ಆಟೋರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದು ಉರುಳಿದ ನಂತರ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ | ವೀಕ್ಷಿಸಿ

ಮಹಿಳೆಯೊಬ್ಬರು ವಾಹನಕ್ಕೆ ಸಿಲುಕಿ ಸ್ವಲ್ಪದರಲ್ಲೇ ಪಾರಾಗುತ್ತಿರುವ ದೃಶ್ಯದ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಕ್ಲಿಪ್ ಅನ್ನು ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಅಧಿಕಾರಿ ವಿ.ಸಿ. ಸಜ್ಜನರ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಶೀರ್ಷಿಕೆಯಲ್ಲಿ, ಐಪಿಎಸ್ ಅಧಿಕಾರಿ, ರಸ್ತೆ ಸುರಕ್ಷತೆಯನ್ನು ಎಲ್ಲಿಯವರೆಗೆ ಲಘುವಾಗಿ ತೆಗೆದುಕೊಳ್ಳುತ್ತಾರೆ ..? ಮತ್ತು ಜನರು ತಮ್ಮ ಅದೃಷ್ಟದ ಮೇಲೆ ಅವಲಂಬಿತರಾಗಬೇಕೇ ಎಂಬ ಎಂಬ ಪ್ರಶ್ನೆ ಕೇಳಿದ್ದಾರೆ. ಅಲ್ಲದೆ ನಾವು ಅದೃಷ್ಟದ ಮೇಲೆ ಎಷ್ಟು ದಿನ ಅವಲಂಬಿತರಾಗಿದ್ದೇವೆ? ರಸ್ತೆಗಳಲ್ಲಿ ಜವಾಬ್ದಾರಯುತರಾಗಿ ಎಂದು ಅವರು ಬರೆದಿದ್ದಾರೆ.

ವೀಡಿಯೊ ಕ್ಲಿಪ್‌ ಮಹಿಳೆಯೊಬ್ಬರು ರಸ್ತೆಯನ್ನು ದಾಟುತ್ತಿರುವುದನ್ನು ಮತ್ತು ಚಾಲಕ ಒಳಗೆ ಕುಳಿತಿರುವ ಆಟೋರಿಕ್ಷಾ ಸಮೀಪ ಹಾದು ಹೋಗುತ್ತಿರುವುದನ್ನು ತೋರಿಸುತ್ತದೆ. ಸ್ವಲ್ಪ ಸಮಯದ ನಂತರ, ವೇಗವಾಗಿ ಬಂದ ಬಿಳಿ ಕಾರೊಂದು ಹಿಂದಿನಿಂದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಆಟೋ ಉರುಳಿಸುತ್ತಿರುವುದನ್ನು ನೋಡಬಹುದು.
ನಂತರ ಕಾರು ಮುಂದಕ್ಕೆ ಪಲ್ಟಿಯಾಗಿ ಕಂಬಕ್ಕೆ ಢಿಕ್ಕಿ ಹೊಡೆಯುತ್ತದೆ. ಆಟೋರಿಕ್ಷಾ ತಿರುಗಿ ಇನ್ನೊಂದು ಬದಿಗೆ ಉರುಳಿ ಬೀಳುವುದು ಕಂಡುಬರುತ್ತದೆ. ಆಟೋ ಬಳಿ ಹಾದುಹೋಗುತ್ತಿದ್ದ ಮಹಿಳೆ ಕೆಲವೇ ಸೆಕೆಂಡುಗಳಲ್ಲಿ ವಾಹನಗಳ ಡಿಕ್ಕಿಯಿಂದ ಮಹಿಳೆ ಪಾರಾಗಿದ್ದಾಳೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

ರಸ್ತೆಯಲ್ಲಿ ಜವಾಬ್ದಾರಯುತವಾಗಿರಲು ಮತ್ತು ಕಾನೂನುಗಳನ್ನು ಕಠಿಣಗೊಳಿಸಲು ಸಾಮಾಜಿಕ ಮಾಧ್ಯಮ ಬಳಕೆದಾರರು ಒತ್ತಾಯಿಸಿದರು. ಹಂಚಿಕೊಂಡ ನಂತರ, ವೀಡಿಯೊ ಸುಮಾರು 40,000 ವೀಕ್ಷಣೆಗಳನ್ನು ಕಂಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement