ರಾಣಿ ಎಲಿಜಬೆತ್ ನಿಧನದ ನಂತರ ಚಾರ್ಲ್ಸ್ lll ಬ್ರಿಟನ್ ದೊರೆಯೆಂದು ಅಧಿಕೃತವಾಗಿ ಘೋಷಣೆ

ಲಂಡನ್‌: ಲಂಡನಲ್ಲಿರುವ ಸೇಂಟ್‌ ಜೇಮ್ಸ್ ಅರಮನೆಯಲ್ಲಿ ಶನಿವಾರ ನಡೆದ ಸಿಂಹಾಸನಾರೋಹಣ ಸಭೆಯಲ್ಲಿ ಚಾರ್ಲ್ಸ್ llI (Charles llI) ಅವರನ್ನು ಬ್ರಿಟನ್ನಿನ ದೊರೆ ಎಂದು ಘೋಷಿಸಲಾಗಿದ್ದು ಈ ವಿಷಯವನ್ನು ಟೆಲಿವಿಷನ್ ಮೂಲಕ ಬಿತ್ತರಿಸಲಾಗಿದೆ. ಪ್ರಿನ್ಸ್ ವಿಲಿಯಮ್ಸ್, ಪ್ರಧಾನ ಮಂತ್ರಿ ಲಿಜ್ ಟ್ರಸ್, ಆರ್ಚ್ ಬಿಷಪ್ ಜಸ್ಟಿನ್ ವೆಬ್ಲಿ ಅವರ ಸಮ್ಮುಖದಲ್ಲಿ ಬ್ರಿಟನ್ನಿನ ದೊರೆ ಅಧಿಕೃತ ಘೋಷಣೆಯ ಮೇಲೆ ಚಾರ್ಲ್ಸ್ llI ಸಹಿ ಹಾಕಿದರು.
ಗುರುವಾರ 70 ವರ್ಷಗಳವರೆಗೆ ಬ್ರಿಟನ್ನಿನ ಮಹಾರಾಣಿಯಾಗಿದ್ದ 96-ವರ್ಷ-ವಯಸ್ಸಿನ ರಾಣಿ ಎಲಿಜಬೆತ್ ನಿಧನರಾದರು. ರಾಣಿಯ ಅಂತ್ಯಸಂಸ್ಕಾರ ಮುಂದಿನ ವಾರ ನಡೆಯಲಿದೆ.
ತನ್ನ ತಾಯಿ ರಾಣಿ ಎಲಿಜಬೆತ್ lI ಅವರ ಉತ್ತರಾಧಿಕಾರಿಯಾಗಿದ್ದ ರಾಜಕುಮಾರ ಚಾರ್ಲ್ಸ್ ಫಿಲಿಪ್ ಆರ್ಥರ್ ಜಾರ್ಜ್ ರಾಣಿಯ ಮರಣದ ನಂತರ ಸ್ವಾಭಾವಿಕವಾಗಿ ಬ್ರಿಟನ್ನಿನ ದೊರೆಯಾದರಾದರೂ, ಅಕ್ಸೆಷನ್ ಕೌನ್ಸಿಲ್ ಅದನ್ನು ವಿಧ್ಯುಕ್ತವಾಗಿ ಮತ್ತು ಸಾಂಪ್ರದಾಯಿಕವಾಗಿ ಅವರನ್ನು ಹೊಸ ದೊರೆ ಎಂದು ಘೋಷಿಸಿತು.

ಬೆಳಿಗ್ಗೆ 11 ಗಂಟೆಯಿಂದ ಧ್ವಜಗಳು ಧ್ವಜಸ್ತಂಭದ ತುದಿಯಲ್ಲಿ ಹಾರಿದವು ಮತ್ತು ರಾಯಲ್ ತೋಪುಗಳನ್ನು ಸಿಡಿಸಲಾಯಿತು. ಹೌಸ್ ಆಫ್ ಕಾಮನ್ಸ್ ನಲ್ಲಿ ಹಿರಿಯ ಸರ್ಕಾರೀ ಅಧಿಕಾರಿಗಳು ಸಹ ಕಿಂಗ್ ಚಾರ್ಲ್ಸ್ llI ಹೆಸರಲ್ಲಿ ಪ್ರಮಾಣ ಮಾಡಿದರು.
ಆಕ್ಸೆಷನ್ ಕೌನ್ಸಿಲ್ ಅನ್ನೋದು ಪ್ರಿವಿ ಕೌನ್ಸಿಲ್ ಸದಸ್ಯರನ್ನು ಒಳಗೊಂಡಿರುತ್ತದೆ. ಈ ಗುಂಪಿನಲ್ಲಿ ಹಿರಿಯ ಮಾಜಿ ಮತ್ತು ಹಾಲಿ ಸಂಸತ್ ಸದಸ್ಯರು, ರಾಜಮನೆತನದ ಆಪ್ತರು, ನಾಗರಿಕ ಸೇವೆ ಅಧಿಕಾರಿಗಳು, ಕಾಮನ್ ವೆಲ್ ಹೈ ಕಮೀಶನರ್‌ಗಳು ಮತ್ತು ಲಂಡನ್ ಮೇಯರ್ ಇರುತ್ತಾರೆ.
ಶುಕ್ರವಾರ ಬ್ರಿಟನ್ ಅರಸೊತ್ತಿಗೆಯ ಪ್ರತಿನಿಧಿಯಾಗಿ ಮೊದಲ ಭಾಷಣ ಮಾಡಿದ ಕಿಂಗ್ ಚಾರ್ಲ್ಸ್ ಅವರು ರಾಣಿ ಎಲಿಜಬೆತ್ ಅವರನ್ನು ನೆನೆದರು. ಹಾಗೂ ತಾನು ಬದುಕಿರುವವರೆಗೆ ದೇಶಕ್ಕೆ ನಿಷ್ಠೆ, ಪ್ರೀತಿಯಿಂದ ಸೇವೆ ಸಲ್ಲಿಸುವುದಾಗಿ ಹೇಳಿದರು.

 

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement