ರೆಸಾರ್ಟ್‌ ಅತಿಥಿಗಳಿಗೆ ʼವಿಶೇಷ ಸೇವೆʼಗೆ ಬಲವಂತ ಮಾಡುತ್ತಿದ್ದರು”: ಕೊಲೆಯಾದ ಉತ್ತರಾಖಂಡ ಸ್ವಾಗತಕಾರಿಣಿಯ ವಾಟ್ಸಾಪ್ ಸಂದೇಶ

ಋಷಿಕೇಶ: ಹತ್ಯೆಗೀಡಾದ ಉತ್ತರಾಖಂಡ ಮಹಿಳೆಯಿಂದ ಆಕೆಯ ಸ್ನೇಹಿತೆಗೆ ಕಳುಹಿಸಿದ ವಾಟ್ಸಾಪ್ ಸಂದೇಶಗಳು ಬಂಧಿತ ಆರೋಪಿಗಳು 19  ವರ್ಷದ ಹುಡುಗಿಯನ್ನು ವೇಶ್ಯಾವಾಟಿಕೆಗೆ ಬಲವಂತ ಮಾಡುತ್ತಿದ್ದರು ಎಂಬ ಆರೋಪವನ್ನು ದೃಢಪಡಿಸುವಂತಿದೆ.
“ಅವರು ನನ್ನನ್ನು ವೇಶ್ಯೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತನ್ನ ಸ್ನೇಹಿತರಿಗೆ ಕಳುಹಿಸಿದ ಸಂದೇಶ ಹೇಳುತ್ತದೆ ಎಂದು ವರದಿಯಾಗಿದೆ, ಈಗ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಹಿರಿಯ ಬಿಜೆಪಿ ನಾಯಕನ ಮಗನ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿ (receptionist) ಆಗಿ ಕೆಲಸ ಮಾಡಿದ ಅನುಭವದ ಬಗ್ಗೆ ಹೇಳಿದ್ದಾಳೆ ಎಂದು ವರದಿಗಳು ತಿಳಿಸಿವೆ.
ಸಂತ್ರಸ್ತೆಯ ಪಠ್ಯ ಸಂದೇಶಗಳ ಸ್ಕ್ರೀನ್‌ಶಾಟ್‌ಗಳು ಹರಿದಾಡುತ್ತಿವೆ, ಅಲ್ಲಿ ಅವಳನ್ನು ಗ್ರಾಹಕರಿಗೆ ₹ 10,000 ರೂ.ಗಳಿಗೆ “ವಿಶೇಷ ಸೇವೆಗಳನ್ನು” ಒದಗಿಸಲು ಹೇಗೆ ಒತ್ತಾಯಿಸಲಾಯಿತು ಎಂಬುದನ್ನು ಈ ಸಂದೇಶಗಳು ವಿವರಿಸುತ್ತವೆ. ಪ್ರಾಥಮಿಕ ತನಿಖೆಗಳು ಈ ಸಂದೇಶಗಳು ಮೃತ ಸ್ವಾಗತಕಾರಿಣಿಯ ಮೊಬೈಲ್‌ನಿಂದ ಬಂದಿದ್ದು ಎಂದು ಸೂಚಿಸುತ್ತವೆ ಎಂದು ಪೊಲೀಸರು ಹೇಳಿದ್ದಾರೆ, ಆದರೆ ಹೆಚ್ಚು ನಿಖರ ಫೋರೆನ್ಸಿಕ್ ತನಿಖೆಯನ್ನು ಸಹ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರೆಸಾರ್ಟ್‌ನಲ್ಲಿ ವ್ಯಕ್ತಿಯೊಬ್ಬ ಅನುಚಿತವಾಗಿ ಸ್ಪರ್ಶಿಸಿದ್ದಾನೆ, ಆದರೆ ಆತ ಕುಡಿದಿದ್ದರಿಂದ ಏನನ್ನೂ ಮಾಡದಂತೆ ಆರೋಪಿಗಳು ಕೇಳಿಕೊಂಡರು ಎಂದು  ಸಂತ್ರಸ್ತೆ ತನ್ನ ಸ್ನೇಹಿತೆಗೆ ಹೇಳಿದ್ದಾಳೆ.

ಸಂತ್ರಸ್ತ ಯುವತಿಯಿಂದ ರೆಸಾರ್ಟ್ ಉದ್ಯೋಗಿಯೊಬ್ಬರಿಗೆ ಕರೆ ಮಾಡಿದ ಧ್ವನಿಮುದ್ರಣದ ಆಡಿಯೋ ಕ್ಲಿಪ್ ಕೂಡ ವೈರಲ್ ಆಗಿದೆ. ಅವಳು ಫೋನ್‌ನಲ್ಲಿ ಅಳುವುದು ಮತ್ತು ತನ್ನ ಬ್ಯಾಗ್ ಅನ್ನು ಮೇಲಕ್ಕೆ ತರಲು ಇನ್ನೊಬ್ಬ ವ್ಯಕ್ತಿಗೆ ಸೂಚಿಸುವುದು ಕೇಳಿಸುತ್ತದೆ.
ಇಂದು, ಶನಿವಾರ ಬೆಳಿಗ್ಗೆ ಕಾಲುವೆಯಿಂದ ದೇಹವನ್ನು ಹೊರತೆಗೆದ 19 ವರ್ಷದ ಸ್ವಾಗತಕಾರಿಣಿಗೆ ಅತಿಥಿಗಳಿಗೆ “ವಿಶೇಷ ಸೇವೆಗಳನ್ನು” ಒದಗಿಸಲು ರೆಸಾರ್ಟ್ ಮಾಲೀಕರು ಒತ್ತಡ ಹೇರುತ್ತಿದ್ದರು ಎಂದು ಉತ್ತರಾಖಂಡದ ಉನ್ನತ ಪೊಲೀಸ್  ಅಧಿಕಾರಿ ಅಶೋಕ್ ಕುಮಾರ್ ಹೇಳಿದ್ದಾರೆ.
ರಿಸೆಪ್ಷನಿಸ್ಟ್‌ನ ಫೇಸ್‌ಬುಕ್ ಸ್ನೇಹಿತೆಯೊಬ್ಬರು ಯುವತಿ ಕೆಲಸ ಮಾಡುತ್ತಿದ್ದ ರೆಸಾರ್ಟ್‌ನ ಮಾಲೀಕ ಪುಲ್ಕಿತ್ ಆರ್ಯ ಬೇಡಿಕೆಯಂತೆ ಅತಿಥಿಗಳೊಂದಿಗೆ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ್ದರಿಂದ ಮಹಿಳೆಯನ್ನು ಕೊಲ್ಲಲಾಯಿತು ಎಂದು ಹೇಳಿದ್ದಾರೆ.
ಅದೇ ರಾತ್ರಿ ಅವಳು ಈ ಸ್ನೇಹಿತೆಗೆ ಕರೆ ಮಾಡಿದ್ದಳು. ಆದರೆ ರಾತ್ರಿ 8:30 ರ ನಂತರ ಅವಳ ಫೋನಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಬಂದಿಲ್ಲ. ಪದೇ ಪದೇ ಪ್ರಯತ್ನಿಸಿದ ನಂತರ ಸ್ನೇಹಿತ ಅವಳನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ಆತ ಪುಲ್ಕಿತ್ ಆರ್ಯನಿಗೆ ಕರೆ ಮಾಡಿದ್ದಾನೆ, ಆಗ ಆತ ಅವಳು ಮಲಗಲು ತನ್ನ ಕೋಣೆಗೆ ಹೋಗಿದ್ದಾಳೆ ಎಂದು ಹೇಳಿದ್ದಾನೆ. ಮರುದಿನ, ಪುಲ್ಕಿತ್‌ಗೆ ಮತ್ತೆ ಕರೆ ಮಾಡಿದಾಗ, ಆತನ ಫೋನ್ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಆಗ ಸ್ನೇಹಿತೆ ರೆಸಾರ್ಟ್‌ನ ಮ್ಯಾನೇಜರ್ ಅಂಕಿತ್‌ಗೆ ಫೋನ್ ಮಾಡಿದಾಗ ಅವಳು ಜಿಮ್‌ನಲ್ಲಿದ್ದಾಳೆ ಎಂದು ಹೇಳಿದ್ದಾನೆ. ನಂತರ ಅವರು ರೆಸಾರ್ಟ್‌ನ ಬಾಣಸಿಗರೊಂದಿಗೆ ಮಾತನಾಡಿದಾಗ ಆ ದಿನ ಮಹಿಳೆಯನ್ನು ನೋಡಿಲ್ಲ ಎಂದು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

ಪೌರಿ ಜಿಲ್ಲೆಯ ಋಷಿಕೇಶ್ ಬಳಿಯ ರೆಸಾರ್ಟ್‌ನಲ್ಲಿ ಯುವ ಸ್ವಾಗತಕಾರಿಣಿ (receptionist)ಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಿಜೆಪಿ ಹಿರಿಯ ನಾಯಕನ ಮಗ ಪುಲ್ಕಿತ್ ಆರ್ಯನನ್ನು ಬಂಧಿಸಲಾಗಿದೆ. ಪುಲ್ಕಿತ್ ಆರ್ಯ ಅಲ್ಲದೆ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಅವರನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬಿಜೆಪಿ ವಿರುದ್ಧ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇಂದು, ಶನಿವಾರ ಮುಂಜಾನೆ, ಪುಲ್ಕಿತ್ ಆರ್ಯ ಅವರ ತಂದೆ – ಹಿರಿಯ ನಾಯಕ ಮತ್ತು ಮಾಜಿ ರಾಜ್ಯ ಸಚಿವ ವಿನೋದ್ ಆರ್ಯ – ಮತ್ತು ಅವರ ಸಹೋದರ ಅಂಕಿತ್ ಆರ್ಯ ಅವರನ್ನು ಬಿಜೆಪಿಯು ಪಕ್ಷದಿಂದ ಉಚ್ಚಾಟಿಸಿದೆ. ರಾಜ್ಯ ಸರ್ಕಾರವು ಅವರನ್ನು ಉತ್ತರಾಖಂಡದ ಮತಿ ಕಲಾ ಮಂಡಳಿಯ ಅಧ್ಯಕ್ಷ ಮತ್ತು ರಾಜ್ಯ ಒಬಿಸಿ ಆಯೋಗದ ಉಪಾಧ್ಯಕ್ಷ ಸ್ಥಾನಗಳಿಂದ ವಜಾ ಮಾಡಿದೆ.

“ಕಾನೂನುಬಾಹಿರವಾಗಿ” ನಿರ್ಮಿಸಲಾಗಿದೆ ಎಂದು ಹೇಳುವ ಮೂಲಕ ಅಧಿಕಾರಿಗಳು ರಾತ್ರೋರಾತ್ರಿ ರೆಸಾರ್ಟಿನ ಭಾಗಗಳನ್ನು ಕೆಡವಿದ್ದಾರೆ. ಇಂದು ಶನಿವಾರ ಬೆಳಿಗ್ಗೆ, ಕೋಪಗೊಂಡ ಸ್ಥಳೀಯರು ಉಳಿದಿರುವ ರೆಸಾರ್ಟ್ ಕಟ್ಟಡದ ಭಾಗಗಳಿಗೆ ಬೆಂಕಿ ಹಚ್ಚಿದರು. ರೆಸಾರ್ಟ್‌ ಅನ್ನು ಸಂಪೂರ್ಣವಾಗಿ ನೆಲಸಮಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಂದು ಮುಂಜಾನೆ ಸ್ಥಳೀಯ ಬಿಜೆಪಿ ಶಾಸಕ ರೇಣು ಬಿಷ್ತ್ ಅವರ ಕಾರನ್ನು ಸ್ಥಳೀಯರು ಧ್ವಂಸಗೊಳಿಸಿದ್ದಾರೆ. ಪೊಲೀಸರು ಆಕೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾಯಿತು ಎಂದು ವರದಿಯಾಗಿದೆ.ಶುಕ್ರವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಕೋಪಗೊಂಡ ಗುಂಪೊಂದು ಪೊಲೀಸರ ಕಾರಿನ ಮೇಲೆ ದಾಳಿ ನಡೆಸಿತ್ತು. ಕಾರಿನ ಗಾಜುಗಳನ್ನು ಒಡೆದು ಮೂವರು ಆರೋಪಿಗಳನ್ನು ಥಳಿಸಿದ್ದಾರೆ.
ಯಾರೇ ಭಾಗಿಯಾಗಿದ್ದರೂ “ಕಠಿಣ ಕ್ರಮ” ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದರು.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement