ರಷ್ಯಾ ಅಧ್ಯಕ್ಷ ಪುತಿನ್ ಜೊತೆಗಿನ ಸಭೆಯಲ್ಲಿ ಪಾಕ್ ಪ್ರಧಾನಿಯ ವಿಚಿತ್ರ ಕ್ಷಣ…ನಕ್ಕ ಪುತಿನ್‌ | ವೀಕ್ಷಿಸಿ

ವಿಚಿತ್ರ ವಿದ್ಯಮಾನದಲ್ಲಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಎಷ್ಟೇ ಪ್ರಯತ್ನಪಟ್ಟರೂ ತಮ್ಮ ಇಯರ್‌ ಫೋನ್ ಅನ್ನು ಕಿವಿಗೆ ಹಾಕಿಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಗಿದ್ದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರ ನಗುವಿಗೆ ಕಾರಣವಾಯಿತು. ಉಜ್ಬೇಕಿಸ್ತಾನ್‌ನಲ್ಲಿ ನಡೆದ ಪ್ರಾದೇಶಿಕ ಶೃಂಗಸಭೆಯ ಹಿನ್ನಲೆಯಲ್ಲಿ ನಿನ್ನೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ನಡೆದ ಪಾಕಿಸ್ತಾನದ ಪ್ರಧಾನಿ ಶಾಬಾಜ್‌ ಷರೀಫ್‌ ಅವರ ಸಭೆಯ ಸಂದರ್ಭದಲ್ಲಿ ಇದು ನಡೆದಿದೆ.
ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) 22ನೇ ಶೃಂಗಸಭೆ ನಡೆಯುತ್ತಿರುವ ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ನಡೆದ ಮಾತುಕತೆ ವೇಳೆ ಶರೀಫ್ ಆರಂಭದಲ್ಲಿ, ತನ್ನ ಹೆಡ್‌ಫೋನ್ ಅನ್ನು ಸರಿಪಡಿಸಲು ಸ್ವಲ್ಪ ಸಮಯ ತೆಗೆದುಕೊಂಡರು ಮತ್ತು ಆದರೆ ಅದು ಸರಿಯಾಗದ ಕಾರಣ ಮತ್ತೆ ಮತ್ತೆ ಪ್ರಯತ್ನಿಸಿದರು. ಆದರೆ ಈ ವಿದ್ಯಮಾನ ನೋಡಿ ರಷ್ಯಾ ಅಧ್ಯಕ್ಷ ಪುತಿನ್‌ ನಗುತ್ತ ಕಾಯುತ್ತಿದ್ದಾಗ ಕೊನೆಗೆ ಸಹಾಯ ಮಾಡುವಂತೆ ಅಲ್ಲಿದ್ದ ಅಧಿಕಾರಿಗೆ ಸೂಚಿಸಿದರು.

ಆದರೆ ಅವರು ತಮ್ಮ ಸಭೆಯನ್ನು ಪ್ರಾರಂಭಿಸುತ್ತಿದ್ದಂತೆ ಇಯರ್‌ ಫೋನ್‌ ಮತ್ತೆ ಕಿವಿಯಿಂದ ಬಿತ್ತು. ಇದನ್ನು ನೋಡಿ ರಷ್ಯಾದ ಅಧ್ಯಕ್ಷರಿಗೆ ನಗುವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ಕಾರ್ಯಕರ್ತರು ಈ ಘಟನೆಯನ್ನು ದೇಶಕ್ಕೆ “ಮುಜುಗರ” ಎಂದು ಹೇಳಿದ್ದು, ಮಾತುಕತೆಗೆ ಪೂರ್ವ ತಯಾರಿ ಇರಲಿಲ್ಲ ಎಂದು ಷರೀಫ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳನ್ನು ಎದುರಿಸಬೇಕಾಯಿತು.

ಪ್ರಮುಖ ಸುದ್ದಿ :-   ವೀಡಿಯೊ : ಸೇನಾ ಹೆಲಿಕಾಪ್ಟರ್‌ ಗಳ ಡಿಕ್ಕಿ ; 10 ಮಂದಿ ಸಾವು

https://twitter.com/ShireenMazari1/status/1570395491371974656?ref_src=twsrc%5Etfw%7Ctwcamp%5Etweetembed%7Ctwterm%5E1570395491371974656%7Ctwgr%5Ebe314e79bfc6fc3e90538d969dcaa876d716e9b4%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fvideo-vladimir-putin-laughs-as-pakistan-pm-shehbaz-sharif-struggles-with-headphones-during-meeting-at-sco-summit-3348946

ಕೋವಿಡ್‌ ಸೋಂಕ್ರಾಮಿಕದಿಂದಾಗಿ ಇದು ಎರಡು ವರ್ಷಗಳಲ್ಲಿ ಮೊದಲ SCO ವೈಯಕ್ತಿಕ ಶೃಂಗಸಭೆಯಾಗಿದೆ. ನಿನ್ನೆ ರಾತ್ರಿ ಸಮರಕಂಡ್ ತಲುಪಿದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಂಟು ಸದಸ್ಯ ರಾಷ್ಟ್ರಗಳ ನಾಯಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ಅವರ ಭೇಟಿಯ ಸಂದರ್ಭದಲ್ಲಿ, ಪುಟಿನ್ ಅವರು ಷರೀಫ್ ಅವರಿಗೆ ರಷ್ಯಾವು ಪಾಕಿಸ್ತಾನಕ್ಕೆ ಈಗಾಗಲೇ ಅಗತ್ಯ ಮೂಲಸೌಕರ್ಯಗಳು ಇರುವುದರಿಂದ ಅನಿಲವನ್ನು ಒದಗಿಸಬಹುದು ಎಂದು ಹೇಳಿದ್ದಾರೆ. ರಷ್ಯಾ ಮತ್ತು ಪಾಕಿಸ್ತಾನಗಳು ವಿಶೇಷವಾಗಿ ಇಂಧನ ವಲಯ ಸೇರಿದಂತೆ ಇತರ ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ಚರ್ಚಿಸಿವೆ ಎಂದು ವರದಿಯಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement