ಅಂಕೋಲಾ: ತೋಟದಲ್ಲಿ ಮೊಟ್ಟೆ ಇಟ್ಟಿದ್ದ ನವಿಲು ನುಂಗಿ ಬಂಧಿಯಾದ ಹೆಬ್ಬಾವು | ವೀಕ್ಷಿಸಿ

ಅಂಕೋಲಾ : ಬೃಹತ್ ಹೆಬ್ಬಾವೊಂದು ಪ್ರತಕ್ಷವಾಗಿ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಜಮಗೋಡ್‌ನಲ್ಲಿ ಎಂಬಲ್ಲಿ ನಡೆದಿದೆ.
ಜಮಗೋಡದ ವಕೀಲ ಬೀರಣ್ಣ ನಾಯಕ ಎನ್ನುವವರ ಮನೆಯ ತೋಟದಲ್ಲಿ ನವಿಲು ಮೊಟ್ಟೆ ಇಟ್ಟು ಅದರಲ್ಲಿ ಕುಳಿತಿತ್ತು. ಅದನ್ನು ಕಂಡಿದ್ದ ಸುಮಾರು 14 ಅಡಿ ಉದ್ದದ ಹೆಬ್ಬಾವು, ನವಿಲನ್ನು ಬೇಟೆಯಾಡಿ ನುಂಗಿ ಹಾಕಿದೆ. ಅಷ್ಟೇ ಅಲ್ಲ, ತೋಟದ ಪೊದೆಯಲ್ಲಿ ಸೇರಿಕೊಂಡಿತ್ತು.

ಇದನ್ನು ನೋಡಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಕಂಗಾಲಾಗಿದ್ದರು. ಅವರು ತಕ್ಷಣವೇ ತೋಟದ ಮಾಲೀಕರಿಗೆ ಹೆಬ್ಬಾವು ತೋಟಕ್ಕೆ ಬಂದಿರುವ ಈ ಮಾಹಿತಿ ನೀಡಿದ್ದಾರೆ. ಮಾಲೀಕರು ಹಾವುಗಳ ರಕ್ಷಕ ಮಹೇಶ ನಾಯ್ಕ ಅವರನ್ನು ಸಂಪರ್ಕಿಸಿದರು. ನಂತರ ಮಹೇಶ ನಾಯ್ಕ ಅವರು ಸ್ಥಳಕ್ಕೆ ಸ್ಥಳಕ್ಕೆ ಆಗಮಿಸಿದರು. ಸುಮಾರು ಒಂದು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸೆರೆ ಹಿಡಿಯಲಾಯಿತು. ಹೆಬ್ಬಾವನ್ನು ರಕ್ಷಣೆ ಮಾಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಹೆಬ್ಬಾವನ್ನ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಬಹಳ ಇರುವುದರಿಂದ ಕೆಲವೊಮ್ಮೆ ಹೆಬ್ಬಾವುಗಳು ಆಹಾರ ಅರಸಿ ಜನ ವಸತಿ ಪ್ರದೇಶಗಳತ್ತಲೂ ಬರುವುದುಂಟು. ಅಲ್ಲದೆ ಭಾರಿ ಮಳೆಬಂದಾಗ ಪ್ರವಾಹದಲ್ಲಿ ತೇಲಿಬಂದು, ನೀರಿನ ಸೆಳೆತ ಕಡಿಮೆ ಇದ್ದಲ್ಲಿ ಅವುಗಳು ನದಿ ದಡ ಸೇರುತ್ತವೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement