ಬೆಂಗಳೂರಿನಲ್ಲಿ ಬುಲ್ಡೋಜರ್‌ ಮೇಲೆ ನೀರು ತುಂಬಿದ ರಸ್ತೆ ದಾಟಿದ ಜನರು: ವೀಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ | ವೀಕ್ಷಿಸಿ

ಬೆಂಗಳೂರಿನಲ್ಲಿ ಭಾನುವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ. ಮತ್ತೆ ಭಾರೀ ಮಳೆಯ ಮುನ್ಸೂಚನೆಯೊಂದಿಗೆ, ನಗರದ ನಿವಾಸಿಗಳು ಭಯದ ನಡುವೆಯೇ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ ಅಥವಾ ಸುರಕ್ಷಿತ ಸ್ಥಳ ಕಂಡುಕೊಳ್ಳುತ್ತಿದ್ದಾರೆ. ಆದರೆ, ಮಳೆಯಾಗಲಿ, ಬಿಸಿಲಾಗಲಿ ಕೆಲಸವಂತೂ ನಿಲ್ಲುವುದಿಲ್ಲ. ಬೆಂಗಳೂರಿನ ಜನರು ಈ ಕಲ್ಪನೆಯನ್ನು ಸಾಬೀತುಪಡಿಸಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಕೆಲವರು ಬುಲ್ಡೋಜರ್ ಮೇಲೆ ಕುಳಿತು ನೀರು ತುಂಬಿದ ರಸ್ತೆಯನ್ನು ದಾಟುತ್ತಿರುವ ವೀಡಿಯೊ ವೈರಲ್ ಆಗಿದೆ.

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕ್ಲಿಪ್ ನೆಟಿಜನ್‌ಗಳಲ್ಲಿ ಕುತೂಹಲ ಮೂಡಿಸಿದೆ. ಬೆಳ್ಳಂದೂರಿನಲ್ಲಿ ನೀರು ತುಂಬಿದ ಸೇತುವೆಯನ್ನು ದಾಟುತ್ತಿರುವ ಬುಲ್ಡೋಜರ್ ಜನರನ್ನು ಹೊತ್ತೊಯ್ಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ನಿವಾಸಿಗಳು ಬಳಸಿದ ನವೀನ ತಂತ್ರಕ್ಕೆ ಮಹೀಂದ್ರಾ ಆಶ್ಚರ್ಯಚಕಿತರಾಗಿದ್ದಾರೆ.
ಮೂಲ ಪೋಸ್ಟ್‌ಗೆ “bengaluru innovation Hub for a reason ಇದಕ್ಕೆ ಮಹೀಂದ್ರಾ ಅವರು, ಮನಸ್ಸಿದ್ದರೆ ಮಾರ್ಗ ಎಂದು ಬರೆದಿದ್ದಾರೆ,

ಕ್ಲಿಪ್ 3.43 ಲಕ್ಷ ವೀಕ್ಷಣೆಗಳನ್ನು ಕಂಡಿದೆ. ಬೆಂಗಳೂರಿನ ರಸ್ತೆಗಳ ಸ್ಥಿತಿಯನ್ನು ನೋಡಿ ಟ್ವಿಟರ್‌ನ ಒಂದು ವಿಭಾಗವು ಆಘಾತಕ್ಕೊಳಗಾಗಿದ್ದರೆ, ಜನರು ಪ್ರವಾಹಕ್ಕೆ ಸಿಲುಕಿದ ರಸ್ತೆಯನ್ನು ದಾಟಲು ಹೊಸ ತಂತ್ರವನ್ನು ಎಷ್ಟು ಅದ್ಭುತವಾಗಿ ಕಂಡುಹಿಡಿದಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಮುಂದಿನ ಒಂದೆಡರು ದಿನ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಸೋಮವಾರ ರಾತ್ರಿ ಬೆಂಗಳೂರು ನಗರದಲ್ಲಿ 13 ಸೆಂಟಿಮೀಟರ್ ಮಳೆಯಾಗಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement