ಅಯ್ಯೋ ದೇವ್ರೆ….ಮಹಿಳೆಯ ಕಿವಿಯೊಳಗೆ ಸೇರಿಕೊಂಡ ಹಾವು : ವೈದ್ಯರು ಹೊರತೆಗೆದಿದ್ದು ಹೇಗೆ..? ವೀಕ್ಷಿಸಿ

ಕೆಲವೊಮ್ಮೆ ನಾವು ಸಾಮಾಜಿಕ ಮಾಧ್ಯಮದಲ್ಲಿ ವಿಚಿತ್ರ ಘಟನೆಗಳನ್ನು ನೋಡುತ್ತಿರುತ್ತೇವೆ, ಇಂತಹದ್ದೇ ಒಂದು ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಇದರಲ್ಲಿ ಮಹಿಳೆಯೊಬ್ಬರ ಕಿವಿಯ ಒಳಗೆ ಹಾವು ಸೇರಿಕೊಂಡಿರುವುದು ಈಗ ವೈರಲ್‌ ಆಗಿದೆ. ಇದು ನಂಬಲು ಅಸಾಧ್ಯವಾದರೂ, ನಡೆದಿದೆ.
ತನ್ನ ಕಿವಿಗೆ ಏನೋ ಬಿದ್ದಿದೆ ಎಂದು ತಿಳಿದ ತಕ್ಷಣ ಹುಡುಗಿ ವೈದ್ಯರ ಬಳಿಗೆ ಹೋಗಿದ್ದಾಳೆ. ಆದರೆ ಕಿವಿ ನೋಡಿದ ವೈದ್ಯರಿಗೂ ಅಚ್ಚರಿಯಾಗಿದೆ. ಯಾಕೆಂದರೆ ಯುವತಿಯ ಕಿವಿಯಲ್ಲಿ ಹಾವು ಇರುವುದು ಕಂಡಿದೆ. ಈ ದೃಶ್ಯ ನೋಡಿದ ವೈದ್ಯರು ಸಹ ಒಂದ ಸಲಕ್ಕೆ ಗಾಬರಿಗೊಂಡಿದ್ದಾರೆ. ಆದರೆ ತನ್ನ ಕರ್ತವ್ಯ ನಿರ್ವಹಿಸಿದ್ದಾರೆ.

ವೀಡಿಯೊದಲ್ಲಿ, ವೈದ್ಯರು ಯುವತಿಯ ಕಿವಿಯಿಂದ ಹಾವನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. ವೈದ್ಯರು ಕೈಗವಸುಗಳನ್ನು ಹಾಕಿಕೊಂಡು ಮೆಡಿಕಲ್‌ ಟಾಂಗ್ಸ್ ನೆರವಿನಿಂದ ಹಾವನ್ನು ಹೊರತೆಗೆದಿದ್ದಾರೆ. ಈ ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ, ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊ ಒಂದು ಕ್ಷಣ ಬೆಚ್ಚಿ ಬೀಳುವಂತೆ ಮಾಡುತ್ತದೆ. ಏಕೆಂದರೆ ಮಹಿಳೆಯ ಕಿವಿಯಲ್ಲಿದ್ದ ಚಿಕ್ಕ ಹಾವು ನಿಧಾನವಾಗಿ ಕಿವಿಯಿಂದ ತನ್ನ ಬಾಯಿ ತೆಗೆಯುತ್ತಿದೆ. ಆ ಹಾವಿನ ದೇಹ ಆ ಯುವತಿಯ ಕಿವಿಯೊಳಗೆ ಸಿಕ್ಕಿಹಾಕಿಕೊಂಡಂತೆ ಅನಿಸುತ್ತಿದೆ.

ಇನ್ಸ್ಟಾಗ್ರಾಮ್‌ನಲ್ಲಿ ಶಿಲ್ಪಾ ರಾಯ್‌ ( ಎಂಬ ಮಹಿಳೆ 3 ನಿಮಿಷ 49 ಸೆಕೆಂಡ್‌ಗಳಷ್ಟು ಇರುವ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದು, ಇದಕ್ಕೆ ನೂರಾರು ಲೈಕ್‌ಗಳು, ಹಲವು ಕಮೆಂಟ್‌ಗಳು ಸಹ ಬಂದಿವೆ. ಅಲ್ಲದೆ, ಇತರೆ ಸಾಮಾಜಿಕ ಮಾಧ್ಯಮದಲ್ಲೂ ಈ ವಿಡಿಯೋವನ್ನು ಶೇರ್‌ (Share) ಮಾಡಿಕೊಳ್ಳಲಾಗುತ್ತಿದೆ. ಈ ಮಹಿಳೆಯ ಕಿವಿಯೊಳಗೆ ಹಾವು ಹೋಗಿದ್ದು ಹೇಗೆ ಎಂಬ ಪ್ರಶ್ನೆ ಬಹುತೇಕರಲ್ಲಿ ವ್ಯಕ್ತವಾಗುತ್ತಿದೆ.

2.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement