ಸೇವಾ ದರ್ಶನಕ್ಕೆ ವ್ಯವಸ್ಥೆ ಮಾಡಿ ಅಥವಾ ಭಕ್ತನಿಗೆ 45 ಲಕ್ಷ ಪರಿಹಾರ ನೀಡಿ : ಟಿಟಿಡಿಗೆ ಗ್ರಾಹಕ ನ್ಯಾಯಾಲಯ ಆದೇಶ….!

ಸೇಲಂ: ಭಾರತದ ಅತ್ಯಂತ ಶ್ರೀಮಂತ ದೇವರು ಎಂದು ಎನಿಸಿಕೊಂಡಿರುವ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜನರು ಕೋಟಿ ಕೋಟಿ ಬೆಲೆ ಬಾಳುವ ಕಾಣಿಕೆಗಳನ್ನು ನೀಡಿ ಬರುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ತಿರುಪತಿ ತಿಮ್ಮಪ್ಪನೇ ಭಕ್ತರೊಬ್ಬರಿಗೆ ಈಗ ದುಡ್ಡು ನೀಡಬೇಕಾಗಿದೆ. ಹೌದು. ಈ ಪ್ರಕರಣದಲ್ಲಿತಿರುಪತಿ ತಿಮ್ಮಪ್ಪ ದೇವಸ್ಥಾನದ ಟ್ರಸ್ಟ್​ ಈಗ ಭಕ್ತರೊಬ್ಬರಿಗೆ ಪರಿಹಾರದ ಹಣ ನೀಡಬೇಕಿದೆ.
ದೇವಸ್ಥಾನವೊಂದು ವಿಶೇಷ ಪೂಜೆಗಾಗಿ ಹಣ ಸಂಗ್ರಹಿಸಿದರೂ ನಿಗದಿತ ದಿನಾಂಕದಂದು ದರ್ಶನ/ಪೂಜೆ ನೀಡಲು ನಿರಾಕರಿಸಿದರೆ ಅದು ‘ಸೇವೆಯ ಕೊರತೆ ಎಂದು ತಮಿಳುನಾಡಿನ ಸೇಲಂ ಜಿಲ್ಲೆಯ ಗ್ರಾಹಕ ನ್ಯಾಯಾಲಯ ಹೇಳಿದೆ. ಅಲ್ಲದೆ, ತಿಮ್ಮಪ್ಪನಿಗೆ ವಸ್ತ್ರಾಲಂಕಾರ ಸೇವೆಯನ್ನು 16 ವರ್ಷಗಳ ಹಿಂದೆ ಕಾಯ್ದಿರಿಸಿದ್ದ. ತಮಿಳುನಾಡಿನ ಭಕ್ತ ಕೆ.ಆರ್ ಹರಿಭಾಸ್ಕರ್ ಎಂಬವರು 2006ರಲ್ಲಿ ಟಿಟಿಡಿ ಮೂಲಕ ತಿರುಪತಿ ತಿಮ್ಮಪ್ಪನಿಗೆ ವಸ್ತ್ರಾಲಂಕಾರ ಸೇವೆ ಬುಕ್ ಮಾಡಿದ್ದರು. ಆದರೆ ಟಿಟಿಡಿ ವಸ್ತ್ರಾಲಂಕಾರ ಸೇವೆಯನ್ನು ಮುಂದೂಡುತ್ತಲೇ ಬರಲಾಗಿತ್ತು. ಭಕ್ತನಿಗೆ ಹೊಸ ದಿನಾಂಕ ನಿಗದಿ ಮಾಡುವಂತೆ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಗೆ ನಿರ್ದೇಶಿಸುತ್ತಲೇ ಇತ್ತು.

ಅವರು ಜೂನ್ 2006 ರಲ್ಲಿ ರೂ 12,250 ಪಾವತಿಸಿದ್ದರು ಮತ್ತು 2020 ರಲ್ಲಿ ತಿರುಪತಿ ತಿರುಮಲ ದೇವಸ್ಥಾನದಲ್ಲಿ ವಸ್ತ್ರಾಲಂಕಾರ ಸೇವೆಗಾಗಿ ಸ್ಲಾಟ್ ಅನ್ನು ಕಾಯ್ದಿರಿಸಿದ್ದರು. ಆದರೆ ಕೋವಿಡ್‌ ಸಾಂಕ್ರಾಮಿಕ ರೋಗದಿಂದಾಗಿ ಕೆಲ ಸಮಯ ದೇವಾಲಯವನ್ನು ಮುಚ್ಚಿದ್ದರಿಂದ ಭಗವಂತನಿಗೆ ವಸ್ತ್ರಾಲಂಕಾರ ಮಾಡಲು ಅವರಿಗೆ ಅವಕಾಶ ಸಿಗಲಿಲ್ಲ ಎಂದು ಟಿಟಿಡಿ ತಿಳಿಸಿದಾಗ ಅವರು ಬಹಳ ನೊಂದಿದ್ದರು.
2020ರ ಮಾರ್ಚ್‌ನಲ್ಲಿ ಹರಿಭಾಸ್ಕರ್ ಅವರಿಗೆ ವಸ್ತ್ರಾಲಂಕಾರ ಸೇವೆ ಮಾಡಿಸಿಕೊಡುವುದಾಗಿ ಟಿಟಿಡಿ ದಿನಾಂಕ ನೀಡಿತ್ತು. ಆದರೆ ಪುನಃ ಕೋವಿಡ್‌ನಿಂದಾಗಿ ಪುನಃ ತಿರುಪತಿಯಲ್ಲಿ ಭಕ್ತರ ಪ್ರವೇಶ, ದೇವರ ವಿವಿಧ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಹರಿಭಾಸ್ಕರ್ ಅವರ ವಸ್ತ್ರಾಲಂಕಾರ ಸೇವೆಯೂ ಮತ್ತೆ ಮುಂದಕ್ಕೆ ಹೋಯಿತು.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

ಕೊನೆಗೆ ಹರಿಭಾಸ್ಕರ್ ಅವರು ಒಂದು ವರ್ಷದ ಒಳಗೆ ಯಾವುದೇ ದಿನವಾದರೂ ತನಗೆ ಈ ಸೇವೆ ಅವಕಾಶ ಕಲ್ಪಿಸಲು ಅನುಕೂಲ ಮಾಡಿಕೊಡುವಂತೆ ಟಿಟಿಡಿಯನ್ನು ಕೋರಿದರು. ಆದರೆ ಇದಕ್ಕೆ ಟಿಟಿಡಿ ಅನುಮತಿ ನೀಡಲಿಲ್ಲ. ಇದರಿಂದ ನೊಂದ ಹರಿಭಾಸ್ಕರ್ ಅವರು ಸೇಲಂನ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಟಿಟಿಡಿ ಟ್ರಸ್ಟ್‌ ವಿರುದ್ಧ ದೂರು ದಾಖಲಿಸಿದ್ದರು.
ಆಗಸ್ಟ್ 18 ರಂದು, ಸೇಲಂ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗದ ಅಧ್ಯಕ್ಷ ಪಿ ಗಣೇಶರಾಂ ಮತ್ತು ಸದಸ್ಯ ಆರ್ ರಾಮೋಲಾ ಅವರನ್ನೊಳಗೊಂಡ ಪೀಠವು ವಸ್ತ್ರಾಲಂಕಾರ ಸೇವೆಗೆ ಹೊಸ ದಿನಾಂಕವನ್ನು ನಿಗದಿಪಡಿಸಲು ಟಿಟಿಡಿ ನಿರಾಕರಿಸಿರುವುದು ಸೇವೆಯಲ್ಲಿನ ಕೊರತೆಯ ಸ್ಪಷ್ಟ ಪ್ರಕರಣವಾಗಿದೆ ಎಂದು ತೀರ್ಮಾನಿಸಿತು.
ಟಿಟಿಡಿ ನಿಗದಿಪಡಿಸಿದ ಅಗತ್ಯ ಮೊತ್ತವನ್ನು ಪಾವತಿಸಿ ಒಂದೂವರೆ ದಶಕಗಳಿಗೂ ಹೆಚ್ಚು ಕಾಲ ಹರಿಭಾಸ್ಕರ್‌ ಅವರು ಕಾಯುತ್ತಿದ್ದರು. ಆದರೆ ಹೊಸ ದಿನಾಂಕ ನಿಗದಿಯಾಗದ ಕಾರಣ ಅವರಿಗೆ ದೇವರ ಸೇವೆ ಮಾಡಲು ಆಗಲಿಲ್ಲ. ಹೀಗಾಗಿ ಹರಿಭಾಸ್ಕರ ಅವರಿಗೆ ಒಂದು ವರ್ಷದೊಳಗೆ ವಸ್ತ್ರಾಲಂಕಾರ ಸೇವೆಗೆ ಟಿಟಿಡಿಗೆ ಅವಕಾಶ ನೀಡಬೇಕು. ಅಥವಾ ಮಾನಸಿಕವಾಗಿ ನೋವುಂಟು ಮಾಡಿದ್ದಕ್ಕೆ ಟಿಟಿಡಿಯು ಪರಿಹಾರವಾಗಿ 45 ಲಕ್ಷ ರೂ. ನೀಡಬೇಕು ಎಂದು ಪೀಠ ಹೇಳಿದೆ.
ಅಲ್ಲದೆ, ಬುಕ್ಕಿಂಗ್‌ ಮಾಡಿದ ಮೊತ್ತ 12,250 ರೂ.ಗಳಿಗೆ , 2006 ರಿಂದ ಇಲ್ಲಿಯವರೆಗೆ 6% ವಾರ್ಷಿಕ ಬಡ್ಡಿ ಸೇರಿಸಿ ಎರಡು ತಿಂಗಳೊಳಗೆ ಮರುಪಾವತಿಸಲು ಆದೇಶಿಸಿದೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement