ಸಮೋಸಾ ಅಂಗಡಿಯಲ್ಲಿ ಬೌಲ್-ಸ್ಪೂನ್ ಕೊಡ್ತಾ ಇಲ್ಲ : ಸಿಎಂ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ ಈ ಮಹಾಶಯ..!

ವಿಲಕ್ಷಣ ಘಟನೆಯೊಂದರಲ್ಲಿ ಛತ್ತರ್‌ಪುರ ಬಸ್ ನಿಲ್ದಾಣದ ರಾಕೇಶ್ ಸಮೋಸಾ ಹೆಸರಿನ ಅಂಗಡಿಯ ವಿರುದ್ಧ ವ್ಯಕ್ತಿಯೊಬ್ಬರು ದೂರು ದಾಖಲಿಸಲು ವ್ಯಕ್ತಿಯೊಬ್ಬರು ಮಧ್ಯಪ್ರದೇಶ ಮುಖ್ಯಮಂತ್ರಿಯ ಸಹಾಯವಾಣಿ ಸಂಖ್ಯೆಗೆ ಫೋನ್ ಮಾಡಿದ್ದಾರೆ.
ಸುದ್ದಿ ಪ್ರಕಾರ, ಉಪಾಹಾರ ಗೃಹದಲ್ಲಿನ ಕಳಪೆ ಸೇವೆಗಳ ಬಗ್ಗೆ ಮತ್ತು ‘ಸಮೋಸ’ಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯ ಸಹಾಯವಾಣಿಗೆ ಕರೆ ಮಾಡಿದ್ದಾರೆ…!
ಮುಖ್ಯಮಂತ್ರಿಗಳ ಸಹಾಯವಾಣಿ ಸಂಖ್ಯೆಯನ್ನು ಡಯಲ್ ಮಾಡಿದ ನಂತರ, ದೂರುದಾರರು ತಾವು ಹೊಟೇಲ್‌ನಲ್ಲಿ ಖರೀದಿಸಿದ ಸಮೋಸಾಕ್ಕೆ ಸ್ಪೂನ್ ಮತ್ತು ಪ್ಲೇಟುಗಳನ್ನು ನೀಡಲಿಲ್ಲ ಎಂದು ಹೇಳಿದ್ದಾರೆ. ಸಹಾಯವಾಣಿಯಲ್ಲಿ ದಾಖಲಾಗಿರುವ ದೂರಿನಲ್ಲಿ, ವಂಶ್ ಬಹದ್ದೂರ್ ಎಂದು ಗುರುತಿಸಲಾದ ವ್ಯಕ್ತಿ “ಛತ್ತರ್‌ಪುರ ಬಸ್ ನಿಲ್ದಾಣದಲ್ಲಿ ರಾಕೇಶ್ ಸಮೋಸಾ ಎಂಬ ಅಂಗಡಿ ಇದೆ, ಇಲ್ಲಿ ಸಮೋಸಾ ಪ್ಯಾಕ್ ಮಾಡುವವರು ಚಮಚ ಹಾಗೂ ಬೌಲ್ ನೀಡಿಲ್ಲ. ದಯವಿಟ್ಟು ಆದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಿ ಎಂದು ಮನವಿ ಮಾಡಿದ್ದಾರೆ.

ಆಗಸ್ಟ್ 30 ರಂದು ವಂಶ್‌ ಬಹದ್ದೂರ್ ತಿಂಡಿಗೆ ಹೋಗಿದ್ದ ದಿನ ಈ ಪ್ರಕರಣ ದಾಖಲಾಗಿತ್ತು. ಮೂಲಗಳ ಪ್ರಕಾರ, ಸಮೋಸಾ ಅಂಗಡಿಯಲ್ಲಿನ ಉದ್ಯೋಗಿ ಕಟ್ಲರಿಯೊಂದಿಗೆ ತಿಂಡಿ ನೀಡಲು ನಿರಾಕರಿಸಿದ. ನಂತರ ಇದು ತಕರಾರಿಗೆ ಕಾರಣವಾಯಿತು. ಇದರ ಬೆನ್ನಲ್ಲೇ ಬಹದ್ದೂರ್ ಮುಖ್ಯಮಂತ್ರಿಗಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾನೆ.
ವಿಶೇಷವೆಂದರೆ, ದೂರನ್ನು ಸಹಾಯವಾಣಿ ಸ್ವೀಕರಿಸಿದೆ. ಆದರೆ, ಸೆಪ್ಟೆಂಬರ್ 5 ರಂದು ದೂರನ್ನು ತೆಗೆಯಲಾಯಿತು. ಬಹದ್ದೂರ್ ಅವರ ದೂರನ್ನು ಐದು ದಿನಗಳ ಕಾಲ ನೋಡಲಾಯಿತು. ನಂತರ ಅದನ್ನು ಅಲ್ಲಿಗೆ ಮುಕ್ತಾಯಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ‘ನೀವು ಮುಖ್ಯಮಂತ್ರಿ ಸಹಾಯವಾಣಿ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಸಲ್ಲಿಸಿದ ದೂರು/ಸಲಹೆಯ ದೂರನ್ನು ವಿಲೇವಾರಿ ಮಾಡಲಾಗಿದೆ ಎಂದು ದೂರಿನಲ್ಲಿನ ಟಿಪ್ಪಣಿಯಲ್ಲಿ ಬರೆಯಲಾಗಿದೆ.
ಅಲ್ಲಿ ಪ್ರಕರಣ ಮುಗಿದಿದೆ. ಆದರೆ ಮಧ್ಯಪ್ರದೇಶದ ಸಮೋಸಾ ಅಂಗಡಿಯ ವಿರುದ್ಧದ ದೂರು ಈಗ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್‌ ಆಗುತ್ತಿದೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement