ಜೀಸಸ್ ರಿಯಲ್ ಗಾಡ್, ಇತರ ಶಕ್ತಿಗಳಂತೆ ಅಲ್ಲ: ರಾಹುಲ್ ಜೊತೆ ಕ್ರೈಸ್ತ ಪಾದ್ರಿಯ ವಿವಾದದ ಹೇಳಿಕೆಯ ವೀಡಿಯೋ ವೈರಲ್

ಚೆನ್ನೈ: ಜೀಸಸ್ ಕ್ರೈಸ್ತ ನಿಜವಾದ ದೇವರು. ಬೇರೆ ಶಕ್ತಿಯ ರೀತಿ ಅಲ್ಲ ಎಂದು ಕನ್ಯಾಕುಮಾರಿಯ ಫಾದರ್ ಒಬ್ಬರು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಳಿ ಹೇಳಿರುವ ಮಾತುಗಳು ವೈರಲ್ಲಾಗಿದ್ದು ವಿವಾದಕ್ಕೆ ಕಾರಣವಾಗಿದೆ.
ಭಾರತ್ ಜೋಡೊ ಯಾತ್ರೆ ಹಮ್ಮಿಕೊಂಡಿರುವ ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿನ ಕ್ಯಾಥೋಲಿಕ್ ಫಾದರ್ ಜಾರ್ಜ್ ಪೊನ್ನಯ್ಯ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಈ ವೇಳೆ ರಾಹುಲ್ ಗಾಂಧಿ ಜೀಸಸ್ ಕ್ರೈಸ್ತ್‌ ದೇವರಿಂದ ಬಂದವರು ಎಂಬುದು ನಿಜವಲ್ಲವೇ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಪೊನ್ನಯ್ಯ, ದೇವರೆ ತನ್ನನ್ನು ತಾನು ಮನುಷ್ಯನಾಗಿ ಅನಾವರಣ ಮಾಡಿಕೊಂಡಿದ್ದಾರೆ. ಅವರು ನಿಜವಾದ ದೇವರು. ಯಾವುದೇ ಶಕ್ತಿ ಸ್ವರೂಪಿಗಳಂತಲ್ಲ. ನಾವು ಅವರನ್ನು ಮನುಷ್ಯ ರೂಪದಲ್ಲಿ ನೋಡಬಹುದು ಎಂದು ಹೇಳಿದ್ದಾರೆ. ಇದು ವೈರಲ್ಲಾಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕಳೆದ ವರ್ಷ ಜುಲೈನಲ್ಲಿ ಇದೇ ಫಾದರ್ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಡಿಎಂಕೆ ಸಚಿವರುಗಳ ವಿರುದ್ಧ ಪ್ರಚೋದನಕಾರಿ ಮತ್ತು ದ್ವೇಷಪೂರಿತ ಮಾತುಗಳ ಮೂಲಕ ಇಕ್ಕಟ್ಟಿಗೆ ಸಿಲುಕಿಸಿದ್ದರು.
ಅವರನ್ನು ರಾಹುಲ್ ಗಾಂಧಿ ಶುಕ್ರವಾರ ಬೆಳಗ್ಗೆ ಪುಲಿಯೋರ್‍ಕುರ್ಚಯ್‍ನ ಮುಟ್ಟಿಡಿಂಚನ್‍ಪರೈ ಚರ್ಚ್‍ನಲ್ಲಿ ಭೇಟಿಯಾಗಿ ಉಪಾಹಾರ ಸೇವಿಸಿದರು.
ಈ ವೀಡಿಯೊ ವೈರಲ್ಲಾಗುತ್ತಿದ್ದಂತೆ ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ಶಹಜಾದ್ ಪೂನಾವಾಲ ಅವರು, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಾರ್ಜ್ ಪೊಣ್ಣಯ್ಯ ಅವರು ಜೀಸಸ್ ಒಬ್ಬರೇ ದೇವರು. ಉಳಿದಂತೆ ಹಿಂದೂ ನಂಬಿಕೆಗಳ ದೇವರು ಅರ್ಥಾತ್ ಶಕ್ತಿಸ್ವರೂಪಿಗಳು ದೇವರಲ್ಲ ಎಂದು ವ್ಯಾಖ್ಯಾನ ಮಾಡಿದ್ದಾರೆ. ವಿವಾದಿತ ಫಾದರ್ ಅವರನ್ನು ಭಾರತ್ ಜೋಡೋದ ನಡುವೆ ಭೇಟಿಯಾಗುವ ಮೂಲಕ ರಾಹುಲ್ ಭಾರತ್ ತೋಡೊ ಮಾಡಲು ಯತ್ನಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಓದಿರಿ :-   ದೂರವಾಣಿ ಕರೆಗಳಿಗೆ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಎಂದು ಉತ್ತರಿಸಿ: ಅಧಿಕಾರಿಗಳಿಗೆ ಮಹಾರಾಷ್ಟ್ರ ಸರ್ಕಾರದ ಸೂಚನೆ

ಬಿಜೆಪಿಯ ಈ ಟೀಕೆ ಹಾಗೂ ವ್ಯಾಖ್ಯಾನಗಳಿಗೆ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದು, ಇದು ವಿಕೃತವಾದ ಹಾಸ್ಯ. ಭಾರತ ಐಕ್ಯತಾ ಯಾತ್ರೆಯನ್ನು ವಿಫಲಗೊಳಿಸಲು ನಡೆಸುತ್ತಿರುವ ಬಿಜೆಪಿಯವರ ದ್ವೇಷದ ಫ್ಯಾಕ್ಟ್ರಿಯ ಪ್ರಯತ್ನ ವಿಫಲವಾಗಿದೆ. ಹಳೆಯ ಟ್ವೀಟ್‍ಗಳನ್ನು ವೈರಲ್ ಮಾಡುವುದು, ಆಡಿಯೋ ವಿಡಿಯೋಗಳನ್ನು ಆಯ್ದು ಅಪಪ್ರಚಾರ ಮಾಡುವುದು ಬಿಜೆಪಿಯ ಕ್ಷುಲಕ ರಾಜಕಾರಣ. ರಾಹುಲ್ ಗಾಂಧಿಯವರ ಯಾತ್ರೆಯಿಂದ ಹತಾಶರಾಗಿ ಈ ರೀತಿಯ ಅವಹೇಳನ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಪಾಸ್ಟರ್ ಜಾರ್ಜ್ ಪೊನ್ನಯ್ಯ ಅವರು ಜನನಾಯಕ ಕ್ರಿಸ್ತವ ಪೆರವೈ ಸದಸ್ಯರಾಗಿದ್ದಾರೆ, ಇದು ತಮಿಳುನಾಡು ಮೂಲದ ಎನ್‌ಜಿಒ ಆಗಿದ್ದು, ಕನ್ಯಾಕುಮಾರಿಯಲ್ಲಿದೆ ಮತ್ತು ಆಗಾಗ್ಗೆ ಅವರ ವಿವಾದಾತ್ಮಕ ಹೇಳಿಕೆಗೆ ಹೆಸರುವಾಸಿಯಾಗಿದೆ. ಅವರು ವಿವಾದಗಳಿಗೆ ಹೊಸಬರೇನಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಿವಾದಾತ್ಮಕ ಭಾಷಣದ ನಂತರ ತಮಿಳುನಾಡಿನ ಕೆಲವು ಭಾಗಗಳಲ್ಲಿ ಅವರ ವಿರುದ್ಧ 30 ಕ್ಕೂ ಹೆಚ್ಚು ದೂರುಗಳನ್ನು ದಾಖಲಾಗಿದ್ದವು. ಪ್ರಚೋದನಕಾರಿ ಭಾಷೆಯನ್ನು ಬಳಸಿದ್ದಕ್ಕಾಗಿ ಪಾದ್ರಿ ಸಾರ್ವಜನಿಕ ಕ್ಷಮೆಯಾಚಿಸಲು ಒತ್ತಾಯಿಸಲಾಯಿತು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಚಲಿಸುವ ರೈಲಿನಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿ: ಯಮರಾಜನಿಗೆ ಸಡ್ಡು ಹೊಡೆದು ಬಾಯಿಯಿಂದ ಉಸಿರು (ಸಿಪಿಆರ್) ನೀಡಿ ಬದುಕಿಸಿದ ಪತ್ನಿ | ವೀಡಿಯೊ ವೈರಲ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.3 / 5. ಒಟ್ಟು ವೋಟುಗಳು 4

ನಿಮ್ಮ ಕಾಮೆಂಟ್ ಬರೆಯಿರಿ

advertisement