ಇಹಲೋಕ ತ್ಯಜಿಸಿದ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ

ನವದೆಹಲಿ: ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ ಭಾನುವಾರ ನಿಧನರಾದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು.
ದ್ವಾರಕಾ, ಜ್ಯೋತಿಶ್ ಪೀಠದ ಶಂಕರಾಚಾರ್ಯರಾಗಿದ್ದ ಸ್ವಾಮಿ ಸ್ವರೂಪಾನಂದ ಅವರು ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ನರಸಿಂಗ್‌ಪುರ ಜಿಲ್ಲೆಯ ತಮ್ಮ ಆಶ್ರಮದಲ್ಲಿ ಮಧ್ಯಾಹ್ನ 3:30 ರ ಸುಮಾರಿಗೆ ನಿಧನರಾದರು ಎಂದು ದ್ವಾರಕಾ ಪೀಠದ ಎರಡನೇ ಕಮಾಂಡ್ (ದಂಡಿ ಸ್ವಾಮಿ ಎಂದು ಕರೆಯಲಾಗುತ್ತದೆ) ಸ್ವಾಮಿ ಸದಾನಂದ ಮಹಾರಾಜ್ ಅವರು ತಿಳಿಸಿದರು.
ವರದಿಗಳ ಪ್ರಕಾರ, ಅವರು ಸಣ್ಣ ಹೃದಯಾಘಾತದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ. ಸ್ವರೂಪಾನಂದರು ದ್ವಾರಕಾ, ಶಾರದಾ ಮತ್ತು ಜ್ಯೋತಿಶ್ ಪೀಠದ ಶಂಕರಾಚಾರ್ಯರಾಗಿದ್ದರು. ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರು ಆಶ್ರಮಕ್ಕೆ ಮರಳಿದ್ದರು.
ವರದಿಗಳ ಪ್ರಕಾರ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.

ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು 1924ರಲ್ಲಿ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ದಿಘೋರಿ ಗ್ರಾಮದಲ್ಲಿ ಜನಿಸಿದ್ದರು ಹಾಗೂ ಅವರು ಪಾಉರ್ವಾಶ್ರಮದ ಹೆಸರು ಪೋತಿರಾಮ್ ಉಪಾಧ್ಯಾಯ ಎಂದಾಗಿತ್ತು. ಅವರು ಒಂಬತ್ತನೇ ವಯಸ್ಸಿನಲ್ಲಿ ದೇವರ ಅನ್ವೇಷಣೆಯಲ್ಲಿ ತಮ್ಮ ಮನೆಯನ್ನು ತೊರೆದರು. ಅವರು ಉತ್ತರ ಪ್ರದೇಶದ ವಾರಣಾಸಿಯನ್ನು ತಲುಪಿದ ನಂತರ ಸ್ವಾಮಿ ಕರ್ಪಾತ್ರಿ ಮಹಾರಾಜರಿಂದ ವೇದಗಳು ಮತ್ತು ಧರ್ಮಗ್ರಂಥಗಳನ್ನು ಕಲಿತರು.ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಆ ಸಮಯದಲ್ಲಿ ಅವರನ್ನು ಕ್ರಾಂತಿಕಾರಿ ಸಾಧು ಎಂದು ಕರೆಯಲಾಗುತ್ತಿತ್ತು. 1942 ರಲ್ಲಿ ಬ್ರಿಟಿಷ್ ಕ್ವಿಟ್ ಇಂಡಿಯಾ ಚಳುವಳಿಯನ್ನು ಘೋಷಿಸಿದಾಗ, ಸ್ವಾಮಿ ಸ್ವರೂಪಾನಂದರು ಸಹ ಚಳುವಳಿಗೆ ಧುಮುಕಿದರು, ಅವರು 19 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎನಿಸಿಕೊಂಡರು. 19ನೇ ವಯಸ್ಸಿನಲ್ಲಿ, ಅವರು ಕ್ರಾಂತಿಕಾರಿ ಸನ್ಯಾಸಿ ಎಂದು ಪ್ರಸಿದ್ಧರಾದರು. ವಾರಣಾಸಿಯಲ್ಲಿ 9 ತಿಂಗಳು ಮತ್ತು ಮಧ್ಯಪ್ರದೇಶದ ಜೈಲುಗಳಲ್ಲಿ 6 ತಿಂಗಳು ಸೆರೆವಾಸ ಅನುಭವಿಸಿದರು.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೂ ಕೊಡುಗೆ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಸುದೀರ್ಘ ಕಾನೂನು ಹೋರಾಟವನ್ನೂ ನಡೆಸಿದರು. ಅವರು 1981 ರಲ್ಲಿ ಅವರು ಶಂಕರಾಚಾರ್ಯ ಪೀಠ ಏರಿದರು. ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಗುಜರಾತ್‌ನ ದ್ವಾರಕಾದಲ್ಲಿರುವ ದ್ವಾರಕಾ ಶಾರದ ಪೀಠದ ಶಂಕರಾಚಾರ್ಯ ಮತ್ತು 1982 ರಲ್ಲಿ ಬದರಿನಾಥದ ಜ್ಯೋತಿರ್ ಮಠದ ಶಂಕರಾಚಾರ್ಯರಾದರು ಎಂದು ಅವರ ಶಿಷ್ಯರು ಹೇಳಿದರು.

ಶಂಕಾರಾಚಾರ್ಯ ಸ್ವಾಮಿ ಸ್ವರೂಪಾನಂದ ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. “ಈ ದುಃಖದ ಸಮಯದಲ್ಲಿ ಅವರ ಅನುಯಾಯಿಗಳಿಗೆ ನನ್ನ ಸಂತಾಪ. ಓಂ ಶಾಂತಿ!” ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಧರ್ಮಗುರುಗಳ ನಿಧನವು ಧಾರ್ಮಿಕ ಮುಖಂಡರ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಹ ಸಂತಾಪ ಸೂಚಿಸಿದರು ಮತ್ತು ಭಾರತೀಯ ಸಂಪ್ರದಾಯಗಳಿಗೆ ಅವರ ಕೊಡುಗೆ ದೊಡ್ಡದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂತಾಪ ಸೂಚಿಸಿದ್ದು, ಸ್ವಾಮಿ ಸ್ವರೂಪಾನಂದರು ತಮ್ಮ ಜೀವನವನ್ನು ಧರ್ಮ, ಆಧ್ಯಾತ್ಮಿಕತೆ ಮತ್ತು ದಾನಕ್ಕಾಗಿ ಮುಡಿಪಾಗಿಟ್ಟಿದ್ದರು ಎಂದು ಹೇಳಿದ್ದಾರೆ. 2021 ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ಸ್ವಾಮಿ ಸ್ವರೂಪಾನಂದ ಅವರ ಭೇಟಿಯನ್ನು ಅವರು ನೆನಪಿಸಿಕೊಂಡಿದ್ದಾರೆ. 1990 ರಲ್ಲಿ ತಮ್ಮ ತಂದೆ ರಾಜೀವ್ ಗಾಂಧಿಯವರ ಸಮ್ಮುಖದಲ್ಲಿ ಸ್ವಾಮೀಜಿ ತಮ್ಮ ಮನೆಯ ‘ಗೃಹ ಪ್ರವೇಶ’ವನ್ನು ಮಾಡಿದ್ದರು ಎಂದು ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement