ಕ್ಲಿನಿಕ್ ಬಾಗಿಲು ತೆರೆಯಲು ತಡವಾಗಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಗುಂಪು : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವೈದ್ಯರು ಕ್ಲಿನಿಕ್‌ಗೆ ಬೇಗ ಬರಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಜನರ ಗುಂಪೊಂದು ಚೆನ್ನಾಗಿ ಥಳಿಸಿದೆ. ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮಾಲೆಗಾಂವ್ ನ ಸಂಗಾವಿಯಲ್ಲಿ ಈ ಘಟನೆ ನಡೆದಿದ್ದು, ಆಯುರ್ವೇದ ವೈದ್ಯರನ್ನು ಗುಂಪೊಂದು ಚೆನ್ನಾಗಿ ಥಳಿಸಿದೆ.
ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮಾಲೆಗಾಂವ್ ನ ಸಂಗಾವಿಯಲ್ಲಿ ಆಯುರ್ವೇದ ವೈದ್ಯರು ತಡವಾಗಿ ಕ್ಲಿನಿಕ್ ಬಾಗಿಲು ತೆರೆದಿದ್ದಾರೆ. ಕ್ಲಿನಿಕ್ ಬಾಗಿಲನ್ನು ತಡವಾಗಿ ತೆರೆದಿದ್ದರಿಂದ ನಮ್ಮನ್ನು ಒಳಗೆ ಬಿಡಲು ತಡವಾಗಿದೆ ಎಂದು ಆರೋಪಿಸಿ, ರೋಗಿಯ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಸೆಪ್ಟೆಂಬರ್ 6 ರಂದು ನಡೆದಿದೆ. ವೈದ್ಯ ತಂದೆಯ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ಬಿಡಿಸಲು ಹೋಗಿದ್ದ ಮಗನ ಮೇಲೂ ರೋಗಿಯ ಸಂಬಂಧಿಕರ ಗುಂಪು ಹಲ್ಲೆ ಮಾಡಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಯುವರಾಜ ಗಾಯಕ್ವಾಡ್ ಅವರ ಮನೆಯಿಂದ ಹೊರಗಿರುವ ಸಂಗಾವಿಯಲ್ಲಿರುವ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ.

ಯುವರಾಜ್ ಗಾಯಕ್ವಾಡ್ ಅವರು ನೀಡಿರುವ ದೂರಿನ ಪ್ರಕಾರ, ಗಾಯಕ್ವಾಡ್ ಅವರು ತಮ್ಮ ಕುಟುಂಬದೊಂದಿಗೆ ರಾತ್ರಿ ಊಟ ಮಾಡುತ್ತಿದ್ದರು. ಆಗ ಯಾರೋಜೋರಾಗಿ ಬಾಗಿಲು ಬಡಿಯುವ ಶಬ್ದ ಕೇಳಿದೆ. ನಂತರ ಬಾಗಿಲು ತೆರೆಯಲು ತಡವಾಗಿದೆ. ಆಗ ರೋಗಿಯ ಸಂಬಂಧಿಕರು ಕಿಟಕಿಯ ಗಾಜು ಒಡೆದಿದ್ದಾರೆ. ವೈದ್ಯರು ಬಾಗಿಲು ತೆರೆದಿದ್ದಾರೆ. ಆನಂದ್ ಅಲಿಯಾಸ್ ಅನಿಲ್ ಜಗತಾಪ್, ವಿಶ್ವಜೀತ್ ಜಗತಾಪ್, ಅಶೋಕ್ ಜಗತಾಪ್ ಮತ್ತು ಭೂಷಣ್ ಜಗತಾಪ್, ಎಂಬವರು ಜಗಳವಾಡಿದ್ದಾರೆ. ಜಗಳದ ನಂತರ ಮನೆಯೊಳಗೆ ನುಗ್ಗಿ ವೈದ್ಯರನ್ನು ಥಳಿಸಿದ್ದಾರೆ.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

ಸಿಸಿಟಿವಿ ಕ್ಯಾಮೆರಾದಲ್ಲಿ ಒಬ್ಬ ವ್ಯಕ್ತಿ ಕ್ಲಿನಿಕ್‌ನ ಒಳಗೆ ಹೋಗುತ್ತಾನೆ. ಮತ್ತು ಬಾಗಿಲು ತೆರೆದು ಗಾಯಕ್‌ವಾಡ್ ಅವರನ್ನು ಎಳೆದು ಹಲ್ಲೆ ನಡೆಸುತ್ತಾನೆ. ಇದನ್ನು ತಡೆಯಲು ಬಂದ ಮಗನ ಮೇಲೂ ಹಲ್ಲೆ ನಡೆಸಿದ್ದಾರೆ. ಮುಂದಿನ ಕೋಣೆಯಲ್ಲಿ ಇಬ್ಬರು ಮಹಿಳೆಯರು ಘಟನೆ ನಡೆಯುತ್ತಿರುವುದನ್ನು ವೀಕ್ಷಿಸುತ್ತಿದ್ದಾರೆ. ಇನ್ನೊಬ್ಬ ವ್ಯಕ್ತಿ ಘಟನೆಯ ಫೋಟೋ ತೆಗೆದುಕೊಳ್ಳುತ್ತಿದ್ದಾರೆ.
ಮಾಲೆಗಾಂವ್ ಪೊಲೀಸರು, ವೈದ್ಯರ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಎಫ್ ಐಆರ್ ಪ್ರಕರಣ ದಾಖಲಿಸಿದ್ದಾರೆ. ದೂರಿನ ಅನ್ವಯ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement