ಓರ್ಮ್ಯಾಕ್ಸ್ ಮೀಡಿಯಾದಿಂದ ದೇಶದ ಹೆಚ್ಚು ಜನಪ್ರಿಯ ನಟರ ಪಟ್ಟಿ ಬಿಡುಗಡೆ: ನಟರಲ್ಲಿ ತಮಿಳು ನಟ ವಿಜಯ ನಂ.1, ನಟಿಯರಲ್ಲಿ ಸಮಂತಾ ನಂ.1; ಟಾಪ್-‌10 ನಟ-ನಟಿಯರ ಪಟ್ಟಿ ಇಲ್ಲಿದೆ…

ನವದೆಹಲಿ: ಇತ್ತೀಚೆಗಷ್ಟೇ ಓರ್ಮ್ಯಾಕ್ಸ್ ಮೀಡಿಯಾ (Ormax Media) ‘ಮೋಸ್ಟ್ ಪಾಪ್ಯುಲರ್ ಸ್ಟಾರ್ಸ್’ (ಅಖಿಲ ಭಾರತ) ಸಮೀಕ್ಷೆ ಮಾಡಿದ್ದು, ಅದರಲ್ಲಿ ಟಾಪ್‌-10 ನಟರ ಹೆಸರನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ ಜನಪ್ರುಯತೆಯ ಟಾಪ್‌-10ರಲ್ಲಿ ಅಕ್ಷಯಕುಮಾರ ಹೊರತುಪಡಿಸಿ ಬೇರೆ ಯಾವುದೇ ನಟರಿಲ್ಲ. ಉಳಿದೆಲ್ಲ ನಟರೂ ದಕಿಷಣ ಭಾರತದವರೇ ಆಗಿದ್ದಾರೆ.
ತಮಿಳು ನಟ ವಿಜಯ್ ದೇಶದ ಅತ್ಯಂತ ಜನಪ್ರಿಯ ನಟರಾಗಿ ಹೊರಹೊಮ್ಮಿದ್ದಾರೆ. ಅವರ ನಂತರ ಜನಪ್ರಿಯತೆಯಲ್ಲಿ ಪ್ರಭಾಸ್ ಎರಡನೇ ಸ್ಥಾನದಲ್ಲಿದ್ದಾರೆ. ಆರ್‌ಆರ್‌ಆರ್‌ ಸಿನೆಮಾ ಖ್ಯಾತಿಯ ತೆಲುಗಿನ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್‌ ಮೂರನೇ ಸ್ಥಾನದಲ್ಲಿದ್ದಾರೆ. ಪುಷ್ಪಾ ಖ್ಯಾತಿಯ ನಟ ಅಲ್ಲು ಅರ್ಜುನ್ ನಾಲ್ಕನೇ ಸ್ಥಾನದಲ್ಲಿದ್ದರೆ ಮತ್ತು ಕೆಜಿಎಫ್ ಸ್ಟಾರ್ ಕನ್ನಡದ ನಟ ಯಶ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಏಕೈಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಾತ್ರ, ನಂತರದ ಸ್ಥಾನದಲ್ಲಿ ತೆಲುಗು ನಟರಾದ ರಾಮ್ ಚರಣ್, ಮಹೇಶ್ ಬಾಬು ಇದ್ದಾರೆ, ಒಂಬತ್ತು ಮತ್ತು ಹತ್ತನೇ ಸ್ಥಾನದಲ್ಲಿ ಕ್ರಮವಾಗಿ ಸೂರ್ಯ ಮತ್ತು ಅಜಿತ್ ಕುಮಾರ್ ಇದ್ದಾರೆ.

ಓರ್ಮ್ಯಾಕ್ಸ್ ಮೀಡಿಯಾ ಸಮೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ‘ಮೋಸ್ಟ್ ಪಾಪ್ಯುಲರ್ ಫೀಮೇಲ್ ಸ್ಟಾರ್ಸ್’ (ಅಖಿಲ ಭಾರತ) ಟಾಪ್‌-10  ಪಟ್ಟಿಯಲ್ಲಿ ದಕ್ಷಿಣ ಭಾರತದ ಖ್ಯಾತ ಸ್ಟಾರ್‌ ನಟಿ ಸಮಂತಾ ರುತ್ ಪ್ರಭು ಮೊದಲ ಸ್ಥಾನದಲ್ಲಿದ್ದಾರೆ. ನಂತರ ಸ್ಥಾನದಲ್ಲಿ ಬಾಲಿವುಡ್‌ನ ಖ್ಯಾತ ತಾರಾ ನಟಿ ಆಲಿಯಾ ಭಟ್ ಇದ್ದಾರೆ.

ನಂತರದಲ್ಲಿ ದಕ್ಷಿಣ ಭಾರತದ ನಟಿ ನಯನತಾರಾ ಮೂರನೇ ಸ್ಥಾನದಲ್ಲಿದ್ದಾರೆ. ನಂತರದಲ್ಲಿ ಕ್ರಮವಾಗಿ ಕಾಜಲ್ ಅಗರ್ವಾಲ್, ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ, ಕತ್ರಿನಾ ಕೈಫ್, ಪೂಜಾ ಹೆಗ್ಡೆ ಹಾಗೂ ಅನುಷ್ಕಾ ಶೆಟ್ಟಿ ಇದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ದಸರಾ ಹಬ್ಬಕ್ಕೆ ರೈಲ್ವೆ ನೌಕರರಿಗೆ ಬೋನಸ್: 78 ದಿನಗಳ ವೇತನಕ್ಕೆ ಕೇಂದ್ರ ಸರ್ಕಾರ ಅನುಮೋದನೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement