ಪಾನಮತ್ತರಾಗಿದ್ದ ಕಾರಣ ಫ್ರಾಂಕ್‌ಫರ್ಟ್‌ನಲ್ಲಿ ಪಂಜಾಬ್‌ ಸಿಎಂರನ್ನು ವಿಮಾನದಿಂದ ಕೆಳಗಿಳಿಸಲಾಯ್ತು : ಅಕಾಲಿದಳ, ಕಾಂಗ್ರೆಸ್‌ ಆರೋಪ, ನಿರಾಕರಿಸಿದ ಆಪ್‌

ಚಂಡೀಗಡ: ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಹಿರಿಯ ನಾಯಕರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಜರ್ಮನಿಯ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಪಾನಮತ್ತರಾಗಿದ್ದ ಕಾರಣ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು ಎಂದು ಆರೋಪಿಸಿದ್ದು, “ಅವರು ಪಂಜಾಬಿಗಳ ಮಾನ ಹರಾಜು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಟ್ವಿಟರ್‌ನಲ್ಲಿ, SAD ನಾಯಕ ಸುಖ್‌ಬೀರ್ ಸಿಂಗ್ ಬಾದಲ್, “ಸಹ-ಪ್ರಯಾಣಿಕರನ್ನು ಉಲ್ಲೇಖಿಸಿ ಪಂಜಾಬ್‌ ಮುಖ್ಯಮಂತ್ರಿ ಮಾನ್‌ ಪಾನಮತ್ತರಾಗಿದ್ದ ಕಾರಣ ಅವರನ್ನು ಲುಫ್ತಾನ್ಸಾ ವಿಮಾನದಿಂದ ಕೆಳಗಿಳಿಸಲಾಯಿತು, ಏಕೆಂದರೆ ಅವರಿಗೆ ನಡೆಯಲು ಸಾಧ್ಯವಾಗಲಿಲ್ಲ. ಮತ್ತು ಇದು 4 ಗಂಟೆಗಳ ವಿಮಾನ ವಿಳಂಬಕ್ಕೆ ಕಾರಣವಾಯಿತು. ಅವರು ಎಎಪಿಯ ರಾಷ್ಟ್ರೀಯ ಸಮಾವೇಶವನ್ನು ತಪ್ಪಿಸಿಕೊಂಡರು. ಈ ವರದಿಗಳು ಜಗತ್ತಿನಾದ್ಯಂತ ಪಂಜಾಬಿಗಳನ್ನು ನಾಚಿಕೆಗೀಡು ಮಾಡಿದೆ. ಆಘಾತಕಾರಿ ಸಂಗತಿಯೆಂದರೆ, ತಮ್ಮ ಮುಖ್ಯಮಂತ್ರಿಯನ್ನು ಒಳಗೊಂಡಿರುವ ಈ ವರದಿಗಳ ಬಗ್ಗೆ ಪಂಜಾಬ್‌ ಸರ್ಕಾರ ಸರ್ಕಾರ ಮೌನವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪರತಾಪ್ ಸಿಂಗ್ ಬಾದಲ್ ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಈ ವರದಿಗಳು ಸರಿಯಾಗಿದ್ದರೆ, ಅದು ಇಡೀ ರಾಷ್ಟ್ರಕ್ಕೆ ಮುಜುಗರವನ್ನುಂಟು ಮಾಡುತ್ತದೆ ಎಂದು ಅವರು ಹೇಳಿದರು.
ಆಮ್ ಆದ್ಮಿ ಪಕ್ಷ (ಎಎಪಿ) ಮಾನ್ ವಿರುದ್ಧದ ಆರೋಪಗಳನ್ನು “ಆಧಾರರಹಿತ” ಎಂದು ತಳ್ಳಿಹಾಕಿದೆ, ಮುಖ್ಯ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್ ಅವರು ನಿಗದಿತ ಸಮಯಕ್ಕೆ ಪಂಜಾಬ್ ಮುಖ್ಯಮಂತ್ರಿ ನವದೆಹಲಿಗೆ ಮರಳಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅವರು ತಮ್ಮ ವೇಳಾಪಟ್ಟಿಯಂತೆ ಹಿಂದಿರುಗಿದ್ದಾರೆ. ಅವರು ಸೆಪ್ಟೆಂಬರ್ 18 ರಂದು ಜರ್ಮನಿಯಿಂದ ಹಿಂದಿರುಗುವ ವಿಮಾನ ಏರಿದ್ದಾರೆ. ಅವರು ಸೆಪ್ಟೆಂಬರ್ 19 ರಂದು ನವದೆಹಲಿಗೆ ಬಂದಿಳಿಯಬೇಕಿತ್ತು. ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳು ಪ್ರಚಾರ” ಎಂದು ಕಾಂಗ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

ಏತನ್ಮಧ್ಯೆ, ಲುಫ್ಥಾನ್ಸ ಗ್ರೂಪ್ ಹೇಳಿಕೆಯಲ್ಲಿ ” ಒಳಬರುವ ವಿಮಾನ ವಿಳಂಬವಾಗಿದ್ದಕ್ಕೆ ಮತ್ತು ವಿಮಾನ ಬದಲಾವಣೆಯಿಂದಾಗಿ” ವಿಮಾನವು ತಡವಾಗಿ ಹೊರಟಿದೆ ಎಂದು ಹೇಳಿದೆ.
ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ನಮ್ಮ ವಿಮಾನವು ಒಳಬರುವ ವಿಮಾನ ವಿಳಂಬವಾದ ಕಾರಣ ಮತ್ತು ವಿಮಾನ ಬದಲಾವಣೆಯಿಂದಾಗಿ ಯೋಜಿಸಿದ್ದಕ್ಕಿಂತ ತಡವಾಗಿ ಹೊರಟಿತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಡೇಟಾ ರಕ್ಷಣೆಯ ಕಾರಣಗಳಿಗಾಗಿ ನಾವು ವೈಯಕ್ತಿಕವಾಗಿ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಒದಗಿಸುವುದಿಲ್ಲ” ಎಂದು ಅದು ತಿಳಿಸಿದೆ.
ಪಂಜಾಬ್‌ ಮುಖ್ಯಮಂತ್ರಿ ಮಾನ್‌ ಅವರು ಸೋಮವಾರ ಜರ್ಮನಿಯಿಂದ ತನ್ನ ಎಂಟು ದಿನಗಳ ಪ್ರವಾಸದಿಂದ ಮರಳಿದರು, ಅವರು ಹೂಡಿಕೆಗಳನ್ನು ಆಕರ್ಷಿಸಲು ಜರ್ಮನಿಗೆ ಹೋಗಿದ್ದರು.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement