ಹೀರೋ ತಾಯಿ..: ಹುಲಿಯೊಂದಿಗೆ ಹೋರಾಡಿ ಅಂಬೆಗಾಲಿಡುವ ತನ್ನ ಮಗನನ್ನು ಅದರ ದವಡೆಯಿಂದ ರಕ್ಷಿಸಿದ ಧೈರ್ಯಶಾಲಿ ಮಹಿಳೆ…!

ಜಬಲ್‌ಪುರ: ಮಧ್ಯಪ್ರದೇಶದ ಹಳ್ಳಿಯೊಂದರ 25 ವರ್ಷದ ಮಹಿಳೆಯೊಬ್ಬರು ಅಪರೂಪದ ಧೈರ್ಯ ಸಾಹಸ ಪ್ರದರ್ಶಿಸಿ ಹುಲಿಯ ದವಡೆಯಿಂದ ತನ್ನ 15 ತಿಂಗಳ ಮಗನನ್ನು ರಕ್ಷಿಸಿದ್ದಾರೆ.
ಮಧ್ಯಪ್ರದೇಶದ ಜಬಲ್‌ಪುರದ ಬಾಂಧವ್‌ಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಹುಲಿಯ ವಿರುದ್ಧ ಹೋರಾಡಿ ತನ್ನ ಮಗನನ್ನು ಹುಲಿಯ ಬಾಯಯಿಂದ ಕಾಪಾಡಿದ್ದಾರೆ. ಈ ವಾರದ ಆರಂಭದಲ್ಲಿ ರೊಹನಿಯಾ ಗ್ರಾಮದಲ್ಲಿ ಹುಲಿ ದಾಳಿಯಿಂದಾಗಿ ಮಹಿಳೆ ಮತ್ತು ಆಕೆಯ ಮಗ ಇಬ್ಬರೂ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಪ್ರಕೃತಿಯ ಕರೆಗೆ ಓಗೊಡಲು ತನ್ನ ಮಗ ರವಿರಾಜ್‌ನನ್ನು ಹೊಲಕ್ಕೆ ಕರೆದೊಯ್ದಿದ್ದಾಗ ಹುಲಿ ಮಗುವಿನ ಮೇಲೆ ದಾಳಿ ಮಾಡಿ ತನ್ನ ದವಡೆಯಿಂದ ಹಿಡಿದಿದೆ. ತನ್ನ ಮಗನನ್ನು ಉಳಿಸಲು ಪ್ರಯತ್ನಿಸಿದಾಗ ಹುಲಿ ತನ್ನ ಮೇಲೆಯೂ ದಾಳಿ ಮಾಡಿದೆ ಎಂದು ಮಹಿಳೆ ಅರ್ಚನಾ ಹೇಳಿದ್ದಾರೆ. ಆದರೂ ತಾನು ತನ್ನ ಮಗುವನ್ನು ಉಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದರು.

ಹುಲಿಯು (ಹುಲಿ ಸಂರಕ್ಷಿತ ಪ್ರದೇಶದ ಹೊರಗೆ) ಸುತ್ತಾಡುತ್ತಿದೆ ಮತ್ತು ಜನರು ಹುಲಿಯನ್ನು ನೋಡಲು ಬರುತ್ತಿದ್ದಾರೆ ಎಂದು ನಮಗೆ ಮಾಹಿತಿ ನೀಡಲಾಯಿತು. ಆದರೆ ಈ ಮಹಿಳೆಗೆ ಹುಲಿಯ ಬಗ್ಗೆ ತಿಳಿದಿರಲಿಲ್ಲ. ದಾಳಿಯಲ್ಲಿ ಇಬ್ಬರೂ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರ ಅವರನ್ನು ಜಬಲ್ಪುರ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಪ್ರಸ್ತುತ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ” ಎಂದು ಬಾಂಧವ್‌ಗಢ ಹುಲಿ ಸಂರಕ್ಷಿತ ಪ್ರದೇಶದ ವ್ಯವಸ್ಥಾಪಕ ಲವಿತ್ ಭಾರ್ತಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

ಒಂದೂವರೆ ವರ್ಷದ ಬಾಲಕನ ತಾಯಿ ಜೊತೆ ಜಮೀನಿನಲ್ಲಿದ್ದಾಗ ಹುಲಿ ದಾಳಿ ನಡೆಸಿದೆ. ಮಹಿಳೆ ತನ್ನ ಮಗುವನ್ನು ರಕ್ಷಿಸಲು ಹುಲಿಯ ಮೇಲೆ ಪ್ರತಿ ದಾಳಿ ಮಾಡಿದ್ದಾಳೆ. ಆದರೆ ಹುಲಿಯಿಂದ ರಕ್ಷಿಸಿಕೊಳ್ಳಲು ಮಹಿಳೆಯ ಬಳಿ ಯಾವುದೇ ಆಯುಧ ಇರಲಿಲ್ಲ ಎಂಬುದನ್ನು ಗಮನಿಸಬಹುದು.ಆದಾಗ್ಯೂ, ಆ ತಾಯಿ ಸಹಾಯಕ್ಕಾಗಿ ಕೂಗುತ್ತಾ ತನ್ನ ಮಗುವನ್ನು ರಕ್ಷಿಸಲು ಹುಲಿಯ ವಿರುದ್ಧ ಹೋರಾಡುತ್ತಲೇ ಇದ್ದಳು, ಅವಳ ಕೂಗು ಕೇಳಿದ ಗ್ರಾಮಸ್ಥರು ಸ್ವಲ್ಪ ಸಮಯದಲ್ಲಿ ಅಲ್ಲಿಗೆ ಆಗಮಿಸಿ ಹುಲಿಯನ್ನು ಓಡಿಸಿದರು. ಹುಲಿ ದಾಳಿಯಿಂದ ಮಗುವಿನ ತಲೆಗೆ ಗಾಯಗಳಾಗಿದ್ದರೆ, ತಾಯಿಗೆ ದೇಹದಾದ್ಯಂತ ಗಾಯಗಳಾಗಿವೆ. ಹುಲಿ ದಾಳಿ ನಡೆಸಿದಾಗ ಮಗುವನ್ನು ಜಮೀನಿಗೆ ಕರೆದುಕೊಂಡು ಹೋಗಿದ್ದಳು ಎಂದು ಗಾಯಗೊಂಡ ಮಹಿಳೆಯ ಪತಿ ಭೋಲಾ ಚೌಧರಿ ಹೇಳಿದ್ದಾರೆ. “ಹುಲಿ ಹೊರಗೆ ಇರುವ ಬಗ್ಗೆ ಆಕೆಗೆ ಯಾವುದೇ ಕಲ್ಪನೆ ಇರಲಿಲ್ಲ. ಅವಳು ಹುಲಿ ಅಡಗಿರುವ ಜಮೀನಿಗೆ ಮಗುವನ್ನು ಕರೆದೊಯ್ದಳು. ಅದು ಮಗುವಿನ ಮೇಲೆ ದಾಳಿ ಮಾಡಿತು ಮತ್ತು ಆದರೆ ಮಗುವನ್ನು ರಕ್ಷಿಸಲು ಹುಲಿಯೊಂದಿಗೆ ನಡೆದ ಹೋರಾಟದಲ್ಲಿ ಅವಳು ತೀವ್ರವಾಗಿ ಗಾಯಗೊಂಡಳು” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement