ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆ : 15 ರಾಜ್ಯಗಳ ಮುಖ್ಯಸ್ಥರಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಪಾಳಯ ಸೇರಿದ 12 ರಾಜ್ಯಗಳ ಮುಖ್ಯಸ್ಥರು…!

ಮುಂಬೈ : ಶಿವಸೇನೆಯ ಬಣ ರಾಜಕೀಯದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಬಂ ಮೇಲುಗೈ ಸಾಧಿಸಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಭಾರೀ ಹಿನ್ನಡೆಯಾಗಿದೆ.
ಶಿವಸೇನೆಯ ವಿವಿಧ ರಾಜ್ಯ ಘಟಕದ 15 ಮುಖ್ಯಸ್ಥರಲ್ಲಿ 12 ರಾಜ್ಯಗಳ ಮುಖ್ಯಸ್ಥರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣಕ್ಕೆ ಬೆಂಬಲ ಘೋಷಿಸಿದ್ದಾರೆ. ಸೆಪ್ಟೆಂಬರ್‌ 15ರಂದು ಗುರುವಾರ ನಡೆದ ಸಭೆಯಲ್ಲಿ ಶಿವಸೇನಯ 12 ರಾಜ್ಯ ಘಟಕದ ಮುಖ್ಯಸ್ಥರು ಶಿಂಧೆ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ. .
ದೆಹಲಿ ಶಿವಸೇನೆಯ ರಾಜ್ಯ ಮುಖ್ಯಸ್ಥ ಸಂದೀಪ್ ಚೌಧರಿ, ಮಣಿಪುರ ಮುಖ್ಯಸ್ಥ ತೊಂಬಿ ಸಿಂಗ್, ಮಧ್ಯಪ್ರದೇಶದ ಮುಖ್ಯಸ್ಥ ತಾಡೇಶ್ವರ್ ಮಹಾವಾರ್, ಛತ್ತೀಸ್‌ಗಢ ಮುಖ್ಯಸ್ಥ ಧನಂಜಯ್ ಪರಿಹಾರ, ಗುಜರಾತ್ ಮುಖ್ಯಸ್ಥ ಎಸ್.ಆರ್. ಪಾಟೀಲ, ರಾಜಸ್ಥಾನ ಮುಖ್ಯಸ್ಥ ಲಖನ್ ಸಿಂಗ್ ಪವಾರ್, ಹೈದರಾಬಾದ್ ಮುಖ್ಯಸ್ಥ ಮುರಾರಿ ಅಣ್ಣಾ, ಗೋವಾ ಮುಖ್ಯಸ್ಥ ಜಿತೇಶ್ ಕಾಮತ್, ಕರ್ನಾಟಕ ಮುಖ್ಯಸ್ಥ ಕುಮಾರ್ ಎ ಹಕ್ರಿ, ಪಶ್ಚಿಮ ಬಂಗಾಳದ ಮುಖ್ಯಸ್ಥ ಶಾಂತಿ ದತ್ತಾ, ಒಡಿಶಾ ರಾಜ್ಯ ಉಸ್ತುವಾರಿ ಜ್ಯೋತಿಶ್ರೀ ಪ್ರಸನ್ನ ಕುಮಾರ, ತ್ರಿಪುರಾ ರಾಜ್ಯ ಉಸ್ತುವಾರಿ ಬರಿವ್‌ದೇವ್ ನಾಥ್ ಏಕನಾಥ್ ಶಿಂಧೆ ಅವರಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಶಿಂಧೆ, ‘ವಿವಿಧ ರಾಜ್ಯಗಳ ಶಿವಸೇನೆ ಪ್ರಾದೇಶಿಕ ಮುಖ್ಯಸ್ಥರು ತಮ್ಮನ್ನು ಭೇಟಿಯಾಗಿದ್ದು, ಅವರೆಲ್ಲರೂ ನಮಗೆ ಬೆಂಬಲ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಶಿವಸೇನೆ ಪಕ್ಷ ಸಂಘಟನೆ ವಿಸ್ತರಣೆ ಕುರಿತು ವ್ಯಾಪಕ ಚರ್ಚೆ ನಡೆದಿದೆ’ ಎಂದು ಹೇಳಿದ್ದಾರೆ.

ಶಿಂಧೆ ಅವರು ಈ ವರ್ಷದ ಜೂನ್‌ನಲ್ಲಿ ಉದ್ಧವ್‌ ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯ ಎಂದಿದ್ದರು, ಇದರ ಪರಿಣಾಮವಾಗಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರದ ಎಂವಿಎ ಸರ್ಕಾರ ಪತನವಾಯಿತು. ಇದಾದ ಬಳಿಕ ಶಿವಸೇನೆಯ ಬಂಡಾಯ ಶಾಸಕರು ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದ್ದರು. ಹಾಗೂ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಇದಾದ ಬಳಿಕ ಪಕ್ಷಾಂತರ, ವಿಲೀನ ಮತ್ತು ಅನರ್ಹತೆಗೆ ಸಂಬಂಧಿಸಿದ ಹಲವು ಅರ್ಜಿಗಳನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಲಾಯಿತು. ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಐವರು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿದೆ.

ಪ್ರಮುಖ ಸುದ್ದಿ :-   ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ; ದಶಕಗಳ ಸಮಸ್ಯೆಗೆ ತೆರೆ

2.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement