ನಮೀಬಿಯಾದಿಂದ ಬಂದ ಚಿರತೆಗಳು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಲಿಡುತ್ತಿದ್ದಂತೆ ಮಧ್ಯಪ್ರದೇಶದ ಈ ಹಳ್ಳಿಗಳಲ್ಲಿ ಭೂಮಿ ಬೆಲೆ ಗಗನಕ್ಕೆ…!

ಭೋಪಾಲ್: ಭಾರತ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾ ಮೂರು ದೇಶಗಳನ್ನು ಒಳಗೊಂಡಿರುವ ಏಶಿಯಾಟಿಕ್‌ ಚಿರತೆಗಳ ಮೊದಲ ಅಂತರ್-ಖಂಡಾಂತರ ಸ್ಥಳಾಂತರ ಯೋಜನೆ ಮೂಲಕ ತಂದಿದ್ದರಿಂದ ಭಾರತವನ್ನು ವಿಶ್ವ ಭೂಪಟದಲ್ಲಿ ಮತ್ತೊಮ್ಮೆ ಬಂದಿದೆ. ನಮೀಬಿಯಾದಿಂದ ಎಂಟು ಚಿರತೆಗಳು ಆಗಮಿಸಿದ್ದು, ಉಳಿದ 12 ಚಿರತೆಗಳನ್ನು ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದಿಂದ ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಚಿರತೆಗಳನ್ನು ಇಂದು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಈ ಚಿರತೆಗಳನ್ನು ಬಿಡುಗಡೆ ಮಾಡಿದ್ದಾರೆ.ಇದು ಈಗಾಗಲೇ ಮಧ್ಯಪ್ರದೇಶದ ಈ ಭಾಗದ ಸ್ಥಳೀಯರಿಗೆ ಕೆಲವು ಒಳ್ಳೆಯ ಸುದ್ದಿಗಳನ್ನು ತಂದಿದೆ.
ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್‌ಪಿ) ಈ ಚಿರತೆಗಳ ಬಹುನಿರೀಕ್ಷಿತ ಆಗಮನವು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಕೃಷಿ ಮತ್ತು ಆರ್ಥಿಕ ಸಮೃದ್ಧಿಯ ಭರವಸೆಗೆ ಕಾರಣವಾಗಿದೆ. ಕುನೊ ರಾಷ್ಟ್ರೀ ಉದ್ಯಾನವನಕ್ಕೆ (ಕೆಎನ್‌ಪಿಗೆ) ಹೊಂದಿಕೊಂಡಿರುವ ಗ್ರಾಮಗಳಲ್ಲಿ ಭೂಮಿಯ ಬೆಲೆ ಹಲವು ಪಟ್ಟು ಹೆಚ್ಚಾಗಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದ ಮೇಲೆ ಹೆಚ್ಚಿದ ಗಮನದಿಂದಾಗಿ ಬೆಲೆಗಳು ಹೆಚ್ಚಾಗಿದ್ದು, ಟಿಕ್ಟೋಲಿ ಮತ್ತು ಮೊರವನ್ ಗ್ರಾಮಗಳು ಕುನೊ ರಾಷ್ಟ್ರೀ ಉದ್ಯಾನವನದ ಮುಖ್ಯ ಗೇಟ್‌ಗೆ ಸಮೀಪದಲ್ಲಿವೆ.

ಇದು ಈಗ ದೊಡ್ಡ ಸುದ್ದಿಯಾಗಿದ್ದರಿಂದ ಹಾಗೂ ಇನ್ನೂ ಹನ್ನೆರಡು ಚಿರತೆಗಳು ದಕ್ಷಿಣ ಆಫ್ರಿಕಾದಿಂದ ಮುಂದಿನ ತಿಂಗಳು ಬರಲಿರುವುದರಿಂದ ಪ್ರವಾಸೋದ್ಯಮ ಬೆಳೆಯುವುದನ್ನು ನಿರೀಕ್ಷಿಸಲಾಗಿದೆ. ಸದ್ಯಕ್ಕೆ ಈ ಚಿರತೆಗಳು ಈ ಪ್ರದೇಶಕ್ಕೆ ಹೊಂದಿಕೊಳ್ಳುವ ವರೆಗೆ ಜನರು ಅದನ್ನು ನೋಡಲು ಸಾಧ್ಯವಿಲ್ಲ. ನಂತರ ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಓಡುವ ಪ್ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಏಶಿಯಾಟಿಕ್‌ ಚಿರತೆಗಳನ್ನು ಜನರು ಅದನ್ನು ನೋಡಬಹುದಾಗಿದ್ದು, ನೂರಾರು ಸಂಖ್ಯೆಯಲ್ಲಿ ಇವುಗಳು ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಭೂಮಿ ಬೆಲೆಗಳು ಗಗನಕ್ಕೇರಿವೆ.
ಟಿಕ್ಟೋಲಿಯು ಬಹುಮಟ್ಟಿಗೆ ಬುಡಕಟ್ಟು ಪ್ರಾಬಲ್ಯದ ಗ್ರಾಮವಾಗಿರುವುದರಿಂದ, ಗಿರಿಜನೇತರರಿಗೆ ಭೂಮಿಯನ್ನು ಮಾರಾಟ ಮಾಡುವುದನ್ನು ಕಾನೂನು ನಿಷೇಧಿಸುತ್ತದೆ, ಹೀಗಾಗಿ ಹೋಟೆಲ್ ಮಾಲೀಕರು ಮತ್ತು ರೆಸಾರ್ಟ್ ಮಾಲೀಕರು ಸುಮಾರು 200 ಕುಟುಂಬಗಳಿರುವ (ಹೆಚ್ಚಾಗಿ ಬುಡಕಟ್ಟು ಜನಾಂಗದವರಲ್ಲದವರು) ಮೊರವನ್ ಗ್ರಾಮದ ಮೇಲೆ ತೀವ್ರ ಆಸಕ್ತಿ ತೋರಿಸುತ್ತಿದ್ದಾರೆ.
newindianexpress.com ನಲ್ಲಿನ ವರದಿಯ ಪ್ರಕಾರ, ಪಕ್ಕದ ಶಿವಪುರಿ ಜಿಲ್ಲೆಯ ಪ್ರಾಪರ್ಟಿ ಡೀಲರ್‌ಗಳಿಗೂ ಶಿವಪುರಿ-ಶಿಯೋಪುರ್ ರಸ್ತೆ ಮತ್ತು ಶಿವಪುರಿ-ಪೋಹ್ರಿ ರಸ್ತೆಯಲ್ಲಿ ಭೂಮಿ ದರದ ಬಗ್ಗೆ ಉತ್ಸುಕರಾಗಿರುವ ದೊಡ್ಡ ಉದ್ಯಮಿಗಳಿಂದ ಕರೆಗಳು ಬರುತ್ತಿವೆಯಂತೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

ವರದಿಯ ಪ್ರಕಾರ, ಮಧ್ಯಪ್ರದೇಶ ರಾಜ್ಯ ವಿಧಾಸಭೆಯಲ್ಲಿ ಸಲ್ಲಿಸಿದ ಸರ್ಕಾರದ ಅಂಕಿಅಂಶಗಳ ಪ್ರಕಾರ, ಅಪೌಷ್ಟಿಕತೆಯ ವಿಷಯದಲ್ಲಿ ಭಾರತದಲ್ಲಿ ಹೆಚ್ಚು ಪೀಡಿತ ಜಿಲ್ಲೆಗಳಲ್ಲಿ ಶಿಯೋಪುರ್ ಪ್ರದೇಶವೂ ಸೇರಿದೆ. ಇದರಲ್ಲಿ 19,243 ತೀವ್ರ ಅಪೌಷ್ಟಿಕ ಮಕ್ಕಳಿದ್ದು, ಕಾರಹಾಳದಲ್ಲಿ 18,944, ಶೀಪುರಕಲನ್‌ನಲ್ಲಿ 11,970, ಶಿಯೋಪುರ ನಗರದಲ್ಲಿ 9,297, ವಿಜಯಪುರ 1ರಲ್ಲಿ 14,710, ವಿಜಯಪುರ 2ರಲ್ಲಿ 15,712 ತೀವ್ರ ಅಪೌಷ್ಟಿಕ ಮಕ್ಕಳಿದ್ದಾರೆ.
ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆಯಾದ ನಂತರ ನಂಬಿಯಾದಿಂದ ಎಂಟು ಚಿರತೆಗಳು ಭಾರತದಲ್ಲಿ ತಮ್ಮ ಹೊಸ ಮನೆಗಳನ್ನು ಕಂಡುಕೊಂಡಿವೆ.
ಚಿರತೆಗಳನ್ನು – ಐದು ಹೆಣ್ಣು ಮತ್ತು ಮೂರು ಗಂಡು – ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ನಿಂದ ದೇಶದಲ್ಲಿ ಐತಿಹಾಸಿಕ ಚಿರತೆಯ ಮರುಪರಿಚಯ ಕಾರ್ಯಕ್ರಮದ ಭಾಗವಾಗಿ ಕರೆತರಲಾಯಿತು. ದೊಡ್ಡ ಬೆಕ್ಕುಗಳು ವಿಶೇಷವಾಗಿ ಮಾರ್ಪಡಿಸಿದ B747 ಜಂಬೋ ಜೆಟ್ ಮೂಲಕ 8,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಿ ಶನಿವಾರ (ಸೆಪ್ಟೆಂಬರ್‌ 17) ಬೆಳಿಗ್ಗೆ ಗ್ವಾಲಿಯರ್‌ನಲ್ಲಿರುವ ಭಾರತೀಯ ವಾಯುಪಡೆ ನಿಲ್ದಾಣಕ್ಕೆ ಬಂದವು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement