ಇದೇನು ನಿಮ್ಮ ಮಾತುಗಳು? ನಿಮ್ಮ ಸ್ಥಾನಕ್ಕೆ ಶೋಭೆ ತರುವುದೆ? ಅಧಿಕಾರ ಶಾಶ್ವತ ಅಲ್ಲ. ಅದೇತಕೆ ಇಷ್ಟು ದರ್ಪ” ಎಂದು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement