ಒಡೆಯನ ಅಂತ್ಯಸಂಸ್ಕಾರಕ್ಕೆ ಬಂದ ಆಕಳ ಕರು, ಹಣೆಗೆ ಮುತ್ತಿಟ್ಟು ಕಣ್ಣೀರು ಸುರಿಸಿ, ಪಾರ್ಥಿವ ಶರೀರಕ್ಕೆ ಪ್ರದಕ್ಷಿಣೆ ಹಾಕಿದ ಮೂಕ ಪ್ರಾಣಿ: ಜನರೂ ಭಾವುಕ

ಹಜಾರಿಬಾಗ್: ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಪ್ರೀತಿಯ ಅನೇಕ ಪ್ರಕರಣಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಆದರೆ ಆಕಳು ಕರುವೊಂದು ತನ್ನ ಮಾಲೀಕ ಸತ್ತಾಗ ತೋರಿದ ಪ್ರೀತಿ ಎಲ್ಲರ ಕಣ್ಣಾಲಿಗಳನ್ನೂ ತೇವವಾಗಿಸಿದೆ. ವ್ಯಕ್ತಿಯ ಮೃತಪಟ್ಟ ನಂತರ, ಅತ ಸಾಕಿದ್ದ ಆಕಳು ಕರು ಅವನ ಮೃತದೇಹದ ಬಳಿಗೆ ತಲುಪಿತು. ಅಷ್ಟೇ ಆದರೆ ಅಂತಹ ವಿಶೇಷ ಇರಲಿಲ್ಲ. ಆದರೆ ಈ ಕರು ಆತನ ಮೃತ ದೇಹಕ್ಕೆ ಪ್ರದಕ್ಷಿಣೆ ಹಾಕಿ ತನ್ನ ಯಜಮಾನನ ಪಾದಗಳಿಗೆ ಮತ್ತು ಹಣೆಗೆ ಮುತ್ತಿಟ್ಟು ನಂತರ ಆತನ ಸಾವಿಗೆ ಮೃತದೇಹದ ಮುಂದೆ ಕಣ್ಣೀರು ಸುರಿಸಿದೆ. ಈ ದೃಶ್ಯವನ್ನು ನೋಡಿದ ಜನರ ಕಣ್ಣಲ್ಲಿಯೂ ನೀರು ಜಿನುಗಿದೆ ಎಂದು ವರದಿಯಾಗಿದೆ.
ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಡೆದ ಮಾನವ ಮತ್ತು ಪ್ರಾಣಿ ನಡುವಿನ ಬಾಂಧವ್ಯದ ಈ ವಿಶಿಷ್ಟ ಘಟನೆ ಇಡೀ ಪ್ರದೇಶದಲ್ಲಿ ಈಗ ಚರ್ಚೆಯ ವಿಷಯವಾಗಿದೆ. ಹಜಾರಿಬಾಗ್‌ನ ಗ್ರಾಮವೊಂದರಲ್ಲಿ, ಕರುವೊಂದು ತನ್ನ ಮಾಲೀಕನ ಸಾವಿನ ನಂತರ ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ತಲುಪಿತು. ಸ್ಮಶಾನಕ್ಕೆ ಬಂದ ನಂತರ ಅದು ಮೃತ ಶರೀರ ನೋಡಿ ಕಣ್ಣಲ್ಲಿ ನೀರು ಸುರಿಸುತ್ತಿತ್ತು ಮತ್ತು ಮಾಲೀಕರ ದೇಹಕ್ಕೆ ಮುತ್ತಿಟ್ಟಿತು. ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಗುವವರೆಗೂ ಆ ಕರು ಅಲ್ಲಿಂದ ಕದಲಲಿಲ್ಲ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಎಎಪಿಗೆ ಆಘಾತ: ಪಕ್ಷದ ಏಕೈಕ ಲೋಕಸಭಾ ಸದಸ್ಯ ಬಿಜೆಪಿಗೆ ಸೇರ್ಪಡೆ

ಹಜಾರಿಬಾಗ್‌ ಜಿಲ್ಲೆಯ ಪಾಪೋ ಗ್ರಾಮದ ಮೇವಾಲಾಲಗೆ ಮಕ್ಕಳಿರಲಿಲ್ಲ. ಮೇವಾವಾಲ್​ ಬಳಿ ಹಸುವೊಂದಿತ್ತು. ಅದು ಕರುವೊಂದನ್ನು ಹಾಕಿತ್ತು. ಮಕ್ಕಳಿರದ ಮೇವಾಲಾಲ್‌ ಆ ಕರುವನ್ನು ಮಕ್ಕಳಂತೆ ಸಾಕಿದ್ದ. ಆದರೆ ಯಾವುದೋ ಕಾರಣದಿಂದ ಮೇವಾವಾಲ್ ಮೂರು ತಿಂಗಳ ಹಿಂದೆ ಅದನ್ನು ಬೇರೆ ಗ್ರಾಮದ ರೈತನಿಗೆ ಮಾರಾಟ ಮಾಡಿದ್ದ. ಹೀಗಿದ್ದರೂ ಮೇವಾಲಾಲ್ ಠಾಕೂರ್ ಮೃತಪಟ್ಟಾಗ ಈ ಕರು ಪಾಪೋ ಗ್ರಾಮವನ್ನು ತಲುಪಿದೆ.

ಸ್ಮಶಾನದಲ್ಲಿ ಮೃತದೇಹದ ಬಳಿ ಏಕಾಏಕಿ ಕರು ಬರುತ್ತಿರುವುದನ್ನು ಕಂಡ ಜನರು ಅದನ್ನು ಓಡಿಸಲು ಯತ್ನಿಸಿದ್ದಾರೆ. ಆದರೂ ಅದು ಹೋಗದೆ ಮೃತದೇಹದ ಬಳಿ ಮತ್ತೆ ಮತ್ತೆ ಬರಲು ಪ್ರಯತ್ನಿಸಿದೆ. ನಂತರ ಅಲ್ಲಿದ್ದ ಹಿರಿಯರು ಆ ಕರುವಿಗೆ ಮೃತದೇಹದ ಬಳಿ ಹೋಗಲು ಅವಕಾಶ ನೀಡುವಂತೆ ಸೂಚಿಸಿದ್ದಾರೆ. ನಂತರ ಕರುವಿಗೆ ಯಾರೂ ಏನೂ ಮಾಡಲಿಲ್ಲ. ಆಗ ಮೃತದೇಹದ ಬಳಿ ಬಂದ ಆ ಆಕಳು ಕರು ಅದನ್ನು ಮೂಸಿ, ಮೈನೆಕ್ಕಿ, ಮುತ್ತಿಟ್ಟು ಕಣ್ಣೀರು ಸುರಿಸಲಾರಂಭಿಸಿತು. ಇದಾದ ಬಳಿಕ ಜನರು ಮಕ್ಕಳಿಲ್ಲದ ಮೇವಾಲಾಲ್‌ನಿಗೆ ಕರುವೇ ಆತನ ಮಗ ಎಂದು ಭಾವಿಸಿ ಅದಕ್ಕೆ ಸ್ನಾನ ಮಾಡಿಸಿ ಅಂತ್ಯಕ್ರಿಯೆಯ ವಿಧಿ ವಿಧಾನಗಳಲ್ಲಿ ಅದನ್ನು ತೊಡಗಿಸಿಕೊಂಡಿದ್ದಾರೆ. ನಂತರ ಅದು ಜನರು ಮೃತದೇಹದ ಸುತ್ತ ಪ್ರದಕ್ಷಿಣೆ ಹಾಕಿದಂತೆ ತಾನೂ ಅದನ್ನು ಅನುಸರಿಸಿದೆ. ಮೇವವಾಲ್​ ಮೃತದೇಹ ಪಂಚಭೂತಗಳಲ್ಲಿ ಲೀನವಾಗುವವರತೆಗೂ ಈ ಕರು ಅಲ್ಲಿಂದ ಕದಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಮೇವಾಲಾಲ್‌ನ ಬಗ್ಗೆ ಆ ಕರುವಿನ ಪ್ರೀತಿ ಕಂಡು ಜನ ಬೆರಗಾಗಿದ್ದಾರೆ. ಆತ ಅದನ್ನು ತನ್ನ ಕೊನೆಗಾಲದಲ್ಲಿ ಬೇರೆ ಊರಿನ ರೈತನಿಗೆ ಮಾರಾಟ ಮಾಡಿದ್ದರೂ ಅದು ಆತನ ಸಾವಿನ ನಂತರ ಅಲ್ಲಿಗೆ ಹೇಗೆ ಬಂತು ಎಂಬುದು ಜನರ ಅಚ್ಚರಿಗೆ ಕಾರಣವಾಗಿದೆ. ತನ್ನ ಮಾಜಿ ಮಾಲೀಕನಿಗೆ ಅದು ತೋರಿದಿ ಪ್ರೀತಿ ಹಾಗೂ ಸಲ್ಲಿಸಿದ ಕೃತಜ್ಞತೆಗೆ ಜನ ಮೂಕವಿಸ್ಮಿತರಾಗಿದ್ದಾರೆ. ಈಗ ಸುಮುತ್ತಲಿನ ಊರಿನಲ್ಲಿ ಈ ಘಟನೆ ಬಹುಚರ್ಚಿತ ವಿಷಯವಾಗಿದೆ ಎಂದು ವರದಿಗಳು ತಿಳಿಸಿವೆ.

ಪ್ರಮುಖ ಸುದ್ದಿ :-   2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ...!

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement