ಈ ವ್ಯಕ್ತಿ ತಪಾಸಣೆ ಮಾಡಿದ ವೈದ್ಯರೇ ಬೆಚ್ಚಿಬಿದ್ದರು…ಯಾಕೆಂದರೆ ಆತನ ಹೊಟ್ಟೆಯಲ್ಲಿತ್ತು ಬರೋಬ್ಬರಿ 62 ಸ್ಟೀಲ್ ಚಮಚಗಳು…!

ಜನರ ಹೊಟ್ಟೆಯಿಂದ ನೂರಾರು ನಾಣ್ಯಗಳು, ಡಜನ್ ಗಟ್ಟಲೆ ಬ್ಯಾಟರಿಗಳು, ವಾಚ್‌ಗಳು ಮತ್ತು ಸೆಲ್ ಫೋನ್‌ಗಳನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರತೆಗೆಯುವುದನ್ನು ಕೇಳಿದ್ದೇವೆ. ಆದರೆ ಉತ್ತರ ಪ್ರದೇಶದ ಈ ವರದಿಯು ಅನೇಕರನ್ನು ಬೆಚ್ಚಿಬೀಳಿಸುವಂತಿದೆ. ಒಂದಲ್ಲ, ಎರಡಲ್ಲ, ಬರೋಬ್ಬರಿ ಆದರೆ ತಲೆಯೇ 62 ಸ್ಟೀಲಿನ ಇಲ್ಲದ ಚಮಚಗಳನ್ನು ಮುಜಾಫರ್‌ನಗರದ 32 ವರ್ಷದ ರೋಗಿಯ ಹೊಟ್ಟೆಯಿಂದ ಹೊರತೆಗೆಯಲಾಗಿದೆ.
ರೋಗಿ ವಿಜಯ ಎಂಬವರು ಸದ್ಯ ಗಂಭೀರ ಸ್ಥಿತಿಯಲ್ಲಿದ್ದು, ಪ್ರಸ್ತುತ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಇದ್ದಾರೆ. ರೋಗಿಯು ಆ ಚಮಚಗಳನ್ನು ತಿಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವೈದ್ಯರಾದ ಡಾ. ರಾಕೇಶ ಖುರಾನಾ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. ”
ರೋಗಿ ಕಳೆದು ಒಂದು ವರ್ಷದಿಂದ ಚಮಚಗಳನ್ನು ತಿನ್ನುತ್ತಿರುವುದಾಗಿ ತಿಳಿಸಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ, ವರದಿಯ ಪ್ರಕಾರ ಸುಮಾರು ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ 62 ಚಮಚಗಳನ್ನು ಹೊರ ತೆಗೆಯಲಾಯಿತು.

ಆದರೆ ವಿಜಯ್ ಆ ಚಮಚಗಳನ್ನು ಏಕೆ ತಿನ್ನುತ್ತಿದ್ದ?
ಮನ್ಸೂರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಪಾರಾ ಗ್ರಾಮದ ನಿವಾಸಿ ವಿಜಯ್ ಮಾದಕ ವ್ಯಸನಿಯಾಗಿದ್ದ ಎಂದು ವರದಿಯಾಗಿದೆ.
ಆತನ ಕುಟುಂಬದವರು ಆತನನ್ನು ಶಾಮ್ಲಿಯಲ್ಲಿರುವ ಮಾದಕ ವ್ಯಸನ ಕೇಂದ್ರಕ್ಕೆ ದಾಖಲಿಸಿದ್ದರು ಎಂದು ಝೀ ನ್ಯೂಸ್ ವರದಿ ಮಾಡಿದೆ. ವರದಿ ಪ್ರಕಾರ, ವಿಜಯ್ ಅವರಿಗೆ ಡಿ-ಅಡಿಕ್ಷನ್ ಸೆಂಟರ್‌ನ ಸಿಬ್ಬಂದಿ ಬಲವಂತವಾಗಿ ಆ ಚಮಚಗಳನ್ನು ತಿನ್ನಿಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ದೂರು ದಾಖಲಾಗಿಲ್ಲವಾದರೂ, ಈ ಚಮಚಗಳು ಮನುಷ್ಯನ ಹೊಟ್ಟೆಯನ್ನು ಹೇಗೆ ತಲುಪಿದವು ಎಂಬುದು ನಿಗೂಢವಾಗಿ ಉಳಿದಿದೆ.
ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ವೈದ್ಯ ಡಾ.ರಾಕೇಶ್ ಖುರಾನಾ, 32 ವರ್ಷದ ರೋಗಿ ವಿಜಯ್ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆತನ ಹೊಟ್ಟೆಯಿಂದ 62 ಚಮಚಗಳನ್ನು ಹೊರತೆಗೆಯಲಾಗಿದೆ. ಚಮಚಗಳನ್ನು ತಾನೇ ತಿನ್ನುತ್ತಿದ್ದೆ ಎಂದು ವಿಜಯ್​ ಹೇಳಿದ್ದಾರೆ. ವ್ಯಕ್ತಿಯ ಆರೋಗ್ಯ ಸದ್ಯ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದ್ವೇಷ ಭಾಷಣ : ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ ; ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement