31,000 ವರ್ಷಗಳ ಹಿಂದೆಯೇ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಕಾಲು ಕತ್ತರಿಸಿ ತೆಗೆದ ಪೂರ್ವ-ಐತಿಹಾಸಿಕ ಮಾನವ…! ಅಸ್ಥಿಪಂಜರದ ಮೇಲಿನ ಸಂಶೋಧನೆಯಲ್ಲಿ ಬಹಿರಂಗ

31,000 ವರ್ಷಗಳ ಹಿಂದೆಯೇ ಮನುಷ್ಯನಿಗೆ ಅಂಗಚ್ಛೇದನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂಬುದರ ಬಗ್ಗೆ ಪುರಾತತ್ತ್ವಜ್ಞರು ಈಗ ಪುರಾವೆಗಳನ್ನು ಕಂಡುಕೊಂಡಿದ್ದಾರೆ…! ಇದು ಈವರೆಗೆ ಪತ್ತೆಯಾದ ವಿಶ್ವದ ಅತ್ಯಂತ ಹಳೆಯ ಶಸ್ತ್ರಚಿಕಿತ್ಸೆ ಎಂದು ಹೇಳಲಾಗಿದೆ.
ಇಂಡೋನೇಷ್ಯಾದ ಗುಹೆಯೊಂದರಲ್ಲಿ ಕಂಡುಬಂದ ಯುವ ವಯಸ್ಕ ವ್ಯಕ್ತಿಯ ಅಸ್ಥಿಪಂಜರವು ಅದರ ಎಡ ಪಾದವನ್ನು ಕಳೆದುಕೊಂಡಿದೆ ಮತ್ತು ಅದರ ಭಾಗವನ್ನು ಅಂಗಚ್ಛೇದನದ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ ಎಂಬ ಬಗ್ಗೆ ವೈಜ್ಞಾನಿಕ ಸಂಶೋಧನೆಯಲ್ಲಿ ಪುರಾವೆಗಳು ಕಂಡುಬಂದಿದೆ.
ವ್ಯಕ್ತಿಯು ಮಗುವಾಗಿದ್ದಾಗ ಅಂಗಚ್ಛೇದನ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಪುರಾತತ್ತ್ವಜ್ಞರ ವಿಶ್ಲೇಷಣೆಯು ಬಹಿರಂಗಪಡಿಸಿದೆ. ಮತ್ತು ಯಾವುದೋ ರೋಗದಿಂದ ಅಥವಾ ತೊಂದೆಗೀಡಾದ ನಂತರ “ರೋಗಿಯ” ಕಾಲು ಕತ್ತರಿಸಿದ ನಂತರ ಆತ ಅಂಗವಿಕಲನಾಗಿ ಅನೇಕ ವರ್ಷಗಳ ಕಾಲ ಬದುಕಿದ್ದ ಎಂಬುದು ಸಹ ಸಂಶೋಧನೆಯಿಂದ ಕಂಡುಬಂದಿದೆ ಎಂದು ಪುರಾತತ್ತ್ವಜ್ಞರು ಹೇಳಿದ್ದಾರೆ. ಈ ಪೂರ್ವ-ಐತಿಹಾಸಿಕ ಶಸ್ತ್ರಚಿಕಿತ್ಸೆಯ ಮೊದಲ ಪುರಾವೆಯು ಆರಂಭಿಕ ಮಾನವರ ಬಗ್ಗೆ ಈ ವಿಶಿಷ್ಟ ಸಂಗತಿಯನ್ನು ಬಹಿರಂಗಪಡಿಸಿದ್ದು, ನಾವು ನಿರೀಕ್ಷಿಸುವುದಕ್ಕಿಂತ ಮುಂಚೆಯೇ ಔಷಧ ಹಾಗೂ ಶಸ್ತ್ರಚಿಕಿತ್ಸೆ ಬಗ್ಗೆ ಈ ಪೂರ್ವ ಐತಿಹಾಸಿಕ ಮಾನವರಿಗೆ ಗೊತ್ತಿತ್ತು ಎಂಬುದನ್ನು ಸಹ ಸಂಶೋಧನೆ ಬಹಿರಂಗಪಡಿಸಿದೆ.

ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನ ಲೇಖನದಲ್ಲಿ ಸುಮಾರು 10,000 ವರ್ಷಗಳ ಹಿಂದೆ ನೆಲೆಸಿದ ಕೃಷಿ ಸಮಾಜಗಳ ಹೊರಹೊಮ್ಮುವಿಕೆಯಿಂದ ವೈದ್ಯಕೀಯ ವಿಕಸನವಾಗಿದೆ ಎಂಬುದು ಈವರೆಗೆ ಕಂಡುಬಂದಿತ್ತು. ಯಾಕೆಂದರೆ ಆಹಾರಕ್ಕಾಗಿ ಅಲೆದಾಡುವ ಅಲೆಮಾರಿಗಳಲ್ಲಿ ತಿಳಿದಿಲ್ಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಯಿತು, ಇದು ಪೂರ್ವ ಐತಿಹಾಸಿಕ ಮಾನವರು ವೈದ್ಯಕೀಯ ಪದ್ಧತಿಗಳಲ್ಲಿ ಪ್ರಮುಖ ಆವಿಷ್ಕಾರಗಳನ್ನು ಮಾಡಲು ಉತ್ತೇಜನ ನೀಡಿತು ಎಂದು ಅಧ್ಯಯನ ಹೇಳುತ್ತದೆ.
ಮಳೆಕಾಡು ಪ್ರದೇಶದ ಬೊರ್ನಿಯೊದ ಗುಹೆಯಲ್ಲಿ ಉತ್ಖನನ ಮಾಡಿದಾಗ ಅಸ್ಥಿಪಂಜರವು ಎಡಗಾಲುಕತ್ತರಿಸಲ್ಪಟ್ಟ ರೀತಿಯಲ್ಲಿ ಪತ್ತೆಯಾಗಿದೆ. ಮತ್ತು ಎಡಗಾಲಿನ ಕೆಳಗಿನ ಭಾಗ ಮಾತ್ರ ಅದರ ಇರಲಿಲ್ಲ. ಆದರೆ ಈ ಪಾದದ ಮೂಳೆಗಳು ಸಮಾಧಿಯಿಂದ ಕಾಣೆಯಾಗಿದ್ದಲ್ಲ ಅಥವಾ ಯಾವುದೋ ಕಾರಣದಿಂದ ಇಲ್ಲವಾದದ್ದೂ ಅಲ್ಲ, ಅವುಗಳನ್ನು ಎಚ್ಚರಿಕೆಯಿಂದ ಕತ್ತರಿಸಿ ತೆಗೆದುಹಾಕಲಾಗಿದೆ ಎಂದು ವೈಜ್ಞಾನಿಕ ವಿಶ್ಲೇಷಣೆಗಳು ಬಹಿರಂಗಪಡಿಸಿವೆ.

ಲಿಯಾಂಗ್ ಟೆಬೊ ಗುಹೆಯಲ್ಲಿ ವ್ಯಕ್ತಿಯ ಅವಶೇಷಗಳನ್ನು ಹೂಳುವ ಮೊದಲು ವ್ಯಕ್ತಿಯು ಶಸ್ತ್ರಚಿಕಿತ್ಸೆಯ ನಂತರ 69 ವರ್ಷಗಳ ಕಾಲ ಬದುಕಿದ್ದ ಎಂದು ಸಂಶೋಧಕರು ಹೇಳಿದ್ದಾರೆ. ಮತ್ತೊಂದು ಕಾಲಿನ ಮೂಳೆಯು ಓರೆಯಾದ ಕಟ್ ಅನ್ನು ತೋರಿಸಿದೆ ಮತ್ತು ರೋಗ ವಾಸಿಯಾಗಿದೆ ಮತ್ತು ಸೋಂಕಿನ ಯಾವುದೇ ಲಕ್ಷಣಗಳಿಲ್ಲ, ಮೊಸಳೆಯಂತಹ ಜೀವಿ ಮಗು ಕಾಲನ್ನು ಕಚ್ಚಿ ತುಂಡರಿಸಿದ್ದಲ್ಲ ಎಂದು ಅದು ತಿಳಿಸಿದೆ. ಯಶಸ್ವಿ ಅಂಗವಿಚ್ಛೇದನದ ಈ ಅನಿರೀಕ್ಷಿತ ಶಸ್ತ್ರಚಿಕಿತ್ಸೆಯ ತಂತ್ರ ಪೂರ್ವ ಐತಿಹಾಸಿಕ ಮಾನವನರಲ್ಲಿತ್ತು ಎಂಬ ಈ ಪುರಾವೆಯು ಉಷ್ಣವಲಯದ ಏಷ್ಯಾದಲ್ಲಿ ಕನಿಷ್ಠ ಕೆಲವು ಆಧುನಿಕ ಮಾನವ ಗುಂಪುಗಳು ನವಶಿಲಾಯುಗದ ಕೃಷಿ ಪರಿವರ್ತನೆಗೆ ಬಹಳ ಹಿಂದೆಯೇ ಅತ್ಯಾಧುನಿಕ ವೈದ್ಯಕೀಯ ಜ್ಞಾನ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದ್ದವು ಎಂದು ಸೂಚಿಸುತ್ತದೆ” ಎಂದು ಅಧ್ಯಯನ ಹೇಳುತ್ತದೆ.

ಕೈಕಾಲು ಕತ್ತರಿಸಲು ಯಾವ ರೀತಿಯ ಸಾಧನವನ್ನು ಬಳಸಲಾಗಿದೆ, ಅಥವಾ ಕಾಲಿಗೆ ಆದ ಸೋಂಕನ್ನು ಹೇಗೆ ತಡೆಯಲಾಗಿದೆ ಎಂದು ಸಂಶೋಧಕರಿಗೆ ತಿಳಿದಿಲ್ಲವಾದರೂ ಆದರೆ ಚೂಪಾದ ಕಲ್ಲಿನ ಉಪಕರಣದಿಂದ ಕಾಲನ್ನು ತುಂಡು ಮಾಡಿರಬಹುದು ಎಂದು ಅವರು ಊಹಿಸುತ್ತಾರೆ. ಮತ್ತು ಆ ಪ್ರದೇಶದಲ್ಲಿದ್ದ ಕೆಲವು ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿರಬಹುದು ಎಂದು ಹೇಳುತ್ತಾರೆ.
ಈ ಆವಿಷ್ಕಾರದ ಮೊದಲು, 7,000 ವರ್ಷಗಳ ಹಿಂದೆ ಫ್ರೆಂಚ್ ರೈತನೊಬ್ಬ ತನ್ನ ಮುಂದೋಳಿನ ಭಾಗವನ್ನು ಕತ್ತರಿಸಿ ತೆಗೆದುಹಾಕಿದ್ದ. ಮಾನವರು ಕೃಷಿ ಸಮಾಜವಾಗಿ ನೆಲೆಸಿದ ನಂತರ ಸುಮಾರು 10,000 ವರ್ಷಗಳ ಹಿಂದೆ ಸುಧಾರಿತ ವೈದ್ಯಕೀಯ ಪದ್ಧತಿಗಳು ಅಭಿವೃದ್ಧಿಗೊಂಡಿವೆ ಎಂದು ಈ ಮೊದಲು ವಿಜ್ಞಾನಿಗಳು ಭಾವಿಸಿದ್ದರು ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement