ಪೊಲೀಸ್‌ ಠಾಣೆ ಕಾವಲು ಕಾಯಲು ಚೀನಾ ಹಾವುಗಳ ಬಳಕೆ….! ಕೇರಳದಲ್ಲಿ ಈ ವಿನೂತನ ತಂತ್ರ ಈವರೆಗೆ ಸಕ್ಸಸ್‌…!!

ಇಡುಕ್ಕಿ (ಕೇರಳ): ಪೊಲೀಸ್ ಸಿಬ್ಬಂದಿಯನ್ನು ಸಾಮಾನ್ಯವಾಗಿ ಸಮಾಜದ ಕಾನೂನು ಪರಿಪಾಲಕರು ಎಂದು ಪರಿಗಣಿಸಲಾಗುತ್ತದೆ. ಆದರೆ ಕೇರಳದ ಇಡುಕ್ಕಿಯ ಅರಣ್ಯದ ಅಂಚಿನ ಪೊಲೀಸ್ ಠಾಣೆಯೊಂದರಲ್ಲಿ “ಹಾವುಗಳು” ಈ ಕಾನೂನು ಪರಿಪಾಲಕರ “ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದರೆ ಅತಿಶಯೋಕ್ತಿಯಲ್ಲ.
ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಂಗಗಳ ಹಾವಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಪೊಲೀಸರು ಕೇರಳ-ತಮಿಳುನಾಡು ಗಡಿಯಲ್ಲಿರುವ ಕುಂಬುಮೆಟ್ಟು ಪೊಲೀಸ್ ಠಾಣೆಯ ಸುತ್ತಲೂ ರಬ್ಬರ್ ಹಾವುಗಳನ್ನು “ನಿಯೋಜನೆ” ಮಾಡಿದ್ದಾರೆ.
ಪಕ್ಕದ ಕಾಡಿನಿಂದ ದಾರಿ ತಪ್ಪಿ ಬರುತ್ತಿದ್ದ ಕೋತಿಗಳ ಪಡೆಗಳ ಉಪಟಳದಿಂದ ಬೇಸತ್ತ ಪೊಲೀಸರು ಕೊನೆಗೂ ಈ ಹಾವಿನ ಉಪಾಯವನ್ನು ಮಾಡಿ ಅವನ್ನು ತಡೆಯಲು ಯತ್ನಿಸಿದ್ದು ಈ ಪ್ರಯೋಗ ಇಲ್ಲಿಯವರೆಗೆ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ನೈಜ ಹಾವುಗಳನ್ನು ಹೋಲುವ ಚೀನಾ ನಿರ್ಮಿತ ಹಾವುಗಳು ಪೊಲೀಸ್ ಠಾಣೆ ಕಟ್ಟಡದ ಗ್ರಿಲ್, ಸಮೀಪದ ಮರಗಳ ಕೊಂಬೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅವುಗಳನ್ನು ನೇತು ಹಾಕಿರುವುದನ್ನು ಕಾಣಬಹುದು. ಬೀದಿ ಪ್ರಾಣಿಗಳನ್ನು ತಡೆಯಲು ಇದೇ ಕೆಲಸ ಮಾಡುತ್ತಿದ್ದ ಸ್ಥಳೀಯ ಎಸ್ಟೇಟ್ ನೋಡಿಕೊಳ್ಳುತ್ತಿರುವ ವ್ಯಕ್ತಿಯ ಸಲಹೆಯಂತೆ ಪೊಲೀಸ್ ಸಿಬ್ಬಂದಿ ‘ಹಾವಿನ ತಂತ್ರ’ ಪ್ರಯೋಗಿಸಿದ್ದಾರೆ.
ರಬ್ಬರ್ ಹಾವುಗಳನ್ನು ನೇತು ಹಾಕಿದ ನಂತರ ಯಾವುದೇ ಕೋತಿ ಪೊಲೀಸ್‌ ಸ್ಟೇಶನ್‌ ಬಳಿ ಬಂದಿಲ್ಲ ಎಂದು ಕುಂಬುಮೆಟ್ಟು ಸಬ್ ಇನ್ಸ್‌ಪೆಕ್ಟರ್ ಪಿ.ಕೆ.ಲಾಲಭಾಯ್ ಹೇಳಿದ್ದಾರೆ.
ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಬ್ಬರ್ ಹಾವುಗಳನ್ನು ಕಟ್ಟಿದರೆ ಮಂಗಗಳ ಕಾಟ ಇರುವುದಿಲ್ಲ ಎಂದು ಹೇಳಲಾಗಿತ್ತು. ಆ ಪ್ರಯೋಗದ ನಂತರ ಯಾವುದೇ ಕಾಟ ತಪ್ಪಿಲ್ಲ ಎಂದರು. ಕುಂಬುಮ್ಮೆಟ್ಟು ಪೊಲೀಸ್ ಠಾಣೆಯು ಕೇರಳದ ಇಡುಕ್ಕಿಯ ನೆಡುಂಕಂಡಂನಲ್ಲಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ದೆಹಲಿಯ ಇಂಡಿಯಾ ಗೇಟ್‌ ಮೇಲೆ ರಾತ್ರಿಯ ಬಾನಂಗಳದಲ್ಲಿ ಡ್ರೋಣ್‌ಗಳ ಮೂಲಕ ಮಹಾತ್ಮಾ ಗಾಂಧೀಜಿ ಅನಾವರಣ | ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement