ಕಾರವಾರ: ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ- ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಮಿತಿಯಿಂದ ಸಂಘ-ಸಂಸ್ಥೆಗಳಿಂದ ಅಹವಾಲು ಸ್ವೀಕಾರ

ಕಾರವಾರ :ಕರ್ನಾಟಕ ಹೈಕೋರ್ಟ್‌ ಆದೇಶದ ಮೇರೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಮಿತಿಯು ಅಂಕೋಲಾ- ಹುಬ್ಬಳ್ಳಿ ರೇಲ್ವೆ ಯೋಜನೆಯಿಂದ ವನ್ಯಜೀವಿಗಳ ಮೇಲೆ ಆಗಬಹದಾದ ಪರಿಣಾಮದ ಕುರಿತು ಸ್ಥಳ ಪರಿಶೀಲನೆ ನಡೆಸಿದ ನಂತರ ವರದಿ ನೀಡಲಾಗುವುದು ಎಂದು ಭಾರತೀಯ ಅರಣ್ಯ ಸೇವಾ ಡಿಐಜಿ ರಾಕೇಶ ಜಗನ್ಯ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಸಭಾಭವನದಲ್ಲಿ ಬುಧವಾರ ನಡೆದ ಅಂಕೊಲಾ-ಹುಬ್ಬಳ್ಳಿ ರೇಲ್ವೆ ಯೋಜನೆಯ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು ಯೋಜನೆಯ ಕುರಿತು ಲಿಖಿತ ರೂಪದಲ್ಲಿ ಹಾಗೂ ಸಂಕ್ಷಿಪ್ತವಾಗಿ ಸಭೆಯಲ್ಲಿ ಅನಿಸಿಕೆಗಳನ್ನು ಮಂಡಿಸಿದ ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಉತ್ತರಕನ್ನಡ ಜಿಲ್ಲೆ ಅಭಿವೃದ್ಧಿಯಿಂದ ವಂಚಿತವಾಗಿದ್ದು, ರೇಲ್ವೆ ಯೋಜನೆಯಿಂದ ಜಿಲ್ಲೆಯ ಜನತೆಗೆ ವ್ಯಾಪಾರ, ಕೈಗಾರಿಕೆಗೆ ಅನುಕೂಲವಾಗಲಿದೆ. ಹಾಗೂ ರಸ್ತೆಗಳಲ್ಲಿ ಸಂಭವಿಸುವಂತಹ ಅಫಘಾತಗಳನ್ನು ತಡೆಗಟ್ಟಲು ಈ ಯೋಜನೆಯು ಅವಶ್ಯಕತೆ ಇದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಪ್ರತಿಪಾದಿಸಿದರು.

ಕಾರವಾರ -ಅಂಕೋಲಾ ವಿಧಾನಸಭೆ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಉತ್ತರಕನ್ನಡ ಜಿಲ್ಲೆಯ ಜನರು ಸರಿಯಾದ ಸಾರಿಗೆ ವ್ಯವಸ್ಥೆ ಕೊರತೆಯಿಂದ ನಿರೋದ್ಯೋಗದ ಸಮಸ್ಯೆ ಎದುರಿಸುತ್ತಿದ್ದು, ರೇಲ್ವೆ ಯೋಜನೆ ಜಿಲ್ಲೆ ಎದುರಿಸುತ್ತಿರುವ ನಿರೋದ್ಯೋಗದ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟದಿಂದ ಮುಕ್ತಗೊಳಿಸಬಹುದು ಎಂದರು.
ನ್ಯಾಯವಾದಿ ಅಕ್ಷಯ ಪಲ್ಲೆ ಮಾತನಾಡಿ, ಹುಬ್ಬಳ್ಳಿ-ಅಂಕೋಲಾ ರೇಲ್ವೆ ಯೋಜನೆಯೂ ಕಾಳಿ ಹುಲಿ ಸಂರಕ್ಷಣೆ ಧಾಮದಿಂದ ದೂರವಿದ್ದು, ಈ ಯೋಜನೆಯಿಂದಾಗಿ ಅರಣ್ಯಜೀವಿಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಬದಲಾಗಿ ಜಿಲ್ಲೆಯ ಜನರಿಗೆ ಉನ್ನತ ಶಿಕ್ಷಣಕ್ಕೆ, ವೈದ್ಯಕೀಯ ಸೌಲಭ್ಯ ಹಾಗೂ ವ್ಯಾಪಾರಕ್ಕೆ ಅತ್ಯಂತ ಅನೂಕುಲವಾಗುತ್ತದೆ ಎಂದು ಹೇಳಿದರು.
ಹುಲಿ ಸಂರಕ್ಷಣಾ ಧಾಮದಿಂದ ಕೊಂಕಣ ರೈಲ್ವೆ ಹಾದು ಹೊಗುತ್ತಿರುವುದರಿಂದ ಯಾವುದೇ ಹಾನಿಯಾಗಿಲ್ಲ, ಅದೇರೀತಿ ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆಯಿಂದ ಸಹ ಕೂಡ ಹಾನಿಯಾಗುವುದಿಲ್ಲ ಮತ್ತು ಅರಣ್ಯ ಪ್ರದೇಶಗಳಲ್ಲಿ ಇನ್ನು ಹೆಚ್ಚು ಸಸಿ ನೆಟ್ಟು ಅರಣ್ಯ ಸಂರಕ್ಷಣೆ ಹಾಗೂ ವನ್ಯ ಜೀವಿಗಳ ಸಂರಕ್ಷಣೆ ಮಾಡಲಾಗುವುದು ಎಂದು ಮಾಜಿ ಶಾಸಕ ಸತೀಶ ಶೈಲ್ ಭರವಸೆ ನೀಡಿದರು.
ಕಾರವಾರ ಪತ್ರಕರ್ತ ಸಂಘದ ಅದ್ಯಕ್ಷ ಟಿ.ಬಿ ಹರಿಕಾಂತ ಮಾತನಾಡಿ, ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳು ಬೇರೆ ರಾಜ್ಯದ ಮಾರುಕಟ್ಟೆಗಳಿಗೆ ರಫ್ತಾಗುತ್ತಿದ್ದು, ಇಲ್ಲಿಯ ಉುತ್ಪನ್ನಗಳನ್ನು ರಾಜ್ಯದ ಮಾರುಕಟ್ಟೆಗಳಿಗೆ ತುಲುಪಿಸಲು ಈ ಯೋಜನೆ ಸಹಾಯಕ ಎಂದರು.

ಪ್ರಮುಖ ಸುದ್ದಿ :-   ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ; ಸಿಎಂ ಡಿಕೆ ಶಿವಕುಮಾರ ಘೋಷಣೆ

ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಮಿತಿಯವರು ನಾಗರಿಕರು, ಅನೇಕ ಸಂಘ ಸಂಸ್ಥೆಗಳ ಸದಸ್ಯರುಗಳಿಂದ ಅಹವಾಲು ಸ್ವೀಕರಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಅಪರ ಜಿಲ್ಲಾಧಿಕಾರಿ ರಾಜು ಮೋಗವೀರ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಮಿತಿ ಸದಸ್ಯರು, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಪೊಲೀಸ್ ವರಿಷ್ಠಾಧಿಕಾರಿ ಸುಮನ್
ಪೆನ್ನೆಕರ್, ನಗರಸಭಾಧ್ಯಕ್ಷ ನಿತಿನ್‌ ಪಿಕಳೆ, ಭಾರತೀಯ ಅರಣ್ಯ ಸೇವಾ ಸಿಡಬ್ಲುಎಲ್‌ಡಬ್ಲು ವಿಜಯಕುಮಾರ, ಡಾ ರಾಜೇಂದ್ರಕುಮಾರ, ಕಾರವಾರ ವಿಭಾಗ ಅರಣ್ಯಾಧಿಕಾರಿ ರಾಘವೆಂದ್ರ ನಾಯ್ಕ್ ಮೊದಲಾದವರಿದ್ದರು.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement