ಚಂಡೀಗಡ ವಿಶ್ವವಿದ್ಯಾನಿಲಯದ ವೀಡಿಯೊ ವಿವಾದ : ಇಬ್ಬರ ಬಂಧನ, ಮುಂದುವರಿದ ಪ್ರತಿಭಟನೆಗಳು, ಕ್ಷಮೆಯಾಚಿಸುವಂತೆ ವಿದ್ಯಾರ್ಥಿಗಳು ಒತ್ತಾಯ

ಚಂಡೀಗಡ: ಚಂಡೀಗಡ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಿಂದ ಆಕ್ಷೇಪಾರ್ಹ ವೀಡಿಯೊಗಳ ‘ಸೋರಿಕೆ’ ವಿವಾದ ಭುಗಿಲೆದ್ದಿದ್ದು, ಪಂಜಾಬ್ ಪೊಲೀಸರು ಭಾನುವಾರ ಶಿಮ್ಲಾ ನಿವಾಸಿಯಾದ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ. ಹಲವಾರು ಮಹಿಳಾ ಹಾಸ್ಟೆಲ್ ವಿದ್ಯಾರ್ಥಿನಿಯರ ‘ಖಾಸಗಿ’ ಮತ್ತು ‘ಆಕ್ಷೇಪಾರ್ಹ’ ವೀಡಿಯೊಗಳನ್ನು ಅಂತರ್ಜಾಲದಲ್ಲಿ ಸೋರಿಕೆ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿ ಶನಿವಾರ  ವಿವಿ ಆವರಣದಲ್ಲಿ  ಬೃಹತ್ ಪ್ರತಿಭಟನೆಗಳನ್ನು ನಡೆಸಿದರು.
ಇತ್ತೀಚಿನ ಬೆಳವಣಿಗೆಯಲ್ಲಿ, ಹಿಮಾಚಲ ಪ್ರದೇಶದ ಶಿಮ್ಲಾದ ಧಲ್ಲಿ ಪೊಲೀಸ್ ಠಾಣೆಯಿಂದ 31 ವರ್ಷದ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯವರೆಗೆ, ಅಧಿಕಾರಿಗಳು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯೊಗಳ ತಯಾರಿಕೆ ಮತ್ತು ಪ್ರಸಾರಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.
ಹಾಸ್ಟೆಲ್‌ನಲ್ಲಿ ಸುಮಾರು 60 ಹುಡುಗಿಯರು ಸ್ನಾನ ಮಾಡುತ್ತಿರುವ ವಿಡಿಯೋಗಳು ಸೋರಿಕೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಮತ್ತೊಂದೆಡೆ, ವಿಶ್ವವಿದ್ಯಾನಿಲಯವು ಒಂದು ವೀಡಿಯೊವನ್ನು ಮಾತ್ರ ಹಂಚಿಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿದೆ. ಯುವತಿಯೇ ವಿಡಿಯೋ ಮಾಡಿ ಹಿಮಾಚಲ ಪ್ರದೇಶದ ತನ್ನ ಸ್ನೇಹಿತೆಯೊಂದಿಗೆ ಹಂಚಿಕೊಂಡಿದ್ದಾಳೆ ಎಂದು ಹೇಳಿದೆ.

ವಿಶ್ವವಿದ್ಯಾನಿಲಯವು ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿರುವ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಒಂದೆಡೆ ವಿಶ್ವವಿದ್ಯಾನಿಲಯವು ಯಾವುದೇ ಆತ್ಮಹತ್ಯೆಯ ಪ್ರಯತ್ನ ನಡೆದಿಲ್ಲ ಮತ್ತು ವಿದ್ಯಾರ್ಥಿಗಳೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದೆ. ಮತ್ತೊಂದೆಡೆ, ವಿಶ್ವವಿದ್ಯಾಲಯವು ‘ಸತ್ಯ’ವನ್ನು ಮರೆಮಾಚುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಬಹಿರಂಗವಾಗಿ ನಡೆದರೆ ಮಾತ್ರ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಮೊಹಾಲಿಯ ಚಂಡೀಗಢ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ಹಲವಾರು ಮಹಿಳಾ ಹಾಸ್ಟೆಲ್ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯೊಗಳನ್ನು ತಯಾರಿಸಿ ಪ್ರಸಾರ ಮಾಡುತ್ತಿದ್ದಾರೆ ಎಂಬ ಆರೋಪದ ನಂತರ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬಾಲಕಿ ತನ್ನ ಮೊಬೈಲ್ ಬಳಸಿ ವಿದ್ಯಾರ್ಥಿಗಳು ಸ್ನಾನ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾಂಪಸ್‌ನಲ್ಲಿ ಯಾವುದೇ ವಿದ್ಯಾರ್ಥಿಯ ಸಾವಿನ ಬಗ್ಗೆ ವದಂತಿಗಳನ್ನು ತಳ್ಳಿಹಾಕಿದ ವಿಶ್ವವಿದ್ಯಾನಿಲಯವು ಈ ವೀಡಿಯೊವನ್ನು ವಿದ್ಯಾರ್ಥಿನಿಯೊಬ್ಬರು ಸೋರಿಕೆ ಮಾಡಿದ್ದಾರೆ ಎಂದು ಹೇಳಿದರು, ಅವರು ವೀಡಿಯೊವನ್ನು ಸ್ವತಃ ತನ್ನ ಸ್ನೇಹಿತರೊಬ್ಬರಿಗೆ ಕಳುಹಿಸಿದ್ದಾರೆ. ಕ್ಯಾಂಪಸ್‌ನಲ್ಲಿ ಯಾವುದೇ ಆತ್ಮಹತ್ಯೆ ಅಥವಾ ಸಾವು ಸಂಭವಿಸಿಲ್ಲ ಎಂದು ಚಂಡೀಗಢ ವಿಶ್ವವಿದ್ಯಾಲಯದ ಪರ ಕುಲಪತಿ ಹೇಳಿಕೆ ನೀಡಿದ್ದಾರೆ.
ಯಾವುದೇ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಪ್ರಾಥಮಿಕ ತನಿಖೆಯಿಂದ ಆರೋಪಿ ಬಾಲಕಿ ತನ್ನ ಗೆಳೆಯನಿಗೆ ತನ್ನದೇ ಚಿತ್ರ/ವಿಡಿಯೋಗಳನ್ನು ಕಳುಹಿಸಿದ್ದಾಳೆ ಎಂದು ತಿಳಿದುಬಂದಿದೆ. ಬೇರೆ ಯಾವುದೇ ವಸ್ತು ಪತ್ತೆಯಾಗಿಲ್ಲ. ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ನಾನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮನವಿ ಮಾಡುತ್ತೇನೆ ಎಂದು ಕುಲಪತಿ ಹೇಳಿದರು.
ಸೆಪ್ಟೆಂಬರ್ 19 ಮತ್ತು 20 ರಂದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಯಾವುದೇ ಪಾಠ-ಪ್ರವಚನ ಇಲ್ಲ ಎಂದು ಘೋಷಿಸಲಾಗಿದೆ. ವಿಶ್ವ ವಿದ್ಯಾಲಯದ ಮುಚ್ಚುವಿಕೆ ಸಮರ್ಥನೆಯಾಗಿ ‘ಅನಿವಾರ್ಯ ಕಾರಣಗಳು’ ಎಂದು ಫ್ಲ್ಯಾಗ್ ಮಾಡಿದೆ. ಇತರ ಅಗತ್ಯ ಸೇವೆಗಳನ್ನು ಸಹ ಎಂದಿನಂತೆ ನಿರ್ವಹಿಸಲಾಗುವುದು” ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಹೇಳಿದ್ದಾರೆ.

ಚಂಡೀಗಢ ವಿಶ್ವವಿದ್ಯಾನಿಲಯದ ಡಿಎಸ್‌ಡಬ್ಲ್ಯೂ (ವಿದ್ಯಾರ್ಥಿ ಕಲ್ಯಾಣ ಇಲಾಖೆ) ವಿದ್ಯಾರ್ಥಿಗಳಿಗೆ ಸಮಿತಿ ರಚಿಸಲು ವಿನಂತಿಸಿದೆ ಮತ್ತು ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ಹೇಳಿದೆ. ಆದರೆ ವಿದ್ಯಾರ್ಥಿಗಳು ಸಾರ್ವಜನಿಕವಾಗಿ ಬಹಿರಂಗವಾಗಿ ಚರ್ಚೆ ನಡೆಸಿದರೆ ಮಾತ್ರ ಉಪಕುಲಪತಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.
ಈ ಮಧ್ಯೆ ಶಿಮ್ಲಾ ನಿವಾಸಿ ಎಂದು ಗುರುತಿಸಲಾದ ಆರೋಪಿ ಹುಡುಗಿಯ ಸ್ನೇಹಿತನನ್ನು ಬಂಧಿಸಲಾಗಿದೆ. ಮೂಲಗಳ ಪ್ರಕಾರ, ರೋಹ್ರು (ಶಿಮ್ಲಾ) ದ ಹುಡುಗಿ ಕ್ಯಾಂಪಸ್‌ ಹಾಸ್ಟೆಲ್‌ನಲ್ಲಿ ಇತರ ಹುಡುಗಿಯರ ವೀಡಿಯೊಗಳನ್ನು ಮಾಡಿದ್ದಾಳೆ ಮತ್ತು ನಂತರ ಅವುಗಳನ್ನು ರೋಹ್ರುದಲ್ಲಿ ಸೌಂದರ್ಯವರ್ಧಕ ಅಂಗಡಿಯನ್ನು ನಡೆಸುತ್ತಿರುವ ತನ್ನ ಸ್ನೇಹಿತ ಸಾಹಿಲ್‌ನೊಂದಿಗೆ ಹಂಚಿಕೊಂಡಿದ್ದಾಳೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

ಸೋರಿಕೆ ಮತ್ತು ಎಂಎಂಎಸ್ ಮಾಡಿದ ಆರೋಪ ಹೊತ್ತಿರುವ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ವಿದ್ಯಾರ್ಥಿನಿಯನ್ನು ಮೊಹಾಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಶ್ವವಿದ್ಯಾನಿಲಯದಿಂದ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಗಂಟೆಗಳ ನಂತರ, ಎಡಿಜಿಪಿ ಸಮುದಾಯ ವ್ಯವಹಾರಗಳ ವಿಭಾಗದ ಗುರುಪ್ರೀತ್ ಡಿಯೋ, “ಶಿಮ್ಲಾದ ಒಬ್ಬ ವ್ಯಕ್ತಿ ಆರೋಪಿ ಹುಡುಗಿಗೆ ಪರಿಚಿತನಾಗಿದ್ದಾನೆ. ಅವನು ಸಿಕ್ಕಿಬಿದ್ದ ನಂತರವೇ ಹೆಚ್ಚಿನ ವಿವರಗಳು ತಿಳಿಯುತ್ತವೆ. ಆಕೆಯ ಮೊಬೈಲ್ ಫೋನ್‌ನ ಫೋರೆನ್ಸಿಕ್ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಯಾವುದೇ ಆತ್ಮಹತ್ಯೆ ಪ್ರಯತ್ನ ಅಥವಾ ಸಾವು ಸಂಭವಿಸಿಲ್ಲ. ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾದ ಒಬ್ಬ ವಿದ್ಯಾರ್ಥಿನಿ ಆತಂಕದಿಂದ ಬಳಲುತ್ತಿದ್ದಳು ಮತ್ತು ನಮ್ಮ ತಂಡವು ಅವಳೊಂದಿಗೆ ಸಂಪರ್ಕದಲ್ಲಿದೆ” ಎಂದು ಮೊಹಾಲಿ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ವಿವೇಕ್ ಸೋನಿ ಹೇಳಿದ್ದಾರೆ.
ಎಂಎಂಎಸ್ ಕ್ಲಿಪ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂಬ ವರದಿಗಳನ್ನು ಪೊಲೀಸರು ಅಲ್ಲಗೆಳೆದಿದ್ದಾರೆ ಮತ್ತು ಆರೋಪಿಯ ಒಂದು ವೀಡಿಯೊ ಮಾತ್ರ ಇದೆ ಎಂದು ಸಮರ್ಥಿಸಿಕೊಂಡರು. ಇಲ್ಲಿಯವರೆಗೆ, ಯಾವುದೇ ಹುಡುಗಿಯ ಅಂತಹ ವೀಡಿಯೊ ನಮ್ಮ ಗಮನಕ್ಕೆ ಬಂದಿಲ್ಲ. ಇದು ಹೆಚ್ಚು ವದಂತಿಯಂತೆ ತೋರುತ್ತದೆ ಎಂದು ಮೊಹಾಲಿ ಎಸ್‌ಎಸ್‌ಪಿ ವಿವೇಕ್ ಸೋನಿ ತಿಳಿಸಿದ್ದಾರೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement