ಲಡಾಖ್‌ನ ಸಂಘರ್ಷ ಸ್ಥಳದಿಂದ ಭಾರತ-ಚೀನಾ ಸೇನೆಗಳ ಹಿಂತೆಗೆತ ಆರಂಭ

ನವದೆಹಲಿ: ಭಾರತ ಮತ್ತು ಚೀನಾ ನಡುವೆ 16ನೇ ಸುತ್ತಿನ ಸೇನಾ ಮಾತುಕತೆಯಲ್ಲಿ ಸಹಮತ ವ್ಯಕ್ತವಾದ ನಂತರ ಉಭ ದೇಶಗಳು ಲಡಾಖ್‌ನ ಗೋಗ್ರಾ- ಹಾಟ್‌ ಸ್ಪ್ರಿಂಗ್ಸ್‌ನಿಂದ ತಮ್ಮ ಸೇನಾ ಪಡೆಗಳನ್ನು ಹಿಂಪಡೆಯುವ ಕಾರ್ಯ ಆರಂಭಿಸಿದ್ದು, ಎರಡೂ ದೇಶಗಳು ಗುರುವಾರ ಸಂಜೆ ಜಂಟಿ ಹೇಳಿಕೆಯಲ್ಲಿ ಈ ಮಾಹಿತಿ ನೀಡಿವೆ.
2022ರ ಸೆಪ್ಟೆಂಬರ್‌ 8ರಂದು ಭಾರತ- ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯ 16ನೇ ಸುತ್ತಿನಲ್ಲಿ ಉಂಟಾದ ಸಹಮತದ ಅನ್ವಯ ಗೋಗ್ರಾ- ಹಾಟ್ ಸ್ಪ್ರಿಂಗ್ಸ್ (ಪಿಪಿ-15) ಪ್ರದೇಶದಿಂದ ಭಾರತ ಮತ್ತು ಚೀನಾ ಪಡೆಗಳು ಸಮನ್ವಯದ ಹಾಗೂ ಯೋಜಿತ ರೀತಿಯಲ್ಲಿ ವಾಪಸ್‌ ಪಡೆಯುವ ಕಾರ್ಯ ಆರಂಭಿಸಿವೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

ಭಾರತ ಮತ್ತು ಚೀನಾದ ಕಾರ್ಪ್ಸ್ ಕಮಾಂಡರ್ ಮಟ್ಟದ 16ನೇ ಸುತ್ತಿನ ಸಭೆ ಜುಲೈ 17ರಂದು ನಡೆದಿತ್ತು. ಭಾರತ ಮತ್ತು ಚೀನಾ ನಡುವೆ 2020ರ ಮಾರ್ಚ್- ಏಪ್ರಿಲ್‌ನಿಂದಲೂ ಗಡಿ ನಿಯಂತ್ರಣ ರೇಖೆ ಕುರಿತು ಸಂಘರ್ಷ ನಡೆಯುತ್ತಿದೆ. 2020ರ ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಸಂಘರ್ಷ ನಡೆದಿತ್ತು.
ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ಹಾಗೂ ದಕ್ಷಿಣ ತೀರ ಮತ್ತು ಗಲ್ವಾನ್ ಕಣಿವೆಗಳು ಸೇರಿದಂತೆ ಇನ್ನೂ ಅನೇಕ ಸ್ಥಳಗಳಿಂದ ಸೇನಾ ವಾಪಸಾತಿ ಬಗ್ಗೆ ಮಾತುಕತೆಗಳು ನಡೆದಿವೆ. ಆದರೆ ಹಲವು ಪ್ರದೇಶಗಳ ಕುರಿತು ಬಿಕ್ಕಟ್ಟು ಮುಂದುವರಿದಿದೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement